ಕರ್ನಾಟಕ

karnataka

ETV Bharat / sports

ಮಗನ ಅತ್ಯದ್ಭುತ ಆಟ ನೋಡಿ ಹೆಮ್ಮೆ ಆಗುತ್ತಿದೆ.. ಇಶಾನ್ ಕಿಶನ್​ ಪೋಷಕರ ಸಂತಸ - ದ್ವಿಶತಕ ಬಾರಿಸಿದ ಟೀಂ ಇಂಡಿಯಾದ ಯುವ ಆಟಗಾರ

ಬಾಂಗ್ಲಾದೇಶದ ವಿರುದ್ಧ ವಿಶ್ವದಾಖಲೆ ಬರೆದ ಇಶಾನ್ ಕಿಶನ್​ಗೆ ಅಭಿನಂದನೆಯ ಮಹಾಪೂರವೇ ಹರಿದುಬರುತ್ತವೆ. ಅವರ ತಂದೆ-ತಾಯಿ ಕೂಡ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಪೋಷಕರು, ಸ್ನೇಹಿತರು ಸೇರಿದಂತೆ ಹಲವರು ಕರೆ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇಶಾನ್ ಕಿಶನ್​ ಪೋಷಕರ ಮಾತು
ಇಶಾನ್ ಕಿಶನ್​ ಪೋಷಕರು

By

Published : Dec 10, 2022, 6:24 PM IST

Updated : Dec 10, 2022, 6:32 PM IST

ಇಶಾನ್ ಕಿಶನ್​ ಪೋಷಕರ ಮಾತು

ಪಟ್ನಾ (ಬಿಹಾರ್​):ಏಕದಿನ ಕ್ರಿಕೆಟ್​​ನಲ್ಲಿ ವೇಗದ ದ್ವಿಶತಕ ಬಾರಿಸಿದ ಟೀಂ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್​​ ಬಗ್ಗೆ ಅವರ ತಂದೆ-ತಾಯಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ದ್ವಿಶತಕ ಸುದ್ದಿ ತಿಳಿದ ಜನ ಪಟ್ನಾದಲ್ಲಿರುವ ಅವರ ನಿವಾಸಕ್ಕೆ ಆಗಮನಿಸಿ ಕಿಶನ್​​ ಅವರ ತಂದೆ-ತಾಯಿಗೆ ಅಭಿನಂದನೆ ಸಲ್ಲಿಸಲಾಂಭಿಸಿದ್ದಾರೆ. ಸಂಬಂಧಿಕರು ಸೇರಿದಂತೆ ಅಭಿಮಾನಿಗಳು ಇಶಾನ್ ಅವರ ಪೋಷಕರಿಗೆ ಕರೆ ಮಾಡಿ ಅಭಿನಂದನೆಗಳನ್ನು ಹೇಳಲಾಂಭಿಸಿದ್ದಾರೆ. ಹಾಗಾಗಿ ಅವರ ನಿವಾಸದಲ್ಲಿ ಸದ್ಯ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಮಗನ ಸಾಧನೆ ಕುರಿತು ಅವರ ತಾಯಿ ಸುಚಿತ್ರಾ ಸಿಂಗ್ ಈಟಿವಿ ಭಾರತದ ಜೊತೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಪುತ್ರನ ಆಟ ನೋಡಿ ನಮಗೆ ಬಹಳ ಹೆಮ್ಮೆಯಾಗುತ್ತಿದೆ. ನಮ್ಮ ಕುಟುಂಬದಲ್ಲಿ ಇಂದು ಸಂತಸದ ವಾತಾವರಣ ಮೂಡಿದೆ. ಈ ಸುದ್ದಿ ತಿಳಿದು ಜನರು ನಮಗೆ ಅಭಿನಂದನೆಗಳನ್ನು ಹೇಳುತ್ತಿದ್ದಾರೆ. ತಮ್ಮ ಮಗ ಇದೇ ರೀತಿ ಆಡುತ್ತಾ ದೇಶದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕು. ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಬೇಕು ಎಂದಿದ್ದಾರೆ.

ಇಶಾನ್‌ ತಂದೆ ಪ್ರಣವ್ ಪಾಂಡೆ ಮಾತನಾಡಿ, ಪಂದ್ಯದ ಆರಂಭದವರೆಗೂ ನಮ್ಮ ಮಗ ಇಂದು ಆಡುತ್ತಿದ್ದಾನೋ ಇಲ್ಲವೋ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ಕ್ರೀಡಾಂಗಣಕ್ಕೆ ಇಳಿದ ಬಳಿಕವೇ ನನಗೆ ಖಾತ್ರಿ ಆಯಿತು. ಆರಂಭದಿಂದ ಹಿಡಿದು ಮುಗಿಯುವರೆಗೂ ಪಂದ್ಯ ವೀಕ್ಷಿಸಿದೆ. ಮಗನ ಅತ್ಯದ್ಭುತ ಆಟ ನೋಡಿ ಹೆಮ್ಮೆ ಆಗುತ್ತಿದೆ. ಈ ಆಟವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಕ್ರೀಸ್‌ನಲ್ಲಿ ವಿರಾಟ್​ ಕೊಹ್ಲಿ ಉಳಿದುಕೊಂಡಿರುವುದು ಇಶಾನ್‌ಗೆ ತುಂಬಾ ಅನುಕೂಲಕರವಾಗಿತ್ತು ಎಂದು ಇಬ್ಬರ ಆಟದ ಬಗ್ಗೆ ಹೊಗಳಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯ ಹಿನ್ನೆಲೆ ಅವಕಾಶ ಪಡೆದುಕೊಂಡ ಕಿಶನ್, 126 ಎಸೆತಗಳಲ್ಲಿ 23 ಫೋರ್​ ಮತ್ತು 9 ಸಿಕ್ಸ್​ಗಳನ್ನು ಗೆರೆಯಾಚೆ ಅಟ್ಟುವ ಮೂಲಕ 200 ರನ್ ಗಳಿಸಿ ದಿಗ್ಗಜರ ಸಾಲಿಗೆ ಸೇರಿದರು.

ಇಶಾನ್ ಕಿಶನ್​ ಪೋಷಕರು

ವಿರಾಟ್ ಕೊಹ್ಲಿ ಜೊತೆ ಸೇರಿ ಅಮೋಘ ಬ್ಯಾಟಿಂಗ್​ ಪ್ರದರ್ಶನ ನೀಡಿದ ಯುವ ಆಟಗಾರ ಕಿಶನ್, ಆರಂಭದಿಂದಲೂ ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸತೊಡಗಿದರು. ಕೇವಲ 85 ಎಸೆತಗಳಲ್ಲಿ ಶತಕ ಸಿಡಿದ ಅವರು 126 ಎಸೆತಗಳಲ್ಲಿ 200 ರನ್ ಗಳಿಸಿ ವಿಶ್ವದಾಖಲೆ ಬರೆದರು. ಇದಕ್ಕೂ ಮುನ್ನ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಈ ದಾಖಲೆಯನ್ನು ಬರೆದಿದ್ದರು. ಈ ದಾಖಲೆ ಇದೀಗ ಮುರಿದಿದೆ.

ಇದನ್ನೂ ಓದಿ:ಬಾಂಗ್ಲಾ ವಿರುದ್ಧ ವಿರಾಟ್ ಭರ್ಜರಿ ಸೆಂಚುರಿ: ವಿಶ್ವ ಕ್ರಿಕೆಟ್​ನಲ್ಲಿ ಪಾಂಟಿಂಗ್​ ದಾಖಲೆ ಮುರಿದ ಕಿಂಗ್​ ಕೊಹ್ಲಿ

Last Updated : Dec 10, 2022, 6:32 PM IST

ABOUT THE AUTHOR

...view details