ಕರ್ನಾಟಕ

karnataka

ETV Bharat / sports

5 ವರ್ಷಗಳ ನಂತರ ಐಪಿಎಲ್​ಗೆ ಮರಳುವ ಸುಳಿವು ಕೊಟ್ಟ ಮಿಚೆಲ್ ಸ್ಟಾರ್ಕ್​ - ಇಂಡಿಯನ್ ಪ್ರೀಮಿಯರ್ ಲೀಗ್​

ಆಸೀಸ್​ನ ಬೌಲಿಂಗ್ ಶಕ್ತಿಯಾಗಿರುವ ಸ್ಟಾರ್ಕ್​ 2014 ಮತ್ತು 15ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದರು. ಅವರು 27 ಪಂದ್ಯಗಳಿಂದ 7.16 ಎಕಾನಮಿಯಲ್ಲಿ 34 ವಿಕೆಟ್ ಪಡೆದಿದ್ದರು.

Mitchell Starc ipl come back
ಮಿಚೆಲ್ ಸ್ಟಾರ್ಕ್​ ಐಪಿಎಲ್

By

Published : Jan 12, 2022, 5:52 PM IST

ಹೋಬರ್ಟ್​: ಗಾಯದ ನಡುವೆರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಉಳಿಸಿಕೊಳ್ಳುವುದಕ್ಕೆ ಮತ್ತು ಟೆಸ್ಟ್​ ಕ್ರಿಕೆಟ್​​ಗೆ ಹೆಚ್ಚಿನ ಮಹತ್ವ ನೀಡಿ ಕಳೆದ 5 ವರ್ಷಗಳಿಂದ ಐಪಿಎಲ್ ತೊರೆದಿದ್ದ ಆಸೀಸ್​ ವೇಗಿ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ಮುಂಬರುವ ಐಪಿಎಲ್​ನಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೊನೆಯ ಬಾರಿ 2015ರ ಐಪಿಎಲ್​ನಲ್ಲಿ ಆಡಿದ್ದ ಸ್ಟಾರ್ಕ್, ​"ಐಪಿಎಲ್​ ಮೆಗಾ ಹರಾಜಿನಲ್ಲಿ ತಮ್ಮ ಹೆಸರು ಸೇರಿಸಲು ಇನ್ನೂ ನಿರ್ಧಾರ ಮಾಡಿಲ್ಲ. ಹೆಸರನ್ನು ನೋಂದಾಯಿಸಿಕೊಳ್ಳಲು ಶುಕ್ರವಾರ ಅಂತಿಮ ದಿನವಾಗಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ತರಬೇತಿಗೆ ತೆರಳುವ ಮುನ್ನ ಮುಗಿಸಬಹುದು. ಆದರೆ ಅದಕ್ಕೆ ಎರಡು ದಿನಗಳ ಸಮಯವಿದೆ. ಮುಂದಿನ ವೇಳಾಪಟ್ಟಿಯನ್ನು ಗಮನಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದೇನೆ" ಎಂದು ಕ್ರಿಕೆಟ್​ ಆಸ್ಟ್ರೇಲಿಯಾ ವೆಬ್​ಸೈಟ್​ಗೆ ತಿಳಿಸಿದ್ದಾರೆ.

ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಜನವರಿ 13ರ ಒಳಗೆ ಐಪಿಎಲ್​ ಮೆಗಾ ಹರಾಜಿಗೆ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ. ಆಸೀಸ್​ನ ಬೌಲಿಂಗ್ ಶಕ್ತಿಯಾಗಿರುವ ಸ್ಟಾರ್ಕ್​ 2014 ಮತ್ತು 15ರ ಆವೃತ್ತಿಯಲ್ಲಿ ಆರ್​ಸಿಬಿ ಪರ ಆಡಿದ್ದರು. ಅವರು 27 ಪಂದ್ಯಗಳಿಂದ 7.16 ಎಕಾನಮಿಯಲ್ಲಿ 34 ವಿಕೆಟ್ ಪಡೆದಿದ್ದರು.

"ಕಳೆದ 6 ವರ್ಷಗಳಿಂದ ನಾನು ಐಪಿಎಲ್‌ ಆಡಿಲ್ಲ. ಆದರೆ ಕೆಲವು ವರ್ಷಗಳಿಂದ ಟಿ20 ಕ್ರಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ವರ್ಷ ಆಸ್ಟ್ರೇಲಿಯಾದಲ್ಲೇ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಕೂಡ ನಡೆಯಲಿರುವುದರಿಂದ, ವೇಳಾಪಟ್ಟಿಯ ಕಡೆಗೆ ಗಮನ ಕೊಡಬೇಕಾಗುತ್ತದೆ. ಜೊತೆಗೆ ಪಾಕಿಸ್ತಾನ ಪ್ರವಾಸಕ್ಕೂ ಮುನ್ನ ತವರಿನಲ್ಲಿ ಕೆಲವು ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳನ್ನಾಡಲಿದ್ದೇವೆ. ಹಾಗಾಗಿ ಐಪಿಎಲ್‌ ಆಡುವ ಬಗ್ಗೆ ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ಸ್ಟಾರ್ಕ್​ ತಿಳಿಸಿದ್ದಾರೆ.

2022ರ ಐಪಿಎಲ್​ನಿಂದ 8ರ ಬದಲು 10 ತಂಡಗಳು ಸ್ಪರ್ಧಿಸಲಿವೆ. ಹಾಗಾಗಿ ಹೆಚ್ಚು ಆಟಗಾರರಿಗೆ ನಗದು ಸಮೃದ್ಧ ಲೀಗ್​ನಲ್ಲಿ ಅವಕಾಶಗಳು ಸಿಗಲಿವೆ. ವೇಗಿಗಳಿಗೆ ಲೀಗ್​ನಲ್ಲಿ ಬೇಡಿಕೆ ಹೆಚ್ಚಿರುವುದರಿಂದ ಸ್ಟಾರ್ಕ್​ ಮೆಗಾ ಹರಾಜಿನಲ್ಲಿ ದೊಡ್ಡ ಮೊತ್ತ ಪಡೆದರೆ ಅಚ್ಚರಿಯೇನಿಲ್ಲ.

ಇದನ್ನೂ ಓದಿ:ಐಪಿಎಲ್‌ 2022: ರಿಟೈನ್​​ ಆಟಗಾರರನ್ನು ಘೋಷಿಸಲು ಹೊಸ ಫ್ರಾಂಚೈಸಿಗಳಿಗೆ ಜನವರಿ 22 ಡೆಡ್​ಲೈನ್​

ABOUT THE AUTHOR

...view details