ಸಿಡ್ನಿ (ಆಸ್ಟ್ರೇಲಿಯಾ) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಭಾರತೀಯರು ಆಮ್ಲಜನಕಕ್ಕಾಗಿ ಹೋರಾಡುವುದನ್ನು ಮತ್ತು ಕುಟುಂಬ ಸದಸ್ಯರನ್ನು ಅಂತ್ಯಸಂಸ್ಕಾರ ಮಾಡಲು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುವುದನ್ನು ನೋಡಿದೆ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.
ಬೀದಿಗಳಲ್ಲಿ ಜನರು ತಮ್ಮ ಕುಟುಂಬಸ್ಥರನ್ನು ಅಂತ್ಯಸಂಸ್ಕಾರ ಮಾಡಲು ಸಾಲುಗಟ್ಟಿ ನಿಂತಿದ್ದಾರೆ ಮತ್ತು ಒಂದೆರಡು ಬಾರಿ ಮೈದಾನಕ್ಕೆ ಹೋಗುವಾಗ ನಾವು ನೋಡಿದ್ದೆವು ಎಂದು ಫಾಕ್ಸ್ ಸ್ಟೋರ್ಟ್ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
ಕೋವಿಡ್ ವಿಪರೀತವಾದ ವೇಳೆ ಮೇ 4ರಂದು ಐಪಿಎಲ್ ಟೂರ್ನಿಯನ್ನು ರದ್ಧು ಮಾಡಲಾಯಿತು. ಆದರೆ, ಯುಎಇಯಲ್ಲಿ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಸಲು ನಿರ್ಧರಿಸಲಾಗಿದೆ.