ಚೆನ್ನೈ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 14 ನೇ ಆವೃತ್ತಿ ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್. ಧೋನಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಗುರುವಾರ, ಸಿಎಸ್‌ಕೆ ಟ್ವಿಟ್ಟರ್ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಧೋನಿ ಬ್ಯಾಟಿಂಗ್ ಅಭ್ಯಾಸ ನಡೆಸಿರುವುದನ್ನು ಕಾಣಬಹುದಾಗಿದೆ. ಅಭ್ಯಾಸದ ವೇಳೆ ಧೋನಿ ಬಾಲನ್ನು ಸ್ಟೇಡಿಯಂನಿಂದ ಆಚೆಗೆ ಹೊಡೆದಿದ್ದಾರೆ. "ನಾವು ಮುಂಬರುವ ಐಪಿಎಲ್ 14 ಆವೃತ್ತಿಯ ತಯಾರಿಗಾಗಿ ಮಾರ್ಚ್ 8 ಅಥವಾ 9 ರಿಂದ ನಮ್ಮ ಶಿಬಿರ ಪ್ರಾರಂಭಿಸಿದ್ದೇವೆ. ನಾಯಕ ಎಂಎಸ್ ಧೋನಿ ಹಾಗೂ ಅಂಬಾಟಿ ರಾಯುಡು ಈಗಾಗಲೆ ಶಿಬಿರದಲ್ಲಿ ಭಾಗಿಯಾಗಿದ್ದು, ಉಳಿದ ಆಟಗಾರರು ಆದಷ್ಟೂ ಬೇಗ ಶಿಬಿರ ಸೇರಲಿದ್ದಾರೆ." ಎಂದು ಸಿಎಸ್‌ಕೆ ಸಿಇಒ ವಿಶ್ವನಾಥನ್ ಹೇಳಿದರು.