ಕರ್ನಾಟಕ

karnataka

ETV Bharat / sports

ಮಂಜ್ರೇಕರ್​ಗೆ 'ಅಪರಿಚಿತ' ಸಿನಿಮಾ ಡೈಲಾಗ್​​​ ಮೂಲಕ ಟಾಂಗ್​ ಕೊಟ್ಟ ಅಶ್ವಿನ್​​ - ಆರ್‌.ಅಶ್ವಿನ್‌

ಭಾರತದ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪೈಕಿ ಒಬ್ಬರು ಎಂದು ನನಗೆ ಅನಿಸುವುದಿಲ್ಲ. ದ.ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾದಲ್ಲಿ ಅವರ ಸಾಧನೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಟೀಕಿಸಿದ್ದರು.

Ashwin engages in fun banter with Manjrekar
ಸಂಜಯ್ ಮಂಜ್ರೇಕರ್​ಗೆ ಟಾಂಗ್​ ಕೊಟ್ಟ ಆರ್​. ಅಶ್ವೀನ್​​

By

Published : Jun 8, 2021, 9:02 AM IST

ಹೈದರಾಬಾದ್:ಸಂಜಯ್ ಮಂಜ್ರೇಕರ್ ಕ್ರಿಕೆಟರ್, ವೀಕ್ಷಕ ವಿವರಣೆಗಾರನಾಗಿ ಪ್ರಸಿದ್ಧಿಯಾಗಿದ್ದಕ್ಕಿಂತ ವಿವಾದಗಳಿಂದ ಸುದ್ದಿಯಾಗಿದ್ದೇ ಹೆಚ್ಚು. ಈ ಹಿಂದೆ ಕೆಲವು ಆಟಗಾರರ ಕುರಿತಂತೆ ಹಗುರವಾಗಿ ಮಾತನ್ನಾಡಿ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರ ಪೆಟ್ಟು ತಿಂದಿದ್ದರು. ಈಗ ಮತ್ತದೇ ಚಾಳಿ ಮುಂದುವರೆಸಿದ್ದಾರೆ.

ಭಾರತದ ಆಫ್‌ ಸ್ಪಿನ್ನರ್‌ ಆರ್‌.ಅಶ್ವಿನ್‌ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪೈಕಿ ಒಬ್ಬರು ಎಂದು ನನಗೆ ಅನಿಸುವುದಿಲ್ಲ. ದ.ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್‌, ಆಸ್ಪ್ರೇಲಿಯಾದಲ್ಲಿ ಅವರ ಸಾಧನೆ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ ಎಂದು ಮಂಜ್ರೇಕರ್‌ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಆರ್​. ಅಶ್ವಿನ್​​ ಹಾಸ್ಯಭರಿತವಾಗಿ ಟ್ವೀಟ್​ ಮಾಡುವ ಮೂಲಕ ಮಾಂಜ್ರೇಕರ್​ಗೆ ತಿರುಗೇಟು ನೀಡಿದ್ದಾರೆ. ತಮಿಳು ಚಲನಚಿತ್ರ 'ಅಪರಿಚಿತಡು' ಸಿನಿಮಾದ ಪ್ರಸಿದ್ಧ ಡೈಲಾಗ್​ ಒಂದನ್ನು ಹಂಚಿಕೊಂಡಿರುವ ಅವರು, "ಅಂತಹ ವಿಷಯಗಳನ್ನು ಹೇಳಬೇಡಿ, ಅದು ನೋವುಂಟು ಮಾಡುತ್ತದೆ" ಎಂದು ಟ್ವೀಟ್​ ಮಾಡಿದ್ದಾರೆ.

ಆರ್.ಅಶ್ವಿನ್ ಭಾರತ ಪರ 78 ಟೆಸ್ಟ್, 111 ಏಕದಿನ ಹಾಗೂ 46 ಟಿ-20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 409, 150 ಹಾಗೂ 52 ವಿಕೆಟ್ ಪಡೆದಿದ್ದಾರೆ.

ಈ ಹಿಂದೆ 2019ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಸಂಜಯ್ ಮಂಜ್ರೇಕರ್, ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಏಕದಿನ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜಾ ಅದೇ ರೀತಿ ಇದ್ದಾರೆ ಎಂದು ಹಗುರ ಮಾತುಗಳನ್ನಾಡಿದ್ದರು.

ABOUT THE AUTHOR

...view details