ಕರ್ನಾಟಕ

karnataka

ETV Bharat / sports

ಭಾರತದ ಸೋಲನ್ನು ಸಂಭ್ರಮಿಸಿದ ಪಾಕ್​ ಪ್ರಧಾನಿ: ದೇಶದ ಹಿತಕ್ಕೆ ಗಮನಹರಿಸಿ ಎಂದ ಇರ್ಫಾನ್ ಪಠಾಣ್​ - ಟಿ20 ವಿಶ್ವಕಪ್‌ 2022

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಸೋತ ಬೆನ್ನಲ್ಲೇ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್​ ಮೂಲಕ ಸಂಭ್ರಮಿಸಿದ್ದು, ಇದಕ್ಕೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Irfan Pathan Hits Back at Pakistan Prime Minister on tweet
Etv Bharatಭಾರತದ ಸೋಲನ್ನು ಸಂಭ್ರಮಿಸಿದ ಪಾಕ್​ ಪ್ರಧಾನಿ: ದೇಶದ ಹಿತಕ್ಕೆ ಗಮನಹರಿಸಿ ಎಂದ ಪಠಾಣ್​

By

Published : Nov 13, 2022, 11:16 AM IST

ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ ತಂಡ ಇಂಗ್ಲೆಂಡ್​ ವಿರುದ್ಧ ಸೋಲುತ್ತಿದ್ದಂತೆ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್​ ಮೂಲಕ ಕಾಲೆಳೆದಿದ್ದರು. ಈ ಪೋಸ್ಟ್​ ಸಾಕಷ್ಟು ವೈರಲ್​ ಆಗಿದ್ದು, ಇದಕ್ಕೆ ಭಾರತ ಕ್ರಿಕೆಟ್​ ತಂಡದ ಮಾಜಿ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ತಿರುಗೇಟು ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ 10 ವಿಕೆಟ್‌ಗಳ ಸೋತ ಬೆನ್ನಲ್ಲೇ ಪ್ರಧಾನಿ ಶೆಹಬಾಜ್ ಷರೀಫ್ ಟ್ವೀಟ್‌ ಮಾಡಿದ್ದು, 'ಈ ಭಾನುವಾರ, ಇದು 152/0 vs 170/0 #ಟಿ20ವಿಶ್ವಕಪ್' ಎಂದು ಹೇಳಿದ್ದರು. ಅಂದರೆ ಈ ಹಿಂದಿನ 2021 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಾಕ್ ಗೆದ್ದಾಗ 152/0 ರನ್​ ಬಾರಿಸಿತ್ತು. ಹಾಗೆಯೇ ಇಂಗ್ಲೆಂಡ್​ ಸಹ ಸೆಮೀಸ್​​ನಲ್ಲಿ 170/0 ಗಳಿಸಿ ಜಯ ದಾಖಲಿಸಿದ್ದು, ಇದನ್ನೇ ಹೋಲಿಕೆ ಮಾಡಿರುವ ಪಾಕ್​ ಪ್ರಧಾನಿ ಭಾನುವಾರ ಪಾಕ್​ ಹಾಗೂ ಇಂಗ್ಲೆಂಡ್​ ನಡುವೆ ಪಂದ್ಯ ಎಂದು ಹೀಗಳೆದಿದ್ದರು.

ಈ ಟ್ವೀಟ್​ಗೆ ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ತಿರುಗೇಟು ನೀಡಿದ್ದಾರೆ. 'ಇದು ನಿಮ್ಮ ಮತ್ತು ನಮ್ಮ ನಡುವಿನ ವ್ಯತ್ಯಾಸ. ನಾವು ನಮ್ಮಷ್ಟಕ್ಕೇ ಸಂಭ್ರಮಪಡುತ್ತೇವೆ. ಆದರೆ ನೀವು ಇತರರ ನೋವಿನಲ್ಲಿ ಸಂತೋಷ ಹುಡುಕುತ್ತೀರಿ. ಹೀಗಾಗಿಯೇ ನೀವು ನಿಮ್ಮ ದೇಶದ ಹಿತದ ಬಗ್ಗೆ ಗಮನಹರಿಸುತ್ತಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.

ಪಠಾಣ್​ ಅವರ ರೀಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು, ಲೈಕ್ಸ್​ ಹರಿದುಬರುತ್ತಿದೆ. ಇನ್ನು ಟಿ20 ವಿಶ್ವಕಪ್‌ ಟೂರ್ನಿಯು ಅಂತ್ಯದ ಹಂತದಲ್ಲಿದ್ದು, ಫೈನಲ್​ ಪಂದ್ಯದಲ್ಲಿ ಇಂದು ಪಾಕಿಸ್ತಾನ ಹಾಗೂ ಇಂಗ್ಲೆಂಡ್​ ತಂಡಗಳು ಮೆಲ್ಬೋರ್ನ್​ನಲ್ಲಿ ಮುಖಾಮುಖಿಯಾಗಲಿವೆ.

ಇದನ್ನೂ ಓದಿ:ಪಾಕ್​ ಬೌಲರ್​ಗಳು ಭಾರತದಂತಲ್ಲ, ಇಂಗ್ಲೆಂಡ್​ಗೆ ವಾಕ್​ಓವರ್​​ ಸಿಗುವುದಿಲ್ಲ: ಶೋಯಬ್​ ಅಖ್ತರ್ ವ್ಯಂಗ್ಯ

ABOUT THE AUTHOR

...view details