ಬರ್ಮಿಂಗ್ಹ್ಯಾಮ್: ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ ತಂಡದ ಪರ ಗರಿಷ್ಠ ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಗೆ ಪಾತ್ರರಾಗಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 11ರ ಬಳಗದಲ್ಲಿ ಅವಕಾಶ ಪಡೆಯುವ ಮೂಲಕ ಲೆಜೆಂಡರಿ ಇಂಗ್ಲಿಷ್ ಬ್ಯಾಟ್ಸ್ಮನ್ ಅಲಸ್ಟೈರ್ ಕುಕ್ ಅವರನ್ನು ಹಿಂದಿಕ್ಕಿದ್ದಾರೆ.
ಅಲಸ್ಟೈರ್ ಕುಕ್ ಇಂಗ್ಲೆಂಡ್ ಪರ 161 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಅವರು 33 ಶತಕಗಳ ಸಹಿತ 12,472 ರನ್ ಗಳಿಸಿದ್ದಾರೆ. ಇನ್ನು ಜೇಮ್ಸ್ ಆ್ಯಂಡರ್ಸನ್ 162 ಪಂದ್ಯಗಳನ್ನಾಡುವ ಮೂಲಕ ಇಂಗ್ಲೆಂಡ್ ಪರ ಗರಿಷ್ಠ ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸಿ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಅವರು 616 ವಿಕೆಟ್ ಪಡೆದಿರುವ ವಿಶ್ವದ ಏಕೈಕ ವೇಗದ ಬೌಲರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.