ಚೆನ್ನೈ, ತಮಿಳುನಾಡು:ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜಿಯೋಸಿನಿಮಾದ ಹೋಮ್ ಆಫ್ ಹೀರೋಸ್‌ನೊಂದಿಗಿನ ಸಂದರ್ಶನದಲ್ಲಿ ಅವರು ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.
ನೀವು ವಿಕೆಟ್ ಪಡೆದಿದ್ದು ಯಾವಾಗ? :ನಾನು 2015 ರಲ್ಲಿ ಚೆಂಡನ್ನು ವಿಭಿನ್ನ ರೀತಿಯಲ್ಲಿ ಎಸೆಯುವ ಬಗ್ಗೆ ಅರ್ಥಮಾಡಿಕೊಂಡೆ. ಆ ಸಮಯದಲ್ಲಿ ನನ್ನ ಲೆಂಥ್ ಸ್ವಲ್ಪ ಕಡಿಮೆ ಇತ್ತು. ನಾವು ಬ್ರಿಸ್ಬೇನ್‌ನಲ್ಲಿ ತುಂಬಾ ಬಿಸಿ ವಾತಾವರಣದಲ್ಲಿ ಆಡುತ್ತಿದ್ದಾಗ ವಿಕೆಟ್ ಪಡೆಯಲು ತುಂಬಾ ಕಷ್ಟವೆಂದು ನನಗೆ ಅರ್ಥವಾಯಿತು. ಸೀಮ್ ಸಂಪೂರ್ಣವಾಗಿ ಕಳೆದುಹೋಗಿತ್ತು. ಆಗ ನಾನು ನಾಲ್ಕನೇ ಸ್ಟಂಪ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದೆ ಮತ್ತು ಸ್ಟೀವ್ ಸ್ಮಿತ್ ಅವರನ್ನು ಒಂದೆರಡು ಬಾರಿ ವಿಕೆಟ್ ಪಡೆದೇ ಎಂದು ಇಶಾಂತ್ ಶರ್ಮಾ ಹೇಳಿದರು.
ಆ ನಂತರ ಐಪಿಎಲ್ ಹರಾಜಿನಲ್ಲಿ ನನ್ನನ್ನು ಖರೀದಿಸದ ಕಾರಣ ಕೌಂಟಿ ಕ್ರಿಕೆಟ್ ಕೂಡ ಆಡಿದ್ದೇನೆ. ಸಸೆಕ್ಸ್‌ನಲ್ಲಿರುವ ನಮ್ಮ ತರಬೇತುದಾರ ಜೇಸನ್ ಗಿಲ್ಲೆಸ್ಪಿ ನನಗೆ ಬಹಳಷ್ಟು ವಿಷಯಗಳ ಬಗ್ಗೆ ಹೇಳಿದರು. ನಾನು ನನ್ನ ಲೆಂಥ್ ಸುಧಾರಿಸಬೇಕು ಎಂದು ಅವರಿಗೆ ತಿಳಿಸಿದೆ. ಆಗ ಅವರು 6m ನಲ್ಲಿ ಶೂಟ್ ಮಾಡುವ ರೀತಿಯಲ್ಲಿ 4m ನಲ್ಲಿ ಶೂಟ್ ಮಾಡಲು ಹೇಳಿದರು ಎಂದು ಇಶಾಂತ್ ಮಾಹಿತಿ ಹಂಚಿಕೊಂಡರು.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನೀವು ಯಶಸ್ಸನ್ನು ಗಳಿಸಿದ್ದು ಹೇಗೆ?: ಮೊದಲನೆಯದಾಗಿ ವಿರಾಟ್ ಕೊಹ್ಲಿ ತುಂಬಾ ಆಕ್ರಮಣಕಾರಿ ಆಟಗಾರ. ಅವರ ನಾಯಕತ್ವದಲ್ಲಿ ನಮಗೆ ಸಲಹೆ ನೀಡುತ್ತಿದ್ದರು. ನಾವು ಹೊಸ ಬಾಲ್ನೊಂದಿಗೆ ಬೌಲಿಂಗ್ ಮಾಡುತ್ತಿದ್ದರೆ, ಅವರು 5 ಓವರ್‌ಗಳಲ್ಲಿ 25 ರನ್‌ಗಳನ್ನು ನೀಡಿ ಆದ್ರೂ ಎರಡು ವಿಕೆಟ್‌ಗಳನ್ನು ಕಬಳಿಸಬೇಕು. ನೀವು ಸಾಕಷ್ಟು ಪಂದ್ಯಗಳನ್ನು ಆಡಿದ್ದೀರಿ ಮತ್ತು ಈಗ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಒಂದೇ ಸ್ಥಳದಲ್ಲಿ ಬೌಲ್ ಮಾಡಬೇಕು ಎಂದು ಭಾವಿಸಿ ಬೌಲ್ ಮಾಡಬೇಡಿ. ನೀವು ವಿಕೆಟ್ ಪಡೆಯಲು ಪ್ರಯತ್ನಿಸಬೇಕು ಎಂದು ವಿರಾಟ್ ಯಾವಾಗಲೂ ನನಗೆ ಹೇಳುತ್ತಿದ್ದರು ಅಂತಾ ಇಶಾಂತ್ ಶರ್ಮಾ ಹೇಳಿದರು.
ವಿರಾಟ್ ಶಮಿ ಬಳಿ ಹೋಗಿ ನೀವು ವಿಕೆಟ್‌ಗಳನ್ನು ತೆಗೆಯಬಹುದು ಎಂದು ನನಗೆ ಗೊತ್ತು. ಆದರೆ, ಈ ಸಮಯದಲ್ಲಿ ನಾನು ನಿಮ್ಮನ್ನು ನಿರಂತರವಾಗಿ ಬೌಲ್ ಮಾಡಲು ಬಯಸುತ್ತೇನೆ ಎಂದು ಹೇಳುತ್ತಿದ್ದರು. ಕೊಹ್ಲಿ ಜಸ್ಪ್ರೀತ್ ಬುಮ್ರಾ ಬಳಿ ಹೋಗಿ, 'ಇದ ನಿಮಗೆ ಚೊಚ್ಚಲ ಪಂದ್ಯ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವುದು ಬಹಳ ಮುಖ್ಯ' ಎಂದು ಹೇಳುತ್ತಿದ್ದರು ಅಂತಾ ಹೇಳಿದರು.