ಮೆಲ್ಬೋರ್ನ್, ಆಸ್ಟ್ರೇಲಿಯಾ:ಎಡಗೈ ಸ್ಪಿನ್ನರ್ ಆಶ್ಟನ್ ಅಗರ್ ಅವರು ಭಾರತದ ಟೆಸ್ಟ್ ಪ್ರವಾಸದಿಂದ ಪಂದ್ಯವನ್ನು ಆಡದೆ ಹಿಂತಿರುಗಿದ ನಂತರ ಯಾವುದೇ 'ಕೆಟ್ಟ ಭಾವನೆಗಳನ್ನು' ಹೊಂದಿಲ್ಲ ಎಂಬುದು ತಿಳಿದು ಬಂದಿದೆ. ಏಕೆಂದರೆ ಅವರು ಉನ್ನತ ಮಟ್ಟದ ಕ್ರಿಕೆಟ್‌ನಲ್ಲಿರುವ ಸ್ಥಿತಿಗತಿ ಬಗ್ಗೆ ಸಾಕಷ್ಟು ತಿಳಿದಿದ್ದಾರೆ.
ಅಗರ್ ಅವರು ಆಸ್ಟ್ರೇಲಿಯಾದ ಹಿರಿಯ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿ ಭಾರತ ಪ್ರವಾಸಕ್ಕೆ ಬಂದಿದ್ದರು. ಆದರೆ, ಮೊದಲ ಎರಡು ಟೆಸ್ಟ್‌ಗಳಿಗೆ ಆಡುವ 11ರ ಬಳಗದಲ್ಲಿ ಸ್ಥಾನ ಕಳೆದುಕೊಂಡಿದ್ದರು. ಬಳಿಕ ಅವರು ವಾಪಸ್ ತಮ್ಮ ಸ್ವದೇಶಕ್ಕೆ ಮರಳಿದರು. ಮೊದಲ ಎರಡು ಟೆಸ್ಟ್‌ಗಳಲ್ಲಿ ಆಫ್ - ಸ್ಪಿನ್ನರ್ ಟಾಡ್ ಮರ್ಫಿ ಮತ್ತು ಎಡಗೈ ಆಟಗಾರ ಮ್ಯಾಥ್ಯೂ ಕುಹ್ನೆಮನ್‌ಗಿಂತ ಅವರಿಗೆ ಆದ್ಯತೆ ನೀಡಲಾಯಿತು. ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆ ಇಬ್ಬರು ಆಟಗಾರರು ತಂಡದಲ್ಲಿ ಮುನ್ನಡೆಯುವ ಅವಕಾಶ ಸಿಕ್ಕಿತು.
29 ವರ್ಷದ ಅಗರ್ ದಕ್ಷಿಣ ಆಸ್ಟ್ರೇಲಿಯಾ ವಿರುದ್ಧದ ಮಾರ್ಷ್ ಕಪ್ ಫೈನಲ್‌ನಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ಐದು ವಿಕೆಟ್‌ಗಳನ್ನು ಪಡೆಯುವ ಮೂಲಕ ಮಿಂಚಿದ್ದರು. ಸ್ವದೇಶಕ್ಕೆ ತೆರಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅಗರ್, ನಾನು ಚೆನ್ನಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ನನಗೆ ಅನಿಸಿತು..ಅದರ ಮೇಲೆ ನಿಗಾ ವಹಿಸುತ್ತಿದ್ದು, ನನ್ನ ಬೌಲಿಂಗ್ನಲ್ಲಿ ಸುಧಾರಣೆ ತರಲು ಇದು ನನಗೆ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದರು.
ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗಿಲ್ಲ ಎಂದು ನನಗೆ ಯಾವುದೇ ಕೆಟ್ಟ ಭಾವನೆಗಳು ಇಲ್ಲ. ನಮ್ಮ ತಂಡದಲ್ಲಿ ನನಗೆ ಉತ್ತಮ ಬೆಂಬಲ ಸಿಕ್ಕಿದೆ. ಅವರು ನನ್ನೊಂದಿಗೆ ನಿರಂತರ ಸಂವಹನ ನಡೆಸುತ್ತಿದ್ದಾರೆ. ಆದ್ದರಿಂದ ಎಲ್ಲವೂ ಉತ್ತಮವಾಗಿದೆ. ನಾನು ಹತ್ತು ವರ್ಷಗಳಿಂದ ವೃತ್ತಿಪರ ಕ್ರಿಕೆಟಿಗನಾಗಿದ್ದೇನೆ. ಆದ್ದರಿಂದ ನಾನು ಆಟ ಪ್ರಾರಂಭಿಸಿದಾಗಿನಿಗಿಂತ ಹೆಚ್ಚು ಹೊಂದಿಕೊಳ್ಳುತ್ತೇನೆ. ಇದು ಕಠಿಣ ಕ್ರೀಡೆಯಾಗಿದೆ ಎಂದು ಹೇಳಿದರು.