ಕರ್ನಾಟಕ

karnataka

ETV Bharat / sports

ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ವಿಶ್ವದಾಖಲೆಯ ದ್ವಿಶತಕ! - IND vs BAN Live

ಟೀಂ ಇಂಡಿಯಾದ ಯುವ ಬ್ಯಾಟರ್​ ಇಶಾನ್ ಕಿಶನ್ ವಿಶ್ವದಾಖಲೆಯ ದ್ವಿಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ.

Ishan Kishan Hits 200 In 126 Balls
Ishan Kishan Hits 200 In 126 Balls

By

Published : Dec 10, 2022, 2:25 PM IST

Updated : Dec 10, 2022, 3:15 PM IST

ಚಿತ್ತಗಾಂಗ್: ಬಾಂಗ್ಲಾದೇಶದ ವಿರುದ್ಧ ಮೂರನೇ ಮತ್ತು ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ದ್ವಿಶತಕ ಸಿಡಿಸುವ ಮೂಲಕ ದಾಖಲೆ ಬರೆದಿದ್ದಾರೆ. ರೋಹಿತ್ ಶರ್ಮಾ ಅಲಭ್ಯತೆಯ ಹಿನ್ನೆಲೆಯಲ್ಲಿ ಅವಕಾಶ ಪಡೆದುಕೊಂಡ ಕಿಶನ್, 126 ಎಸೆತಗಳಲ್ಲಿ 23 ಫೋರ್​ ಮತ್ತು 9 ಸಿಕ್ಸ್​ಗಳನ್ನು ಗೆರೆ ಆಚೆ ಅಟ್ಟುವ ಮೂಲಕ 200 ರನ್ ಗಳಿಸಿ ದಿಗ್ಗಜರ ಸಾಲಿಗೆ ಸೇರಿದರು.

ವಿರಾಟ್ ಕೊಹ್ಲಿ ಜೊತೆ ಸೇರಿ ಅಮೋಘ ಬ್ಯಾಟಿಂಗ್​ ಪ್ರದರ್ಶಿಸಿದ ಯುವ ಆಟಗಾರ ಕಿಶನ್, ಆರಂಭದಿಂದಲೂ ಬಾಂಗ್ಲಾದೇಶ ಬೌಲರ್‌ಗಳನ್ನು ಮನಬಂದಂತೆ ದಂಡಿಸತೊಡಗಿದರು. ಕೇವಲ 85 ಎಸೆತಗಳಲ್ಲಿ ಶತಕ ಸಿಡಿದ ಅವರು 126 ಎಸೆತಗಳಲ್ಲಿ 200 ರನ್ ಗಳಿಸಿ ವಿಶ್ವದಾಖಲೆ ಬರೆದರು. ಇದಕ್ಕೂ ಮುನ್ನ ಯುನಿವರ್ಸ್ ಬಾಸ್ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಈ ದಾಖಲೆಯನ್ನು ಬರೆದಿದ್ದರು. ಈ ದಾಖಲೆ ಇದೀಗ ಮುರಿದಿದೆ.

ಇದನ್ನೂ ಓದಿ:BNG vs IND 3rd ODI: ಟಾಸ್​ ಗೆದ್ದ ಬಾಂಗ್ಲಾ ಬೌಲಿಂಗ್​ ಆಯ್ಕೆ.. ಕೊನೆಯ ಪಂದ್ಯದಲ್ಲಿ ಗೆಲ್ಲುತ್ತಾ ಭಾರತ?

Last Updated : Dec 10, 2022, 3:15 PM IST

ABOUT THE AUTHOR

...view details