ಡಬ್ಲಿನ್(ಐರ್ಲೆಂಡ್): ಭಾರತದ ಯುವ ಪಡೆಯ ಸಂಘಟಿತ ಆಟ, ಜಸ್ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಅವರ ಭರ್ಜರಿ ಕಮ್ಬ್ಯಾಕ್ನ ಫಲದಿಂದ ಭಾರತ ತಂಡ ಐರ್ಲೆಂಡ್ ವಿರುದ್ಧದ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದೆ. ಸರಣಿಯ ಕೊನೆಯ ಟಿ20 ಪಂದ್ಯ ಇಂದು ನಡೆಯಲಿದ್ದು, ಇದನ್ನು ಭಾರತ ಜಯಿಸಿದಲ್ಲಿ ಬುಮ್ರಾ ನಾಯಕತ್ವದಲ್ಲಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆ ಆಗಲಿದೆ.
ಭಾರತ ತಂಡ ಸಿರೀಸ್ ಜಯ ಸಾಧಿಸಿರುವುದರಿಂದ ತಂಡದಲ್ಲಿ ಕೆಲ ಬದಲಾವಣೆಗೆ ಆಗುವ ನಿರೀಕ್ಷೆ ಇದೆ. ವಿಕೆಟ್ ಕೀಪರ್ ಜಿತೇಶ್ ಶರ್ಮಾ ಪದಾರ್ಪಣೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೇ ಶಹಬಾಜ್ ಅಹ್ಮದ್ ಮಧ್ಯಮ ಕ್ರಮಾಂಕದಲ್ಲಿ ಆಲ್ರೌಂಡ್ ಪ್ರದರ್ಶನಕ್ಕೆ ಸಿದ್ಧರಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಪದಾರ್ಪಣೆ ಮಾಡಿದ ಮುಖೇಶ್ ಕುಮಾರ್ಗೆ ಅರ್ಷದೀಪ್ ಬದಲಿ ಕೊನೆಯ ಟಿ20ಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.
ಸಂಜುಗೆ ಅವಕಾಶ ಸಿಗುತ್ತದೆಯೇ?:ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಬ್ಯಾಟಿಂಗ್ಗೆ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ, ಎರಡನೇ ಪಂದ್ಯ ಸ್ಯಾಮ್ಸನ್ ಸಿಕ್ಕ 40 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಏಷ್ಯಾಕಪ್ಗೆ ಸ್ಯಾಡ್ ಬೈ ಆಗಿ ಸಂಜು ಆಯ್ಕೆ ಆಗಿರುವ ಕಾರಣ ಈ ಪಂದ್ಯದಲ್ಲಿ ಅವರನ್ನು ಮುಂದುವರೆಸುವ ಸಾಧ್ಯತೆ ಹೆಚ್ಚಿದೆ. ಜಿತೇಶ್ ಶರ್ಮಾ ಅವರನ್ನು ಶಿವಂ ದುಬೆ ಬದಲಾಗಿ ಮೈದಾನಕ್ಕೆ ತರುವ ಲೆಕ್ಕಾಚಾರ ಇದೆ. ಆದರೆ, ಕೀಪಿಂಗ್ ಗ್ಲೌಸ್ ತೊಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಶಹಬಾಜ್ ಅಹ್ಮದ್ ಕೂಡಾ ಪದಾರ್ಪಣೆಗೆ ಕಾಯುತ್ತಿದ್ದಾರೆ. ಅವೇಶ್ ಖಾನ್ ಕೂಡಾ ಈ ಪಂದ್ಯದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ರನ್ ಗಳಿಸುತ್ತಿಲ್ಲ ತಿಲಕ್ ವರ್ಮಾ:ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟಿ-20 ತಂಡಕ್ಕೆ ಪದಾರ್ಪಣೆ ಮಾಡಿ ಗಮನಾರ್ಹ ಪ್ರದರ್ಶನ ನೀಡಿ ಏಷ್ಯಾಕಪ್ನ ಏಕದಿನ ತಂಡಕ್ಕೆ ಸ್ಥಾನ ಗಿಟ್ಟಿಸಿಕೊಂಡಿರುವ ತಿಲಕ್ ವರ್ಮಾ ಐರ್ಲೆಂಡ್ ವಿರುದ್ಧ ಮಂಕಾಗಿದ್ದಾರೆ. ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಕೊಟ್ಟರೆ, ಎರಡನೇ ಪಂದ್ಯದಲ್ಲಿ 1 ರನ್ ಗಳಿಸಿದ್ದಾರೆ. ಇಂದಿನ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಭರ್ಜರಿ ಬ್ಯಾಟಿಂಗ್ ಮಾಡಿ ಏಷ್ಯಾಕಪ್ನಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳ ಬೇಕಿದೆ.
ಪುಟಿದೇಳಬೇಕಿದೆ ಐರ್ಲೆಂಡ್:ಐರ್ಲೆಂಡ್ ತಂಡ ಕ್ಲೀನ್ ಸ್ವೀಪ್ನಿಂದ ತಪ್ಪಿಸಿಕೊಳ್ಳಲು ಇಂದು ಸಕಲ ಪ್ರಯತ್ನಗಳನ್ನು ಮಾಡಬೇಕಿದೆ. ಅನುಭವಿ ಬ್ಯಾಟರ್ಗಳಾದ ಪಾಲ್ ಸ್ಟಿರ್ಲಿಂಗ್, ಲೋರ್ಕನ್ ಟಕರ್, ಆಂಡ್ರ್ಯೂ ಬಾಲ್ಬಿರ್ನಿ ತಂಡದಲ್ಲಿದ್ದು, ಇವರಿಂದ ಈ ವರೆಗೆ ನಿರೀಕ್ಷಿತ ಪ್ರದರ್ಶನ ಕಂಡು ಬಂದಿಲ್ಲ. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಐರ್ಲೆಂಡ್ ಸಂಘಟಿತ ಪ್ರದರ್ಶನ ನೀಡಿದಲ್ಲಿ ಕ್ಲೀನ್ ಸ್ವೀಪ್ನಿಂದ ತಪ್ಪಿಕೊಳ್ಳಬಹುದು.