ಭಾರತದ ಕ್ರಿಕೆಟ್ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ವಿಶಿಷ್ಟ ಸ್ಥಾನಮಾನ ಇರುವುದಂತೂ ಖಂಡಿತ. ಅವರಿಗೆ ಕ್ರಿಕೆಟ್ ಲೋಕದ ದಿಗ್ಗಜರೇ ಅಭಿಮಾನಿಗಳಾಗಿದ್ದಾರೆ. ಭಾರತಕ್ಕೆ ತಂಡವನ್ನು ಮೂರು ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಹಿರಿಮೆ ಧೋನಿ ಅವರದ್ದು. ಇದಲ್ಲದೇ ಭಾರತಕ್ಕೆ ಎರಡನೇ ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್ನ್ನೂ ಸಹಾ ತಂದುಕೊಟ್ಟಿದ್ದಾರೆ. ಅಲ್ಲದೇ ಭಾರತಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. (ಧೋನಿ ನಾಯಕರಾಗಿದ್ದಾರೆ ಟೆಸ್ಟ್ ಚಾಂಪಿಯನ್ಶಿಪ್ ಇರಲಿಲ್ಲ.)
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಧೋನಿ ದೂರ ಸರಿದು ಸುಮಾರು ನಾಲ್ಕು ವರ್ಷಗಳಾಯಿತು. ಅವರು ಕೇಲವ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ವರ್ಷ ಅವರ ಕೊನೆಯ ಐಪಿಎಲ್ ಆವೃತ್ತಿ ಎಂದು ಹೇಳಲಾಗುತ್ತಿತ್ತು. 34 ವರ್ಷದ ಧೋನಿ ನಿವೃತ್ತಿಯ ಬಗ್ಗೆ ಕೆಲವೊಂದು ಊಹಾಪೋಹಗಳು ಹರಿದಾಡುತ್ತಲೇ ಇದೆ. ಐಪಿಎಲ್ ಆರಂಭದ ಸಮಯದಲ್ಲಿ ಕೋಲ್ಕತ್ತಾ ಪಂದ್ಯದ ವೇಳೆ ಧೋನಿಗೆ ವಿಶೇಷ ಗೌರವದ ವಿದಾಯ ಪಂದ್ಯವನ್ನು ಆಡಿಸಲಾಗುವುದು ಎಂದಿತ್ತು. ಅಲ್ಲದೇ ಚೆನ್ನೈ ತಂಡ ಆಡಿದ ಎಲ್ಲಾ ಕಡೆ ಧೋನಿ ಅಭಿಮಾನಿಗಳು ಕಿಕ್ಕಿರಿದು ಸೇರಿ ಸಂಭ್ರಮಿಸಿದ್ದರು.
ಈ ನಿವೃತ್ತಿಯ ಬಗ್ಗೆ ಮಾತುಗಳು ಓಡಾಡುತ್ತಿರುವ ಸಂದರ್ಭದಲ್ಲಿ, ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಧೋನಿಯ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಕೊನೆಯ ತವರು ಪಂದ್ಯದ ವೇಳೆ ವಿಶೇಷ ಉಡುಗೊರೆಯನ್ನೂ ಧೋನಿಯಿಂದ ಪಡೆದುಕೊಂಡಿದ್ದಾರೆ. ಕೋಲ್ಕತ್ತಾ ಎದುರಿನ ಪಂದ್ಯದ ನಂತರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕಾಲು ನೋವಿದ್ದರೂ ಧೋನಿ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನದ ಸುತ್ತ ನಡೆದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಈ ವೇಳೆ ಸುನೀಲ್ ಗವಾಸ್ಕರ್ ಧೋನಿಯ ಬಳಿ ತೆರಳಿ ಅವರಿಂದ ಶರ್ಟ್ ಮೇಲೆ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.