ದುಬೈ:ಈ ವರ್ಷದ ಐಸಿಸಿ ಟಿ-20 ವಿಶ್ವಕಪ್ ಸ್ಪಿನ್ನರ್ಗಳ ವಿಶ್ವಕಪ್ ಆಗಲಿದೆ ಎಂದು ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅಭಿಪ್ರಾಯಪಟ್ಟಿದ್ದು, ಒಂದು ವೇಳೆ, ತಮ್ಮ ತಂಡ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಒಳ್ಳೆ ಸ್ಕೋರ್ ಮಾಡಿದರೆ ಚುಟುಕು ಮಹಾಸಮರದಲ್ಲಿ ಯಾವುದೇ ತಂಡಕ್ಕಾದರೂ ಸೋಲುಣಿಸಲಬಲ್ಲೆವು ಎಂದು ತಿಳಿಸಿದ್ದಾರೆ.
ಭಾರತದಲ್ಲಿ ನಡೆಯಬೇಕಿದ್ದ ಟಿ-20 ವಿಶ್ವಕಪ್ ಕೋವಿಡ್ 19 ಕಾರಣದಿಂದ ಯುಎಇಗೆ ವರ್ಗಾವಣೆಗೊಂಡಿದೆ. ಕ್ವಾಲಿಫೈಯರ್ ಪಂದ್ಯಗಳು ಒಮಾನ್ನಲ್ಲೂ, ಸೂಪರ್12ರಿಂದ ಫೈನಲ್ವರೆಗೆ ಯುಎಇಯಲ್ಲೂ ನಡೆಯಲಿವೆ. ಈ ಕಾರಣದಿಂದ ರಶೀದ್ 2021ರ ವಿಶ್ವಕಪ್ ಸ್ಪಿನ್ನರ್ಗಳಿಗೆ ಸೇರಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.
2017ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ರಶೀದ್ ಖಾನ್ ಅವರನ್ನು ಆಯ್ಕೆ ಮಾಡಿಕೊಂಡಾಗಿನಿಂದ ಟಿ-20 ಕ್ರಿಕೆಟ್ನಲ್ಲಿ ರಶೀದ್ ವಿಶ್ವದ ಅಗ್ರ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ.
ಅವರು ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವದಾದ್ಯಂತ ಹಲವು ಲೀಗ್ಗಳಿಂದ ಒಟ್ಟು 333 ವಿಕೆಟ್ ಪಡೆದುಕೊಂಡಿದ್ದಾರೆ. ಎರಡನೇ ಬಾರಿಗೆ ಟಿ20 ವಿಶ್ವಕಪ್ ಆಡಲಿರುವ ರಶೀದ್ ಯುಎಇಯಲ್ಲಿ ಸ್ಪಿನ್ನರ್ಗಳ ಪರಿಣಾಮಕಾರಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
" ಇಲ್ಲಿನ ವಾತಾವರಣ ಸ್ಪಿನ್ನರ್ಗಳಿಗೆ ಹೇಳಿ ಮಾಡಿಸಿದಂತಿದೆ. ಹಾಗಾಗಿ ಇದು ಸ್ಪಿನ್ನರ್ಗಳ ವಿಶ್ವಕಪ್. ಇಲ್ಲಿನ ಪಿಚ್ಗಳನ್ನು ಹೇಗೆ ಸಿದ್ಧಪಡಿಸಿದರೂ ಕೊನಗೆ ಸ್ಪಿನ್ನರ್ಗಳಿಗೆ ನೆರವಾಗುತ್ತವೆ. ಈ ವಿಶ್ವಕಪ್ನಲ್ಲಿ ಸ್ಪಿನ್ನರ್ಗಳು ಬಹುದೊಡ್ಡ ಜವಾಬ್ದಾರಿ ನಿರ್ವಹಿಸಲಿದ್ದಾರೆ.