ಬೆಂಗಳೂರು:ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಯಂಗ್ ಪ್ಲೇಯರ್ಸ್ಗೆ ಜಾಕ್ಪಾಟ್ ಹೊಡೆದಿದ್ದು, ಕೋಟ್ಯಂತರ ರೂ. ನೀಡಿ ವಿವಿಧ ಫ್ರಾಂಚೈಸಿಗಳು ಖರೀದಿ ಮಾಡಿವೆ. ಈ ಸಾಲಿನಲ್ಲಿ ಅನ್ಕ್ಯಾಪ್ಡ್ ಪ್ಲೇಯರ್ ಆವೇಶ್ ಖಾನ್ ಸಹ ಸೇರಿಕೊಂಡಿದ್ದು, ಯುವ ವೇಗದ ಬೌಲರ್ಗೆ ಬರೋಬ್ಬರಿ 10 ಕೋಟಿ ರೂ. ನೀಡಿ ಖರೀದಿ ಮಾಡಲಾಗಿದೆ.
ಕಳೆದ ಎರಡು ಆವೃತ್ತಿಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಕಣಕ್ಕಿಳಿದು ಮಿಂಚು ಹರಿಸಿರುವ ವೇಗದ ಬೌಲರ್ ಆವೇಶ್ ಖಾನ್ ಈ ಸಲದ ಐಪಿಎಲ್ ಹರಾಜಿನಲ್ಲಿ 10 ಕೋಟಿ ರೂಪಾಯಿಗೆ ಲಕ್ನೋ ತಂಡಕ್ಕೆ ಸೇಲ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚಿನ ಬೆಲೆಗೆ ಬಿಕರಿಯಾಗಿರುವ ಅನ್ಸೋಲ್ಡ್ ಪ್ಲೇಯರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. 25 ವರ್ಷದ ಆವೇಶ್ಖಾನ್ಗೆ ಡೆಲ್ಲಿ ತಂಡ ರಿಟೈನ್ ಮಾಡಿಕೊಂಡಿರಲಿಲ್ಲ. 20 ಲಕ್ಷ ಮೂಲ ಬೆಲೆ ಹೊಂದಿದ್ದ ಈ ಪ್ಲೇಯರ್ ಈಗಾಗಲೇ ಈ ಹಿಂದಿನ ಐಎಪಿಎಲ್ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಇದೇ ಕಾರಣಕ್ಕಾಗಿ ಈ ಬೌಲರ್ ಖರೀದಿ ಮಾಡಲು ವಿವಿಧ ಫ್ರಾಂಚೈಸಿಗಳು ಪೈಪೋಟಿ ನಡೆಸಿದವು.
ಇದನ್ನೂ ಓದಿರಿ:ಮೂಲ ಬೆಲೆಗಿಂತಲೂ 22 ಪಟ್ಟು ಅಧಿಕ ಮೊತ್ತಕ್ಕೆ ಬಿಕರಿಯಾದ ಅನ್ಕ್ಯಾಪ್ಡ್ ಶಾರುಖ್ ಖಾನ್!