ಮುಂಬೈ: ವುಮೆನ್ಸ್ ಪ್ರೀಮಿಯರ್ ಲೀಗ್ನ ಚಾಂಪಿಯನ್ ಘೋಷಣೆಯಾಗಲು ಒಂದು ಪಂದ್ಯ ಬಾಕಿ ಇದೆ. ಡಬ್ಲ್ಯುಪಿಎಲ್ 2023ರ ಅಂತಿಮ ಪಂದ್ಯ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ಮತ್ತು ಇತ್ತೀಚೆಗಷ್ಟೇ ಆಸ್ಟ್ರೇಲಿಯಾವನ್ನು ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್‌ಗಳನ್ನಾಗಿ ಮಾಡಿದ ಮೆಗ್ ಲ್ಯಾನಿಂಗ್ ತಂಡದ ನಡುವೆ ನಡೆಯಲಿದೆ. ಇದುವರೆಗಿನ ಡಬ್ಲ್ಯುಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಮೋಘ ಆಟ ಪ್ರದರ್ಶನ ನೀಡಿದೆ. ಮೆಗ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎಂಟು ಪಂದ್ಯಗಳಲ್ಲಿ 6 ಗೆದ್ದಿದೆ. ಡೆಲ್ಲಿ ಎರಡು ಪಂದ್ಯಗಳಲ್ಲಿ ಸೋಲನ್ನು ಕಂಡಿದೆ.
ಮುಖಾಮುಖಿ:ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಮತ್ತು ದೆಹಲಿ ನಡುವೆ ಎರಡು ಪಂದ್ಯಗಳು ನಡೆದಿವೆ. ಮಾರ್ಚ್ 9 ರಂದು ನಡೆದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ದೆಹಲಿಯನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಮಾರ್ಚ್ 20 ರಂದು ಎರಡನೇ ಬಾರಿಗೆ, ಎರಡೂ ತಂಡಗಳು ಮತ್ತೆ ಮುಖಾಮುಖಿಯಾದವು, ಇದರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಿಂದಿನ ಸೋಲಿಗೆ ಸೇಡು ತೀರಿಸಿಕೊಂಡು ಗೆಲುವು ಸಾಧಿಸಿತು. ಮೆಗ್ ತಂಡ ಹರ್ಮನ್‌ಪ್ರೀತ್ ಕೌರ್ ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಸೋಲಿಸಿತು.
ಮೆಗ್ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ ಡೆಲ್ಲಿ ಬಲ:ಮೆಗ್ ಲ್ಯಾನಿಂಗ್ ಮತ್ತು ಶೆಫಾಲಿ ವರ್ಮಾ ಡೆಲ್ಲಿ ಕ್ಯಾಪಿಟಲ್ಸ್‌ನ ಮ್ಯಾಚ್ ವಿನ್ನಿಂಗ್ ಆಟಗಾರರಾಗಿದ್ದಾರೆ. ಲ್ಯಾನಿಂಗ್ ಎಂಟು ಪಂದ್ಯಗಳಲ್ಲಿ 141.55 ಸ್ಟ್ರೈಕ್ ರೇಟ್‌ನಲ್ಲಿ 310 ರನ್ ಗಳಿಸಿದ್ದಾರೆ. ಮೆಗ್ ಲ್ಯಾನಿಂಗ್ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಟಾಪ್ ರನ್ ಸ್ಕೋರರ್ ಆಗಿದ್ದಾರೆ. ಶೆಫಾಲಿ ವರ್ಮಾ ಕೂಡ ಲೀಗ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಶೆಫಾಲಿ ಭಾರತವನ್ನು 19 ವರ್ಷದೊಳಗಿನವರ ವಿಶ್ವಕಪ್ ತಂಡವನ್ನು ಮುನ್ನಡೆಸಿ ಚಾಂಪಿಯನ್ ಆಗಿ ಮಾಡಿದ್ದಾರೆ. ಶೆಫಾಲಿ ಎಂಟು ಪಂದ್ಯಗಳಲ್ಲಿ 182.57 ಸ್ಟ್ರೈಕ್ ರೇಟ್‌ನಲ್ಲಿ 241 ರನ್ ಗಳಿಸಿದ್ದಾರೆ.
ನ್ಯಾಟ್ ಸೀವರ್ ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ ಮುಂಬೈ ಗೆಲುವಿನ ಸಾರಥಿಗಳು:ಮುಂಬೈ ಇಂಡಿಯನ್ಸ್‌ನ ನ್ಯಾಟ್ ಸೀವರ್ ಬ್ರಂಟ್ ಇದುವರೆಗಿನ ಲೀಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಲೀಗ್ ಮತ್ತು ನಾಕೌಟ್ನ ಒಟ್ಟು 9 ಪಂದ್ಯಗಳಲ್ಲಿ 272 ರನ್ ಗಳಿಸಿದ್ದಾರೆ. ಅವರು 149.45 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ನೆಟ್ ಲೀಗ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಆಟಗಾರ್ತಿಯಾಗಿದ್ದಾರೆ. ಹೇಲಿ ಮ್ಯಾಥ್ಯೂಸ್ ಕೂಡ 9 ಪಂದ್ಯಗಳಲ್ಲಿ 127.09 ಸ್ಟ್ರೈಕ್ ರೇಟ್‌ನಲ್ಲಿ 258 ರನ್ ಗಳಿಸಿದ್ದಾರೆ. ಮ್ಯಾಥ್ಯೂಸ್ ಕೂಡ 13 ವಿಕೆಟ್ ಪಡೆದಿದ್ದಾರೆ. ಡೆಲ್ಲಿ ಬೌಲರ್ ಶಿಖಾ ಪಾಂಡೆ ಲೀಗ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿದ್ದಾರೆ ಮತ್ತು ಮುಂಬೈನ ಸೈಕಾ ಇಶಾಕ್ ಒಂಬತ್ತು ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ:TATA WPL: "ಕೇಲ್ ಅಭಿ ಬಾಕಿ ಹೈ" ಎಂದ ಹ್ಯಾಟ್ರಿಕ್ ವಿಕೆಟ್ ಸಾಧಕಿ ಇಸ್ಸಿ ವಾಂಗ್