ಕರ್ನಾಟಕ

karnataka

ETV Bharat / sports

ಕೆಕೆಆರ್ ಬಯಸುವ ಅಗ್ರೆಸ್ಸಿವ್ ಬ್ರ್ಯಾಂಡ್ ಆಟವನ್ನು ಅಯ್ಯರ್ ಪ್ರದರ್ಶಿಸಿದರು: ಮಾರ್ಗನ್ ಮೆಚ್ಚುಗೆ

ಗಿಲ್​​ 34 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 48 ಮತ್ತು ವೆಂಕಟೇಶ್​ 27 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್‌ಸಹಿತ 41 ರನ್​ಗಳಿಸಿ ಕೆಕೆಆರ್​ಗೆ 10 ಓವರ್​ಗಳಲ್ಲಿ ಗೆಲುವು ತಂದುಕೊಟ್ಟರು. ಇದು ಕೆಕೆಆರ್ ಆಡಲು ಬಯಸುವ ಆಟ ಎಂದು ನಾಯಕ ಮಾರ್ಗನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Morgan on Iyer's aggressive knock
ಇಯಾನ್ ಮಾರ್ಗನ್​

By

Published : Sep 21, 2021, 5:27 PM IST

ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಧ್ಯಪ್ರದೇಶದ ಬ್ಯಾಟ್ಸ್​ಮನ್​ ವೆಂಕಟೇಶ್ ಅಯ್ಯರ್​ ಅವರನ್ನು ನಾಯಕ ಮಾರ್ಗನ್​ ಪ್ರಶಂಸಿಸಿದ್ದು, ಆತನ ಆಟ ಕೋಲ್ಕತ್ತಾ ನೈಟ್​ ರೈಡರ್ಸ್​ ಆಡಲು ಬಯಸುವ ಆಕ್ರಮಣಕಾರಿ ಬ್ರ್ಯಾಂಡ್ ಆಫ್​ ಕ್ರಿಕೆಟ್​ ಅನ್ನು ಸೂಚಿಸಿದೆ ಎಂದು ತಿಳಿಸಿದ್ದಾರೆ.

ಬೌಲರ್​ಗಳು ಆರ್​ಸಿಬಿಯನ್ನು ಕೇವಲ 92 ರನ್​ಗಳಿಗೆ ನಿಯಂತ್ರಿಸಿದರೆ, ಆರಂಭಿಕರಾದ ಅಯ್ಯರ್ ಅಜೇಯ 41 ಮತ್ತು ಶುಬ್ಮನ್​ ಗಿಲ್​ 48 ರನ್​ಗಳಿಸಿ ಕೆಕೆಆರ್​ಗೆ 9 ವಿಕೆಟ್​ಗಳ ಜಯ ತಂದುಕೊಟ್ಟರು. ಗಿಲ್​ ​ 34 ಎಸೆತಗಳಲ್ಲಿ 6 ಬೌಂಡರಿ ಮತ್ತು ಒಂದು ಸಿಕ್ಸರ್‌ಸಹಿತ 48 ಮತ್ತು ವೆಂಕಟೇಶ್​ 27 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್​ ಸಹಿತ 41 ರನ್​ಗಳಿಸಿ ಕೆಕೆಆರ್​ಗೆ 10 ಓವರ್​ಗಳಲ್ಲಿ ಗೆಲುವು ತಂದುಕೊಟ್ಟರು.

ವೆಂಕಿ ಆರಂಭಿಕನಾಗಿ ಬಂದು, ಆ ರೀತಿ ಪ್ರದರ್ಶನ ತೋರಿದ್ದು ಅದ್ಭುತವಾಗಿತ್ತು ಎಂದು ನಾನು ಭಾವಿಸುತ್ತೇನೆ. ಖಂಡಿತವಾಗಿ ಅದು ನಾವು ಆಡಲು ಬಯಸುವ ಮಾದರಿಯಾಗಿದೆ. ನಾವು ನಮ್ಮ ಗುಂಪಿನಲ್ಲಿ ಆ ರೀತಿಯ ಹಲವಾರು ಪ್ರತಿಭೆಗಳನ್ನು ಒಳಗೊಂಡಿದ್ದೇವೆ ಎಂದು ಮಾರ್ಗನ್ ಪಂದ್ಯದ ನಂತರ ನಡೆದ ಮಾಧ್ಯಮ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅಯ್ಯರ್​ ತುಂಬಾ ಅಗ್ರೆಸ್ಸಿವ್​ ಆಗಿದ್ದು, ಇನಿಂಗ್ಸ್ ಉದ್ದಕ್ಕೂ ತೀವ್ರ ನಿಯಂತ್ರಣದೊಂದಿಗೆ ಆಡಲು ಯಶಸ್ವಿಯಾದರು. ಶುಬ್ಮನ್ ಗಿಲ್ ಜೊತೆಗಿನ ಅವರ ಆರಂಭಿಕ ಜೊತೆಯಾಟ ನೋಡಲು ಸುಂದರವಾಗಿತ್ತು ಎಂದು ಮಾರ್ಗನ್​ ಹೇಳಿದರು.

ಇದನ್ನೂ ಓದಿ: IPL: ಆರ್‌ಸಿಬಿ ವಿರುದ್ಧ ಕೆಕೆಆರ್‌ಗೆ ಅಮೋಘ ಗೆಲುವು

ABOUT THE AUTHOR

...view details