ಬೆಂಗಳೂರು :ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದ್ದಾರೆ. ದಾಖಲೆಯ ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.
ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿರುವ ಇಶಾನ್ರನ್ನು ಖರೀದಿಸಲು ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದಾರಾಬಾದ್ ಮತ್ತು ಗುಜರಾತ್ ಟೈಟನ್ಸ್ ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದರು.
ಉದಯೋನ್ಮುಖ ಆಟಗಾರನನ್ನು ಬರೋಬ್ಬರಿ 15.25 ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಗಿದೆ. 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಆಟಗಾರನಿಗೆ 5 ಬಾರಿಯ ಚಾಂಪಿಯನ್ ತಂಡ 15.25 ಕೋಟಿ ರೂ. ನೀಡಿದೆ.
ತಂಡದ ನಾಯಕ ರೋಹಿತ್ ಶರ್ಮಾ 16 ಕೋಟಿ ರೂ. ಪಡೆದಿದ್ದಾರೆ. ಅದೇ ಟೀಂನಲ್ಲಿ ಇಶಾನ್ 2ನೇ ಗರಿಷ್ಠ ಬೆಲೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಭಾರತದ 2ನೇ ಆಟಗಾರನಾಗಿದ್ದಾರೆ.
2018ರಲ್ಲಿ ಇಶಾನ್ರನ್ನು ಮುಂಬೈ ತಂಡ 6.20 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಮೊದಲೆರಡು ಪ್ರಾಶಸ್ತ್ಯದಲ್ಲಿ ರೋಹಿತ್ ಮತ್ತು ಬುಮ್ರಾರನ್ನು ರಿಟೈನ್ ಮಾಡಿಕೊಂಡಿದ್ದರಿಂದ ಇಶಾನ್ ಕಿಶನ್ ತಾವಾಗಿಯೇ ಹರಾಜಿಗೆ ಹೋಗಲು ನಿರ್ಧರಿಸಿದ್ದರು.
ಇಶಾನ್ ಕಿಶನ್ 110 ಪಂದ್ಯಗಳಿಂದ 133ರ ಸ್ಟ್ರೈಕ್ರೇಟ್ನಲ್ಲಿ 2,726 ರನ್ ಗಳಿಸಿದ್ದಾರೆ. 2 ಶತಕ ಮತ್ತು 15 ಅರ್ಧಶತಕ ಬಾರಿಸಿದ್ದಾರೆ.
ಇದನ್ನೂ ಓದಿ:ರೈನಾ, ಸ್ಟೀವ್ ಸ್ಮಿತ್ ಸೇರಿದಂತೆ ಅನ್ಸೋಲ್ಡ್ ಆದ ಸ್ಟಾರ್ ಕ್ರಿಕೆಟಿಗರು..