ಕರ್ನಾಟಕ

karnataka

ETV Bharat / sports

'ಮಹೀಂದ್ರಾ ಎಂಬ ನನ್ನ ಹೆಸರಲ್ಲಿ 'MAHI' ಅಕ್ಷರವಿದೆ': 'ಗ್ರೇಟ್​ ಫಿನಿಶರ್'​ ಧೋನಿಗೆ ಮೆಚ್ಚುಗೆಯ ಮಹಾಪೂರ! - ಧೋನಿ ಬ್ಯಾಟಿಂಗ್​ಗೆ ಆನಂದ್ ಮಹೀಂದ್ರಾ ಫಿದಾ

ನನ್ನ ಹೆಸರಿನಲ್ಲಿ ಮಹಿ ಎಂಬ ಅಕ್ಷರವಿರುವುದು ಸಂತೋಷವಾಗಿದೆ ಎಂದು ಉದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

Anand Mahindra tweet on Dhoni
Anand Mahindra tweet on Dhoni

By

Published : Apr 22, 2022, 3:16 PM IST

ಹೈದರಾಬಾದ್​:ಇಂಡಿಯನ್​ ಪ್ರೀಮಿಯರ್ ಲೀಗ್​​ನ 15ನೇ ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಸ್ಫೋಟಕ ಆಟ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಇದರ ಜೊತೆಗೆ ತಾವು ಗ್ರೇಟ್​ ಫಿನಿಶರ್​ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಧೋನಿ ಬ್ಯಾಟಿಂಗ್​​ ಪ್ರದರ್ಶನಕ್ಕೆ ಅನೇಕ ಕ್ರಿಕೆಟರ್ಸ್​, ಉದ್ಯಮಿಗಳು, ನಟರು ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಭರ್ಜರಿ ಆಟಕ್ಕೆ ಮನಸೋತಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ಮಹೀಂದ್ರಾ ಎಂಬ ಹೆಸರಿನಲ್ಲಿ 'ಮಹಿ' ಎಂಬ ಅಕ್ಷರವಿದೆ. ಇದರಿಂದ ನನಗೆ ಸಂತೋಷವಾಗಿದೆ. 'ಅದ್ಭುತ ಫಿನಿಶ್'​ ಎಂದು ಬರೆದುಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್​ ನೀಡಿದ್ದ 156ರನ್​ಗಳ ಗುರಿ ಬೆನ್ನತ್ತಿದ ಸಿಎಸ್​ಕೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿದ್ದರಿಂದ ಕೊನೆಯ ಓವರ್​​ನಲ್ಲಿ 17ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಹೇಂದ್ರ ಸಿಂಗ್ ಧೋನಿ ತಂಡವನ್ನg ಗೆಲುವಿನ ದಡ ಸೇರಿಸಿದರು. ಇವರ ಆಟಕ್ಕೆ ಇನ್ನಿಲ್ಲದ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ:ಕೊನೆ ಓವರ್​ನಲ್ಲಿ ಮುಂಬೈ 'ಫಿನಿಶ್​' ಮಾಡಿದ ಧೋನಿ... ರೋಹಿತ್​ ಬಳಗಕ್ಕೆ ಸತತ 7ನೇ ಸೋಲು

ಮುಂಬೈ ವಿರುದ್ಧ ಗ್ರೇಟ್ ಫಿನಿಷರ್​ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿರುವ ಧೋನಿಯ ಗುಣಗಾನ ಮಾಡಿರುವ ವಿರೇಂದ್ರ ಸೆಹ್ವಾಗ್​, ಓಂ ಫಿನಿಶಾಯ ನಮಃ ಎಂದು ಬರೆದುಕೊಂಡಿದ್ದಾರೆ. ಉಳಿದಂತೆ ಹರಭಜನ್ ಸಿಂಗ್, ಸುರೇಶ್ ರೈನಾ, ಕಾರ್ತಿಕ್ ಮುರುಳಿ,ಇರ್ಫಾನ್ ಪಠಾಣ್, ಕೆವಿನ್ ಪಿಟರ್ಸನ್​ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details