ಕೋಲ್ಕತ್ತಾ:ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 14 ರನ್ ಅಂತರದ ಸೋಲು ಕಾಣುವ ಮೂಲಕ ಲಖನೌ ಸೂಪರ್ ಜೈಂಟ್ಸ್ ಐಪಿಎಲ್ ಅಭಿಯಾನ ಅಂತ್ಯಗೊಳಿಸಿದೆ. ಚೊಚ್ಚಲ ಪ್ರಯತ್ನದಲ್ಲೇ ಅತ್ಯದ್ಭುತ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಕೆಎಲ್ ರಾಹುಲ್ ನಾಯಕತ್ವದ ಲಖನೌ, ಮುಂದಿನ ಆವೃತ್ತಿಯಲ್ಲಿ ಮತ್ತಷ್ಟು ಬಲಿಷ್ಠವಾಗಿ ಹಿಂದಿರುಗುವ ಪ್ರತಿಜ್ಞೆ ಮಾಡಿದೆ.
ಇದನ್ನೂ ಓದಿ:ರಜತ್ ಶತಕದಬ್ಬರ, ಬೌಲರ್ಗಳ ಮಿಂಚು... ಲಖನೌ ವಿರುದ್ಧ ಗೆದ್ದು ಕ್ವಾಲಿಫೈಯರ್ಗೆ ಆರ್ಸಿಬಿ ಲಗ್ಗೆ
ಪಂದ್ಯ ಸೋತ ಬಳಿಕ ತಂಡದ ಮೆಂಟರ್ ಗೌತಮ್ ಗಂಭೀರ್ ಹೃದಯಸ್ಪರ್ಶಿ ಸಂದೇಶ ರವಾನಿಸಿದ್ದು, 'ನಮ್ಮ ಹೊಸ ತಂಡಕ್ಕೆ ಇದು ಉತ್ತಮ ಪಂದ್ಯಾವಳಿ ಆಗಿತ್ತು. ನಾವು ಮತ್ತಷ್ಟು ಬಲಿಷ್ಠವಾಗಿ ಮರಳುತ್ತೇವೆ' ಎಂದು ಬರೆದುಕೊಂಡಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದಲ್ಲಿ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್ ಇದ್ದು, ಮೆಂಟರ್ ಆಗಿ ಗೌತಮ್ ಗಂಭೀರ್ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೀಗ್ ಹಂತದಲ್ಲಿ 8 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದ್ದ ರಾಹುಲ್ ನಾಯಕತ್ವದ ಲಖನೌ ತಂಡ ಪ್ಲೇ-ಆಫ್ಗೆ ಪ್ರವೇಶ ಪಡೆದುಕೊಂಡಿತ್ತು. ಆದರೆ, ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ರೋಚಕ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ನಿನ್ನೆಯ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರಾಹುಲ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.