ಕರ್ನಾಟಕ

karnataka

ETV Bharat / sports

"ನಿಮ್ಮನ್ನೆಲ್ಲ ತುಂಬಾ ಮಿಸ್​ ಮಾಡಿಕೊಳ್ಳಲಿದ್ದೇನೆ".. SRH ಅಭಿಮಾನಿಗಳಿಗೆ ವಾರ್ನರ್​ ಭಾವನಾತ್ಮಕ ಪೋಸ್ಟ್​!

ಸನ್​ರೈಸರ್ಸ್​ ಹೈದರಾಬಾದ್​ ತಂಡದ ಡೇವಿಡ್​ ವಾರ್ನರ್​ ಇದೀಗ ಅಭಿಮಾನಿಗಳಿಗಾಗಿ ಭಾವನಾತ್ಮಕ ಪೋಸ್ಟ್​​ ಟ್ವೀಟ್ ಮಾಡಿದ್ದಾರೆ.

David Warner
David Warner

By

Published : Oct 8, 2021, 9:39 PM IST

ಅಬುದಾಭಿ: 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್​​​ ಆಸ್ಟ್ರೇಲಿಯಾದ ಡೇವಿಡ್​​ ವಾರ್ನರ್​ಗೆ ಸಹಿಗಿಂತಲೂ ಅತಿಹೆಚ್ಚು ಕಹಿಯಾಗಿದೆ. ಆರಂಭದಲ್ಲಿ ಸನ್​ರೈಸರ್ಸ್​​ ಹೈದರಾಬಾದ್​ ತಂಡದ ನಾಯಕತ್ವ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದಾದ ಬಳಿಕ ಆಡುವ 11ರ ಬಳಗದಿಂದಲೂ ಕೈಬಿಟ್ಟು ಬೆಂಚ್​ ಕಾಯುವಂತೆ ಮಾಡಲಾಯಿತು. ಇದಕ್ಕೆಲ್ಲ ಈಗಾಗಲೇ ಪ್ರತಿಕ್ರಿಯೆ ನೀಡುವ ಮೂಲಕ ಆಕ್ರೋಶ ಹೊರಹಾಕಿರುವ ಸ್ಫೋಟಕ ಬ್ಯಾಟ್ಸ್​ಮನ್​ ಇದೀಗ ಮತ್ತೊಂದು ಭಾವನಾತ್ಮಕ ಪೋಸ್ಟ್ ಹಾಕಿಕೊಂಡಿದ್ದಾರೆ.

ಐಪಿಎಲ್​​ನಲ್ಲಿ 2014ರಿಂದಲೂ ಫ್ರಾಂಚೈಸಿ ಪರ ಆಡುತ್ತಿರುವ ಅವರು, 2016ರಲ್ಲಿ ಏಕಾಂಗಿ ಪ್ರದರ್ಶನ ತೋರಿ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. 2018ರಲ್ಲಿ ಬಾಲ್ ಟ್ಯಾಂಪರಿಂಗ್​ ಪ್ರಕರಣದಿಂದ ಒಂದು ವರ್ಷ ನಿಷೇಧಕ್ಕೊಳಗಾಗಿ, 2019ರಲ್ಲಿ ಕಮ್ ಬ್ಯಾಕ್ ಮಾಡಿದ್ದರು. ಮತ್ತೆ 2020ರಲ್ಲಿ ತಂಡದ ನಾಯಕತ್ವಕ್ಕೆ ಮರಳಿದ್ದರು. ಆದರೆ, ಈ ಸಲ ಅವರಿಗೆ ತಂಡದಲ್ಲಿ ಹೇಳಿಕೊಳ್ಳುವಂತಹ ಅವಕಾಶ ಸಿಗಲಿಲ್ಲ.

ಅಭಿಮಾನಿಗಳಿಗೆ ವಾರ್ನರ್​ ಭಾವನಾತ್ಮಕ ಪೋಸ್ಟ್​

ಸನ್​ರೈಸರ್ಸ್ ಹೈದರಾಬಾದ್​ ತಂಡ ಇಂದು ಮುಂಬೈ ಇಂಡಿಯನ್ಸ್​​ ವಿರುದ್ಧ ಲೀಗ್​​ ಹಂತದ ಕೊನೆಯ ಪಂದ್ಯದಲ್ಲಿ ಭಾಗಿಯಾಗಿದ್ದು, ಇದರ ಬೆನ್ನಲ್ಲೇ ವಾರ್ನರ್​ ಅಭಿಮಾನಿಗಳಿಗೆ ಭಾವನಾತ್ಮಕ ಟ್ವೀಟ್ ಮಾಡಿದ್ದಾರೆ.

ಸನ್​ರೈಸರ್ಸ್​ ಹೈದರಾಬಾದ್​ ತಂಡ ಬೆಂಬಲಿಸಿದ್ದಕ್ಕಾಗಿ ಧನ್ಯವಾದ. ನನಗಾಗಿ ರಚನೆ ಮಾಡಿರುವ ನೆನಪುಗಳಿಗೆ, ತೋರಿಸಿದ ಬೆಂಬಲಕ್ಕಾಗಿ ಆಭಾರಿಯಾಗಿದ್ದೇನೆ. ಇದು ಉತ್ತಮ ಪ್ರಯಾಣ. ನನ್ನ ಕುಟುಂಬ ಹಾಗೂ ನಿಮ್ಮೆಲ್ಲರನ್ನೂ ಕಳೆದುಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಸಲದ ಆವೃತ್ತಿಯಲ್ಲಿ ವಾರ್ನರ್​ ಕೇವಲ 8 ಪಂದ್ಯಗಳನ್ನಾಡಿದ್ದು, 195ರನ್​ಗಳಿಕೆ ಮಾಡಿದ್ದಾರೆ. ಹೀಗಾಗಿ ಅವರನ್ನ ನಾಯಕತ್ವದಿಂದ ಕೆಳಗಿಳಿಸಿ ವಿಲಿಯಮ್ಸನ್​ಗೆ ಚಾನ್ಸ್​ ನೀಡಲಾಗಿತ್ತು.

ಇದನ್ನೂ ಓದಿರಿ: ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!?

ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ ಎಂದಿರುವ ವಾರ್ನರ್​

ಆಡುವ 11ರ ಬಳಗದಿಂದ ಅವರನ್ನ ಕೈಬಿಟ್ಟಿದ್ದರಿಂದ ತಂಡದ ಸದಸ್ಯರೊಂದಿಗೆ ಕುಳಿತುಕೊಳ್ಳುವ ಬದಲು ಗ್ಯಾಲರಿಯಲ್ಲಿ ಕುಳಿತುಕೊಂಡು ತಂಡಕ್ಕೆ ಬೆಂಬಲ ನೀಡಿದ್ದ ವಾರ್ನರ್​, ನಾ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬ ಪೋಸ್ಟ್​ ಸಹ ಹಾಕಿಕೊಂಡಿದ್ದರು. ಮುಂದಿನ ವರ್ಷದ ಐಪಿಎಲ್​ಗಾಗಿ ಮೆಗಾ ಆಡಿಷನ್​ ನಡೆಯಲಿದ್ದು, ಆಸ್ಟ್ರೇಲಿಯಾದ ಈ ಬ್ಯಾಟ್ಸ್​ಮನ್​ ಹೊಸ ತಂಡ ಸೇರುವ ಸಾಧ್ಯತೆ ಇದೆ.

ABOUT THE AUTHOR

...view details