ಕರ್ನಾಟಕ

karnataka

ETV Bharat / sports

'ಮುಂದಿನ IPLನಲ್ಲಿ ಸಿಗೋಣ': ಅಭಿಯಾನದ ಉದ್ದಕ್ಕೂ ಸಾಥ್​​ ನೀಡಿದ ಎಲ್ಲರಿಗೂ ಥ್ಯಾಂಕ್ಸ್​​ ಎಂದ ಕೊಹ್ಲಿ - ಐಪಿಎಲ್ ವಿರಾಟ್​ ಕೊಹ್ಲಿ ಟ್ವೀಟ್

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ.

Virat Kohli Emotional Message
Virat Kohli Emotional Message

By

Published : May 28, 2022, 8:36 PM IST

Updated : May 28, 2022, 9:06 PM IST

ಅಹಮದಾಬಾದ್​​:15ನೇ ಆವೃತ್ತಿ ಐಪಿಎಲ್​​ ಕ್ವಾಲಿಫೈಯರ್​​ನಲ್ಲಿ ಸೋಲು ಕಾಣುವ ಮೂಲಕ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ತಂಡದ ಮಾಜಿ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದು, ಮುಂದಿನ ಆವೃತ್ತಿಯಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗಮನಾರ್ಹ ಪ್ರದರ್ಶನದೊಂದಿಗೆ ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತ್ತು. ಆದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಕ್ಯಾಪ್ಟನ್​ ಟ್ವೀಟ್ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಟ್ವೀಟ್ ಇಂತಿದೆ: ಕೆಲವೊಮ್ಮೆ ಗೆಲ್ಲುತ್ತೀರಿ, ಕೆಲವೊಮ್ಮೆ ಸೋಲುತ್ತೀರಿ. ಆದರೆ, 12th ಮ್ಯಾನ್ ಆರ್ಮಿಯಾಗಿ ನಿವೆಲ್ಲರೂ ಅಭಿಯಾನದ ಉದ್ದಕ್ಕೂ ನಮಗೆ ಬೆಂಬಲ ನೀಡುತ್ತೀರಿ. ಜೊತೆಗೆ ಕ್ರಿಕೆಟ್​​ ಅನ್ನು ವಿಶೇಷವಾಗಿಸಿದ್ದೀರಿ. ಕಲಿಕೆ ಎಂದಿಗೂ ನಿಲ್ಲಲ್ಲ ಎಂದಿರುವ ವಿರಾಟ್​, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಹಾಗೂ ಫ್ರಾಂಚೈಸಿಯ ಭಾಗವಾಗಿರುವ ಎಲ್ಲರಿಗೂ ಥ್ಯಾಂಕ್ಸ್​. ಮುಂದಿನ ಆವೃತ್ತಿಯಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 16 ಪಂದ್ಯಗಳಿಂದ ಕೇವಲ 341ರನ್​​ಗಳಿಕೆ ಮಾಡಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿಕೊಂಡಿವೆ. ವಿಶೇಷ ಎಂದರೆ, ಪ್ರಸಕ್ತ ಸಾಲಿನ ಐಪಿಎಲ್​​ನಲ್ಲೇ ವಿರಾಟ್ ಮೂರು ಸಲ ಗೋಲ್ಡನ್​ ಡಕ್​ ಆಗಿದ್ದಾರೆ. ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲೂ ವಿರಾಟ್​ ಕೊಹ್ಲಿ ಕೇವಲ 7ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿ, ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಇವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಕಳೆದ ಕೆಲ ತಿಂಗಳಿಂದ ವಿರಾಟ್​ ಕೊಹ್ಲಿ ನಿರಂತರವಾಗಿ ಕ್ರಿಕೆಟ್​​ ಆಡಿರುವ ಕಾರಣ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ.

Last Updated : May 28, 2022, 9:06 PM IST

ABOUT THE AUTHOR

...view details