16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಾಲ್ಕರ ಘಟ್ಟ ಪ್ರವೇಶಿಸುವಲ್ಲಿ ಎಡವಿದೆ. ಆದರೆ, ಆರ್‌ಸಿಬಿ ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ ಅಭಿಮಾನಿಗಳಿಗೆ ಮನರಂಜನೆ ನೀಡುವಲ್ಲಿ ಎಡವಿಲ್ಲ ಎನ್ನಬಹುದು. ಈ ಬಾರಿ ವಿರಾಟ್ ಮತ್ತು ಫಾಫ್ ಡು ಪ್ಲೆಸಿಸ್ ಫಾರ್ಮ್ನಲ್ಲಿದ್ದ ಕಾರಣ ಟ್ರೋಫಿ ಜಯಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದರು. ಆದರೆ ಲೀಗ್ ಹಂತದಲ್ಲೇ ತಂಡದ ಎಲಿಮಿನೇಟ್ ಆಗಬೇಕಾಯಿತು.
ಆರ್ಸಿಬಿಯ ಐಪಿಎಲ್ 2023 ರಿಂದ ನಿರಾಶಾದಾಯಕ ನಿರ್ಗಮನದ ನಂತರ ಮುಂದಿನ ಋತುವಿನಲ್ಲಿ ತಂಡವು ಬಲವಾದ ಪುನರಾಗಮನವನ್ನು ಮಾಡುವ ಗುರಿಯನ್ನು ಹೊಂದಿದೆ ಎಂದು ಸ್ಟಾರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೋಹ್ಲಿ ಹೇಳಿದ್ದಾರೆ. ಟ್ವಿಟರ್ನಲ್ಲಿ ವಿರಾಟ್ ಅಭಿಮಾನಿಗಳ ಬಗ್ಗೆ ಮತ್ತು ತಂಡದ ಬಗ್ಗೆ ತುಂಬು ಹೃದಯದಿಂದ ಬರೆದುಕೊಂಡಿದ್ದಾರೆ.
ವಿರಾಟ್ ಟ್ವಿಟರ್ನಲ್ಲಿ ಪೋಸ್ಟ್ ಮೂರು ಫೋಟೋಗಳನ್ನು ಹಂಚಿಕೊಂಡು ಅದರಲ್ಲಿ ಧನ್ಯವಾದ ಬೆಂಗಳೂರು ಎಂದು ಬರೆದುಕೊಂಡಿದ್ದಾರೆ. ಅದಕ್ಕೆ "ಗೆಲುವಿನ ಕ್ಷಣಗಳನ್ನು ಹೊಂದಿದ್ದೆವು. ಆದರೆ, ದುರದೃಷ್ಟವಶಾತ್ ನಾವು ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಲಿಲ್ಲ. ನಿರಾಶೆಯಾಗಿದೆ, ಆದರೆ ನಾವು ತಲೆ ತಗ್ಗಿಸುವ ಅಗತ್ಯವಿಲ್ಲ. ನಮ್ಮ ನಿಷ್ಠಾವಂತ ಅಭಿಮಾನಿಗಳು ಪ್ರತಿ ಹಂತದಲ್ಲೂ ನಮಗೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞ. ತರಬೇತುದಾರರಿಗೆ, ಆರ್‌ಸಿಬಿ ತಂಡಕ್ಕೆ ಮತ್ತು ನನ್ನ ಸಹ ಆಟಗಾರಿಗೆ ಧನ್ಯವಾದಗಳು. ನಾವು ಮತ್ತೆ ಬಲಶಾಲಿಯಾಗುವ ಗುರಿ ಹೊಂದಿದ್ದೇವೆ" ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಮತ್ತೊಂದೆಡೆ, ಪ್ರಸ್ತುತ ಐಪಿಎಲ್ 2023 ರ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿರುವ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ ಮತ್ತು ಇತರ ತಂಡಗಳಿಗೆ ಪ್ಲೇಆಫ್‌ಗೆ ಶುಭ ಹಾರೈಸಿದ್ದಾರೆ. "2 ತಿಂಗಳ @iplt20 ಎಷ್ಟು ಅದ್ಭುತವಾಗಿದೆ. ದುರದೃಷ್ಟವಶಾತ್ ಪಂದ್ಯಾವಳಿಯು ನಮಗೆ ಕೊನೆಗೊಂಡಿದೆ. ಬೆಂಬಲಿಸಿದ್ದಕ್ಕಾಗಿ ಮತ್ತು ಅದನ್ನು ವಿಶೇಷವಾಗಿಸಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪ್ಲೇ ಆಪ್ ಪ್ರವೇಶಿಸಿದ 4 ತಂಡಗಳಿಗೆ ಶುಭವಾಗಲಿ. ಈಗ ಸ್ವಲ್ಪ ಮನೆಯ ಸಮಯ" ಎಂದು ಡು ಪ್ಲೆಸಿಸ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.