ಶಾರ್ಜಾ :ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ತಂಡದ ಬ್ಯಾಟ್ಸ್ಮನ್ಗಳು ತಮ್ಮ ಸಾಮರ್ಥ್ಯಕ್ಕ ತಕ್ಕಂತೆ ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರೆಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 129 ರನ್ ಗಳಿಸಿತ್ತು. ಸೂರ್ಯಕುಮಾರ್ ಯಾದವ್ 33 ರನ್ಗಳಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್ 20ರ ಗಡಿದಾಟಲಿಲ್ಲ. ಆದರೂ ಬೌಲರ್ಗಳ ಪ್ರದರ್ಶನದಿಂದ ಮುಂಬೈ ಕೊನೆಯ ಓವರ್ವರೆಗೂ ಪೈಪೋಟಿ ನೀಡಿತು.
ಮುಂಬೈ ಇಂಡಿಯನ್ಸ್ ಈ ಸೋಲಿನೊಂದಿಗೆ 12 ಪಂದ್ಯಗಳಿಂದ 10 ಅಂಕಗಳಿಸಿ 6ನೇ ಸ್ಥಾನದಲ್ಲಿದೆ. ಇದೀಗ ಪ್ಲೇ ಆಫ್ ಪ್ರವೇಶಿಸಬೇಕಾದರೆ ಮುಂದಿನ ಎರಡು ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರ ಜತೆಗೆ ತಮ್ಮ ಪ್ರತಿಸ್ಪರ್ಧಿಗಳಾದ ಪಂಜಾಬ್ ಮತ್ತು ಕೆಕೆಆರ್ ತಂಡಗಳು ಸೋಲಲಿ ಎಂದು ಕೋರಿಕೊಳ್ಳಬೇಕಾಗಿದೆ.
"ನಿಮ್ಮ ಬ್ಯಾಟರ್ಸ್ ಬೋರ್ಡ್ನಲ್ಲಿ ಉತ್ತಮ ರನ್ ಕಲೆಯಾಗದಿದ್ದರೆ, ಪಂದ್ಯಗಳನ್ನು ಗೆಲ್ಲುವುದು ಕಷ್ಟವಾಗುತ್ತದೆ. ನಾನು ಅದನ್ನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ. ನಮ್ಮ ಮಧ್ಯಮ ಕ್ರಮಾಂಕದ ಯೋಜನೆಗಳನ್ನು ಕಾರ್ಯಗತಗೊಳಿಸಲು ವಿಫಲರಾದೆವು, ಇದು ನಮಗೆ ನಿರಾಶೆ ತಂದಿದೆ. ನಾವು ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲಿಲ್ಲ, ಆಶಾದಾಯಕವಾಗಿ ಮುಂದಿನ ಎರಡು ಪಂದ್ಯದಲ್ಲಿ ನಮ್ಮ ನೈಜ ಆಟ ಆಡುತ್ತೇವೆ " ಎಂದು ರೋಹಿತ್ ಪಂದ್ಯದ ನಂತರ ಹೇಳಿದ್ದಾರೆ.
ಈ ಮೈದಾನದಲ್ಲಿ ನಡೆದಿರುವ ಪಂದ್ಯಗಳನ್ನು ಸಾಕಷ್ಟು ನೋಡಿದ್ದೇವೆ. ಈ ವಿಕೆಟ್ನಲ್ಲಿ 170-180 ರನ್ಗಳಿಸುವುದಕ್ಕೆ ಅಸಾಧ್ಯವೆಂದು ನಮಗೆ ತಿಳಿದಿತ್ತು. ಅದಕ್ಕಾಗಿ ನಾವು 140ರನ್ ಇಲ್ಲಿ ಉತ್ತಮ ಸ್ಕೋರ್ ಎಂದು ಭಾವಿಸಿದ್ದೆವು. ಆದರೆ, ಜೊತೆಯಾಟಗಳು ನಾವು ಅಂದುಕೊಂಡಂತೆ ಮೂಡಿ ಬರಲಿಲ್ಲ ಎಂದು ಮುಂಬೈ ನಾಯಕ ಹೇಳಿದ್ದಾರೆ.
ಇದನ್ನು ಓದಿ:ಶೀಘ್ರದಲ್ಲಿ ಬೌಲಿಂಗ್ಗೆ ಮರಳಲಿದ್ದೇನೆ : ವಿಶ್ವಕಪ್ಗೂ ಮುನ್ನ ಗುಡ್ ನ್ಯೂಸ್ ನೀಡಿದ ಪಾಂಡ್ಯ