ಚೆನ್ನೈ (ತಮಿಳುನಾಡು): ಐಪಿಎಲ್ 2023 ರ ಕ್ವಾಲಿಫೈಯರ್ 1 ಕ್ಕೆ ಮುಂಚಿತವಾಗಿ, ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಿದ್ದಾರೆ. ಧೋನಿಗೆ ಎಂದಿಗೂ ನಾನು ಅಭಿಮಾನಿ, ಧೋನಿಯನ್ನು ಮಣಿಸಲು ಡೆವಿಲ್ ಆಗಬೇಕಷ್ಟೇ ಇಲ್ಲದೇ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮಂಗಳವಾರ ಸಂಜೆ ಚೆಪಾಕ್‌ನಲ್ಲಿ ನಡೆಯಲಿರುವ ಮೊದಲ ಪ್ಲೇ-ಆಫ್‌ನಲ್ಲಿ ಹಾರ್ದಿಕ್ ನಾಯಕತ್ವದ ಗುಜರಾತ್ ಟೈಟಾನ್ಸ್ (ಜಿಟಿ)ಯು ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಲಿದೆ. ಎರಡೂ ತಂಡಗಳು ಲೀಗ್ನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹಾಲಿಚಾಂಪಿಯನ್ ಗುಜರಾತ್ ಈ ವರ್ಷ ಅವರ ಚಾರ್ಮ್ನ್ನು ಮುಂದುವರೆಸಿದ್ದಾರೆ.
ಗುಜರಾತ್ ಟೈಟಾನ್ಸ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹಾರ್ದಿಕ್ ಧೋನಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ, "ಹಲವು ಜನರು ಮಹೇಂದ್ರ ಸಿಂಗ್ ಗಂಭೀರವಾಗಿರುವ ವ್ಯಕ್ತಿ ಎಂದು ನೋಡುತ್ತಾರೆ. ಅವರನ್ನು ಹೊರಗಿನಿಂದ ಕಾಣುವಾಗ ಆ ರೀತಿ ಭಾಸವಾಗುತ್ತದೆ. ಆದರೆ ನಾನು ಅವರೊಂದಿಗೆ ಹಾಸ್ಯಗಳನ್ನು ಮಾಡಿದ್ದೇನೆ, ಅವರನ್ನು ನಾನು ಧೋನಿ ಎಂದು ನೋಡಿಲ್ಲ, ಒಬ್ಬ ಆತ್ಮೀಯನಂತೆ ಸ್ನೇಹ ಬೆಳೆಸಿಕೊಂಡಿದ್ದೇನೆ".
"ನಿಸ್ಸಂಶಯವಾಗಿ, ನಾನು ಅವನಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ, ಬಹಳಷ್ಟು ಧನಾತ್ಮಕ ವಿಷಯಗಳನ್ನು, ನಾನು ಅವರನ್ನು ನೋಡುತ್ತಾ ಕಲಿತಿದ್ದೇನೆ, ಹೆಚ್ಚು ಮಾತನಾಡುವುದಿಲ್ಲ. ಆದರೆ ನನಗೆ, ಅವರು ನನ್ನ ಆತ್ಮೀಯ ಸ್ನೇಹಿತ, ಪ್ರೀತಿಯ ಸಹೋದರ. ನಾನು ಅವರೊಂದಿಗೆ ಎಷ್ಟೇ ಕುಚೇಷ್ಟೆಗಳನ್ನು ಮಾಡಿದರೂ ಅವರು ತಾಳ್ಮೆಯಿಂದಲೇ ಇರುತ್ತಾರೆ. ಅವರನ್ನು ಸೋಲಿಸಬೇಕಾದರೆ ನಾವು ಡೆವಿಲ್ಗಳಾಗ ಬೇಕಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.