ಆಸ್ಟ್ರೇಲಿಯಾದಲ್ಲಿ ಟಿ20 ಲೀಗ್ನ ಬಿಗ್ ಬ್ಯಾಷ್ ಪಂದ್ಯಗಳು ನಡೆಯುತ್ತಿವೆ. ಬುಧವಾರ ಪರ್ತ್ ಸ್ಕ್ರ್ಯಾಚರ್ಸ್ ಮತ್ತು ಹೊಬರ್ಟ್ ಹರಿಕೇನ್ಸ್ ನಡುವೆ ಪಂದ್ಯ ನಡೆಯಿತು. ಈ ಪಂದ್ಯದ ಕಮೆಂಟರಿ ನೀಡುತ್ತಿದ್ದ ವೇಳೆ ಡಬಲ್ ಮೀನಿಂಗ್ ಮಾತೊಂದು ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸಂಭಾಷಣೆ ವೈರಲ್ ಆಗಿದೆ.
ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಇಂಗ್ಲೆಂಡ್‌ನ ಮಾಜಿ ಆಟಗಾರ್ತಿ ಇಸಾ ಗುಹಾ ಕಾಮೆಂಟರಿ ನೀಡುತ್ತಿದ್ದರು. ಈ ವೇಳೆ ಗಿಲ್‌ಕ್ರಿಸ್ಟ್ ಜೊತೆಗಿದ್ದ ಕಾಮೆಂಟರಿ ನೀಡುವ ಮತ್ತೊಬ್ಬ ವ್ಯಕ್ತಿ ಕ್ರಿಕೆಟ್ನಲ್ಲಿ ಕೇರಂ ಬಾಲ್ ಬೌಲಿಂಗ್ ಬಗ್ಗೆ ವಿವರಣೆ ನೀಡುತ್ತಿದ್ದರು.
Isa Guha Commentary :ಮಧ್ಯದ ಬೆರಳು ಉದ್ದವಿರುವ ಆಟಗಾರರು ಕೇರಂ ಬಾಲ್ ಬೌಲಿಂಗ್ ಉತ್ತಮವಾಗಿ ಎಸೆಯಲು ಸಾಧ್ಯವಾಗುತ್ತದೆ. ಮಧ್ಯದ ಬೆರಳು ಉದ್ದವಿರುವ ಆಟಗಾರರನ್ನು ಗುರ್ತಿಸಿ, ಅವರಿಗೆ ಕೇರಂ ಬೌಲಿಂಗ್ ಎಸೆಯಲು ತರಬೇತುದಾರರು ತರಬೇತಿ ನೀಡುತ್ತಾರೆ ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಇಸಾ ಗುಹಾ 'ನಿಮ್ಮದು ಎಷ್ಟು ದೊಡ್ಡದು?' (ಮಧ್ಯದ ಬೆರಳು) ಎಂದು ಡಬಲ್ ಮೀನಿಂಗ್ ಪ್ರಶ್ನೆ ಕೇಳಿದ್ದಾರೆ.
ಒಂದು ಕ್ಷಣ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಮತ್ತೊಬ್ಬ ಕಾಮೆಂಟೇಟರ್ ಶಾಕ್ ಆಗಿದ್ದು, ಜೋರಾಗಿ ನಕ್ಕು, ನಂತರ ತಮ್ಮ ವ್ಯಾಖ್ಯಾನವನ್ನು ಮುಂದುವರೆಸಿದ್ದಾರೆ. ಈ ವಿಡಿಯೋವನ್ನು ಕ್ರಿಕೆಟ್ ಮಾಜಿ ಆಟಗಾರ್ತಿ ಅಲೆಕ್ಸಾಂಡ್ರಾ ಹಾರ್ಟ್ಲಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಇದನ್ನೂ ಓದಿ:ಚಿನ್ನದ ಹುಡುಗಿ ಹುಟ್ದಬ್ಬ.. Happy Birthday Geeta Phogat