ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್​ನಲ್ಲಿ ಬಡ್ತಿ.. ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿ ಭವಿಷ್ಯದ ಸವಾಲಿಗೆ ಸಿದ್ಧ ಎಂದ ಜಡೇಜಾ! - ಭಾರತ vs ಶ್ರೀಲಂಕಾ ಟಿ20 ಸರಣಿ

ಎಡಗೈ ಆಲ್​ರೌಂಡರ್ ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದರು. ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು 18 ಎಸೆತಗಳಲ್ಲಿ 45 ರನ್​ಗಳಿಸಿ ಸರಣಿ ಜಯಿಸಲು ನೆರವಾಗಿದ್ದರು.

Jadeja relishing batting higher up, thanks skipper Rohit
ರವೀಂದ್ರ ಜಡೇಜಾ

By

Published : Feb 27, 2022, 5:39 PM IST

ಧರ್ಮಾಶಾಲಾ: ಗಾಯದಿಂದ ಚೇತರಿಸಿಕೊಂಡಿರುವ ರವೀಂದ್ರ ಜಡೇಜಾ ತಮಗೆ ಸಿಕ್ಕಿರುವ ನೂತನ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಪಾತ್ರವನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದು, ತಮ್ಮ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿಯನ್ನು ವಹಿಸಿದ, ಬ್ಯಾಟಿಂಗ್​ನಲ್ಲಿ ಬಡ್ತಿ ನೀಡಿದ ಕ್ಯಾಪ್ಟನ್​ ರೋಹಿತ್ ಶರ್ಮಾಗೆ ಧನ್ಯವಾದ ತಿಳಿಸಿದ್ದಾರೆ.

ಎಡಗೈ ಆಲ್​ರೌಂಡರ್ ಮೊಣಕಾಲು ಗಾಯದಿಂದ ಚೇತರಿಸಿಕೊಂಡು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದರು. ಧರ್ಮಶಾಲಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು 18 ಎಸೆತಗಳಲ್ಲಿ 45 ರನ್​ಗಳಿಸಿ ಸರಣಿ ಜಯಿಸಲು ನೆರವಾಗಿದ್ದರು.

ಇದನ್ನೂ ಓದಿ:ಜಮ್ಮು-ಕಾಶ್ಮೀರ್ ವಿರುದ್ಧ ಕರ್ನಾಟಕಕ್ಕೆ 117 ರನ್​ಗಳ ಭರ್ಜರಿ ಗೆಲುವು

ಹೌದು, ನಾನು 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಅನ್ನು ತುಂಬಾ ಚೆನ್ನಾಗಿ ಎಂಜಾಯ್​ ಮಾಡುತ್ತಿದ್ದೇನೆ. ನಾನು ನನ್ನ ಸಮಯವನ್ನು ತೆಗೆದುಕೊಂಡು ಮತ್ತು ಪರಿಸ್ಥಿತಿಗೆ ತಕ್ಕಂತೆ ನನ್ನ ಇನ್ನಿಂಗ್ಸ್​ಅನ್ನು ವೇಗಗೊಳಿಸಬಲ್ಲೆ ಎಂದು ಪಂದ್ಯ ಮುಗಿದ ಬಳಿಕ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.

"ನಾನು ರೋಹಿತ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ನನ್ನನ್ನು ನಂಬುತ್ತಾರೆ ಮತ್ತು ನಾನು ಮೈದಾನದಲ್ಲಿ ಹೋಗಿ ನನ್ನ ತಂಡಕ್ಕಾಗಿ ರನ್​ಗಳಿಸಬಲ್ಲೆ ಎಂದು ಅವರಿಗೆ ಭರವಸೆಯಿದೆ. ಹಾಗಾಗಿ ಭವಿಷ್ಯದಲ್ಲಿ ನನಗೆ ಯಾವಾಗ ಅವಕಾಶ ಸಿಗುತ್ತದೆಯೋ, ಅಂದು ಅತ್ಯುತ್ತಮವಾದದನ್ನು ನೀಡುವುದಕ್ಕೆ ಬಯಸುತ್ತೇನೆ ಮತ್ತು ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಿ ತಂಡಕ್ಕೆ ಪಂದ್ಯವನ್ನು ಗೆದ್ದುಕೊಡಲು ಬಯಸುತ್ತೇನೆ " ಎಂದು ಸ್ಟಾರ್​ ಆಲ್​ರೌಂಡರ್​ ತಿಳಿಸಿದ್ದಾರೆ.

33 ವರ್ಷದ ಆಲ್​ರೌಂಡರ್​ ಮೊಣಕಾಲು ಗಾಯಕ್ಕೆ ಒಳಗಾದ ನಂತರ ದಕ್ಷಿಣ ಆಫ್ರಿಕಾ ಪ್ರವಾಸ ಮತ್ತು ವೆಸ್ಟ್​ ಇಂಡೀಸ್ ವಿರುದ್ಧದ ಸೀಮಿತ ಓವರ್​ಗಳ ಸರಣಿಯನ್ನು ತಪ್ಪಿಸಿಕೊಂಡಿದ್ದರು.

ಇದನ್ನೂ ಓದಿ:ಭಾರತೀಯ ಆಟಗಾರರು ತೆರಳಬೇಕಿದ್ದ ಬಸ್​​ನಲ್ಲಿ 2 ಬುಲೆಟ್​ ಶೆಲ್​ ಪತ್ತೆ!

ABOUT THE AUTHOR

...view details