ಅಹಮದಾಬಾದ್:ಕೊಹ್ಲಿ ಪಡೆಯ ವಿರುದ್ಧ ಅಂತಿಮ ಓವರ್ನಲ್ಲಿ ಮಾರ್ಕಸ್ ಸ್ಟೋಯ್ನಿಸ್ಗೆ ಬೌಲಿಂಗ್ ನೀಡಿದ್ದ ಬಗ್ಗೆ ನಾಯಕ ರಿಷಭ್ ಪಂತ್ ಕಾರಣ ತಿಳಿಸಿದ್ದಾರೆ.
ಡೆಲ್ಲಿಯು ಕೊನೆಯ ಓವರ್ನಲ್ಲಿ 23 ರನ್ ರನ್ ಬಿಟ್ಟುಕೊಟ್ಟ ಪರಿಣಾಮ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಪಂದ್ಯದ ಬಳಿಕ ಮಾತನಾಡಿದ ಪಂತ್, ತಂಡ ಸೋಲನುಭವಿಸಿದ್ದು ಬೇಸರ ತರಿಸಿದೆ. ಆರ್ಸಿಬಿಗೆ 10ರಿಂದ 15 ಹೆಚ್ಚುವರಿ ರನ್ ಬಿಟ್ಟುಕೊಟ್ಟಿದ್ದು ತಂಡಕ್ಕೆ ಹೊರೆಯಾಯಿತು. ಕೊನೆಯ ಘಟ್ಟದಲ್ಲಿ ಸ್ಪಿನ್ನರ್ಗೆ ಬೌಲಿಂಗ್ ಮಾಡುವುದು ಕಷ್ಟಸಾಧ್ಯವೆಂದು ಊಹಿಸಿ ಸ್ಟೋಯ್ನಿಸ್ಗೆ 20ನೇ ಓವರ್ ನೀಡಿದ್ದಾಗಿ ಹೇಳಿದರು.