ಡಬ್ಲಿನ್(ಐರ್ಲೆಂಡ್): ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಭಾರತ ಎರಡನೇ ಟಿ20 ಪಂದ್ಯವನ್ನಾಡ್ತಿದ್ದು, ಟಾಸ್ ಗೆದ್ದು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದೆ. ಈ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ್ರೆ, ಹಾರ್ದಿಕ್ ಪಾಂಡ್ಯಾ ಬಳಕ ಸರಣಿ ಕೈವಶ ಮಾಡಿಕೊಳ್ಳಲಿದೆ. ಹೀಗಾಗಿ, ತಂಡದ ಚಿತ್ತ ಗೆಲುವಿನತ್ತ ನೆಟ್ಟಿದೆ.
ಮಳೆಯಿಂದಾಗಿ ಮೊದಲ ಟಿ20 ಪಂದ್ಯವನ್ನು 12 ಓವರ್ಗಳಿಗೆ ಸೀಮಿತಗೊಳಿಸಲಾಗಿತ್ತು. ಈ ವೇಳೆ ಬ್ಯಾಟ್ ಮಾಡಿದ್ದ ಐರ್ಲೆಂಡ್ ಕೂಡ ಗಮನಾರ್ಹ ಪ್ರದರ್ಶನ ನೀಡಿ, ಭಾರತದ ಮುಂದೆ ಉತ್ತಮ ಸ್ಕೋರ್ ಇಟ್ಟಿತ್ತು. ಆದರೆ, ದೀಪಕ್ ಹೂಡಾ ಬಿರುಸಿನ ಬ್ಯಾಟಿಂಗ್ನಿಂದಾಗಿ ಹಾರ್ದಿಕ್ ಬಳಗ ಗೆಲುವಿನ ನಗೆ ಬೀರಿತ್ತು.
ಟೀಂ ಇಂಡಿಯಾ(ಆಡುವ 11ರ ಬಳಗ):ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯಾ(ಕ್ಯಾಪ್ಟನ್), ದಿನೇಶ್ ಕಾರ್ತಿಕ್(ವಿ.ಕೀ), ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಉಮ್ರಾನ್ ಮಲಿಕ್
ಇಂದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಮೂರು ಬದಲಾವಣೆ ಮಾಡಿಕೊಂಡಿದ್ದು, ಋತುರಾಜ್ ಸ್ಥಾನಕ್ಕೆ ಸ್ಯಾಮ್ಸನ್, ಆವೇಶ್ ಖಾನ್ ಜಾಗಕ್ಕೆ ಹರ್ಷಲ್ ಪಟೇಲ್ ಹಾಗೂ ಚಹಲ್ ಜಾಗದಲ್ಲಿ ಬಿಷ್ಣೋಯ್ ಅವಕಾಶ ಪಡೆದುಕೊಂಡಿದ್ದಾರೆ. ಈ ಪಂದ್ಯಕ್ಕಾಗಿ ಐರ್ಲೆಂಡ್ ಯಾವುದೇ ರೀತಿಯ ಬದಲಾವಣೆ ಮಾಡಿಕೊಂಡಿಲ್ಲ.
ಐರ್ಲೆಂಡ್(ಆಡುವ 11ರ ಬಳಗ):ಪಾಲ್ ಸ್ಟಿರ್ಲಿಂಗ್, ಆಂಡ್ರ್ಯೂ ಬಾಲ್ಬಿರ್ನಿ (ಕ್ಯಾಪ್ಟನ್), ಗರೆಥ್ ಡೆಲಾನಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ (ಡಬ್ಲ್ಯೂ), ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಆಂಡಿ ಮ್ಯಾಕ್‌ಬ್ರೈನ್, ಕ್ರೇಗ್ ಯಂಗ್, ಜೋಶುವಾ ಲಿಟಲ್, ಕಾನರ್ ಓಲ್ಫರ್ಟ್