ಕರ್ನಾಟಕ

karnataka

ETV Bharat / sports

ನನಗೆ ಕೆರಿಯರ್ ಮುಖ್ಯ: ಐಪಿಎಲ್​ನಿಂದ ದೂರ ಉಳಿಯುತ್ತೇನೆಂದ ಜೇಮಿಸನ್​! - ಐಪಿಎಲ್ ಮೆಗಾ ಹರಾಜಿನಿಂದ ಜೇಮಿಸನ್ ಹೊರಕ್ಕೆ

2022ರ ಆವೃತ್ತಿಯನ್ನು ಮಾತ್ರ ಮಿಸ್​ ಮಾಡಿಕೊಳ್ಳಲಿದ್ದು, ಭವಿಷ್ಯದಲ್ಲಿ ಇಂಡಿಯನ್ ಟಿ20 ಲೀಗ್​ನಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ. 2021ರ ಆವೃತ್ತಿಯಲ್ಲಿ ಜೇಮಿಸನ್ ​ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದರು. ಬರೋಬ್ಬರಿ 15 ಕೋಟಿ ರೂ ಪಡೆದಿದ್ದ ಅವರು 9 ಪಂದ್ಯಗಳಲ್ಲಿ 9.60 ಎಕಾನಿಮಿಯಲ್ಲಿ 9 ವಿಕೆಟ್​ ಪಡೆದಿದ್ದರು.

Jamieson on absence from IPL Auction
ಕೈಲ್ ಜೇಮಿಸನ್ ಐಪಿಎಲ್ 2022

By

Published : Feb 3, 2022, 4:23 PM IST

ಆಕ್ಲೆಂಡ್​:ನ್ಯೂಜಿಲ್ಯಾಂಡ್​ ತಂಡದ ಆಲ್​ರೌಂಡರ್​ ಕೈಲ್ ಜೇಮಿಸನ್ ತಮ್ಮ ಕೌಶಲ್ಯದ ಕಡೆ ಹೆಚ್ಚಿನ ಗಮನ ನೀಡಲು ಮತ್ತು ಮೆನಯಲ್ಲಿ ಹೆಚ್ಚಿನ ಸಮಯ ಕಳೆಯುವುದಕ್ಕಾಗಿ 2022ರ ಐಪಿಎಲ್ ಮೆಗಾ ಹರಾಜಿನಿಂದ ದೂರ ಉಳಿಯುವುದಾಗಿ ಹೇಳಿಕೊಂಡಿದ್ದಾರೆ.

2022ರ ಆವೃತ್ತಿಯನ್ನು ಮಾತ್ರ ಮಿಸ್​ ಮಾಡಿಕೊಳ್ಳಲಿದ್ದು, ಭವಿಷ್ಯದಲ್ಲಿ ಇಂಡಿಯನ್ ಟಿ20 ಲೀಗ್​ನಲ್ಲಿ ಆಡುವ ಭರವಸೆ ವ್ಯಕ್ತಪಡಿಸಿದ್ದಾರೆ. 2021ರ ಆವೃತ್ತಿಯಲ್ಲಿ ಜೇಮಿಸನ್ ​ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಆಡಿದ್ದರು. ಬರೋಬ್ಬರಿ 15 ಕೋಟಿ ರೂ ಪಡೆದಿದ್ದ ಅವರು 9 ಪಂದ್ಯಗಳಲ್ಲಿ 9.60 ಎಕಾನಿಮಿಯಲ್ಲಿ 9 ವಿಕೆಟ್​ ಪಡೆದಿದ್ದರು.

" ಹೌದು, ನಾನು ಈ ಬಾರಿ ಐಪಿಎಲ್​ ಆಡದಿರಲು ಒಂದೆರಡು ಕಾರಣಗಳಿವೆ. ಮೊದಲನೇಯದಾಗಿ ಕಳೆದ 12 ತಿಂಗಳು ಐಸೋಲೇಷನ್‌, ಕ್ವಾರಂಟೈನ್​ ಮತ್ತು ಬಯೋ ಬಬಲ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದು ತುಂಬಾ ಸವಾಲಾಗಿತ್ತು. ಮುಂದಿನ 12 ತಿಂಗಳು ವೇಳಾಪಟ್ಟಿಯನ್ನು ನೋಡಿದಾಗ ನನಗೆ ಈ ಬಿಡುವು ಮುಖ್ಯವಾಗಿದೆ. ಹಾಗಾಗಿ 6 ರಿಂದ 8 ವಾರಗಳ ಸಮಯವನ್ನು ಮನೆಯಲ್ಲಿ ಕಳೆಯಲು ಬಯಸಿದ್ದೇನೆ " ಎಂದು ಜೇಮಿಸನ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: CSK, MI ಹಿಂದಿಕ್ಕಿ ಏಷ್ಯಾದ ಜನಪ್ರಿಯ ತಂಡ ಎನಿಸಿಕೊಂಡ RCB!

"ಎರಡನೇದಾಗಿ, ಕಳೆದ 12 ಮತ್ತು 14 ತಿಂಗಳಿಂದ ನಾನು ಕ್ರಿಕೆಟ್​ನಲ್ಲಿ ಏನು ಮಾಡಿದ್ದೇನೆಂಬುದನ್ನು ಅರ್ಥ ಮಾಡಿಕೊಂಡಿರುವುದೇನೆಂದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಾನಿನ್ನೂ ಯುವ ಆಟಗಾರ. ಹಾಗಾಗಿ ನನ್ನ ಆಟದ ಮೇಲೆ ಮತ್ತಷ್ಟು ಕೆಲಸ ಮಾಡಬೇಕಾದ ಅಗತ್ಯವಿದೆ. ಆದರೆ ನ್ಯೂಜಿಲೆಂಡ್‌ ಪರವಾಗಿ ಮೂರೂ ಸ್ವರೂಪದಲ್ಲಿಯೂ ಆಡಬೇಕೆಂದರೆ ನಾನು ನನ್ನ ಆಟವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ. ಹಾಗಾಗಿ ನನ್ನ ಆಟದ ಮೇಲೆ ಹೆಚ್ಚಿನ ಕೆಲಸ ಮಾಡಬೇಕು ಹಾಗೂ ಎಲ್ಲಾ ಸಮಯದಲ್ಲಿ ಆಡಲು ಪ್ರಯತ್ನಿಸಬೇಕು. ಈ ಎಲ್ಲಾ ಅಂಶಗಳಲ್ಲಿ ಸುಧಾರಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದ್ದು, ಮನೆಯಲ್ಲಿದ್ದು ನನ್ನ ಆಟದ ಮೇಲೆ ಕೆಲಸ ಮಾಡಲಿದ್ದೇನೆ " ಎಂದು ಆಲ್​ರೌಂಡರ್​ ಹೇಳಿದರು.

2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಜೇಮಿಸನ್ 12 ಟೆಸ್ಟ್​ ಪಂದ್ಯಗಳಲ್ಲಿ 60 ವಿಕೆಟ್​ ಪಡೆದಿದ್ದಾರೆ. 5 ಏಕದಿನ ಪಂದ್ಯಗಳಲ್ಲಿ 5, 8 ಟಿ20 ಪಂದ್ಯಗಳನ್ನಾಡಿದ್ದು 4 ವಿಕೆಟ್​ ಪಡೆದಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್​ ಸರಣಿ; ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್​ ಆಯೋಜನೆ ಖಚಿತಪಡಿಸಿದ ಗಂಗೂಲಿ

ABOUT THE AUTHOR

...view details