ಹೈದರಾಬಾದ್ (ತೆಲಂಗಾಣ):ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ನಿನ್ನೆ ರಾತ್ರಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಸರ್ಸ್ ಹೈದರಾಬಾದ್ ಅನ್ನು ಎರಡು ವಿಕೆಟ್ನಿಂದ ಮಣಿಸಿತು. 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಆರಂಭಿಕ ಉತ್ತಮ ಜೋಡಿಗಳಾದ ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಗೆಲುವಿನ ರೂವಾರಿಗಳಾದರು. ಇವರ 172 ರನ್ ಜೊತೆಯಾಟ ತಂಡಕ್ಕೆ ಪ್ರಮುಖ ಪಂದ್ಯದಲ್ಲಿ ಸರಳ ಗೆಲುವು ತಂದುಕೊಟ್ಟಿತು.
ಪಂದ್ಯದ ನಂತರ ಈ ಜೋಡಿ ಪರಸ್ಪರ ಸಂದರ್ಶನ ಮಾಡಿರುವುದನ್ನು ಐಪಿಎಲ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡಿದೆ. ಇದರಲ್ಲಿ ಫಾಫ್ ನುಡಿದ ಭವಿಷ್ಯದ ವಿರಾಟ್ ಹೇಳುತ್ತಾರೆ. ಸನ್ ರೈಸರ್ಸ್ ಕ್ಲಾಸೆನ್ ಅವರ ಶತಕ ನೆರವಿನಿಂದ 186 ರನ್ ಸ್ಪರ್ಧಾತ್ಮಕ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೀಡಿತ್ತು. ಇದನ್ನು ಬೆನ್ನಟ್ಟಲು ಕ್ರೀಸ್ಗೆ ಇಳಿಯುವ ಮುನ್ನ ಫಾಫ್ ಮತ್ತು ವಿರಾಟ್ ಮಾತನಾಡಿಕೊಂಡಾಗ, ಇಂದು ಮೂವರು ಆರಂಭಿಕರಲ್ಲಿ ಒಬ್ಬರು ಶತಕ ಗಳಿಸುತ್ತಾರೆ ಎಂದು ಡು ಪ್ಲೆಸಿಸ್ ಹೇಳಿದ್ದರಂತೆ. ಅದಕ್ಕೆ ವಿರಾಟ್, ಈ ಆವೃತ್ತಿಯಲ್ಲಿ ಉತ್ತಮ ಫಾರ್ಮ್ನಲ್ಲಿ ಬ್ಯಾಟ್ ಬೀಸಿರುವ ನೀನೇ (ಫಾಫ್) ಶತಕ ಮಾಡಬಹುದು ಎಂದಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಆದರೆ, ಅದಕ್ಕೆ ಪ್ರತಿಕ್ರಿಯಿಸಿದ ಫಾಫ್ ಡು ಪ್ಲೆಸಿಸ್, ವಿರಾಟ್ ನೀನೇ ಇಂದು ಶತಕ ಮಾಡುವವನು ಎಂದಿದ್ದರಂತೆ. ಇದಕ್ಕೆ ಬಲವಾದ ಕಾರಣವನ್ನು ಫಾಫ್ ತಿಳಿಸಿದ್ದಾರೆ. ಕಳೆಪೆ ಪಿಚ್ನಲ್ಲಿ ಪಂದ್ಯಗಳು ನಡೆಯುತ್ತಿವೆ. ಇದರಲ್ಲಿ ಆಡುವುದು ಕಷ್ಟ ಎಂದು ಅಭ್ಯಾಸದ ಸಮಯದಲ್ಲಿ ವಿರಾಟ್ ಹೇಳಿದ್ದು ಮತ್ತು ಅದಕ್ಕೆ ತಕ್ಕಂತೆ ನೆಟ್ಸ್ನಲ್ಲಿ ಕೊಹ್ಲಿ ಬೆವರಿಳಿಸಿದ್ದರಿಂದ ಶತಕದ ಸಾಧ್ಯತೆಯ ಬಗ್ಗೆ ಹೇಳಿದ್ದರು ಎನ್ನುತ್ತಾರೆ.
ಪಿಚ್ ಬ್ಯಾಟಿಂಗ್ಗೆ ಸಹಕಾರಿಯಾಗಿ ಇಲ್ಲದಿದ್ದಾಗ ಅದನ್ನೇ ಶಕ್ತಿಯಾಗಿಸಿ, ಕೆಲ ಉತ್ತಮ ಶಾಟ್ಗಳಿಂದ ಭರವಸೆ ಮೂಡಿಸಿಕೊಂಡು ರನ್ ಕದಿಯಬೇಕು. ನೆಟ್ಸ್ನಲ್ಲಿ ದೊಡ್ಡ ಹೊಡೆತಗಳನ್ನು ಅಭ್ಯಾಸ ಮಾಡಿದರೆ ಪಿಚ್ಗೆ ಬರುವಾಗ ಹೆಚ್ಚು ಭರವಸೆ ನಮ್ಮ ಮೇಲೆಯೇ ಇರುತ್ತದೆ. ಇದರಿಂದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಲು ಸಾಧ್ಯ ಎಂದು ವಿರಾಟ್ ಬ್ಯಾಡ್ ಪಿಚ್ನಲ್ಲಿ ಶತಕ ಗಳಿಸಿದ ಅನುಭವವನ್ನು ಹೇಳಿಕೊಂಡಿದ್ದಾರೆ.
ದಾಖಲೆಯ ಜೊತೆಯಾಟ ಬರೆದ ಜೋಡಿ: ವಿರಾಟ್ ಕೊಹ್ಲಿ ಮತ್ತು ಫಾಫ್ ಡು ಪ್ಲೆಸಿಸ್ ಜೋಡಿ ಈ ಆವೃತ್ತಿಯಲ್ಲಿ 872 ರನ್ನ ಜೊತೆಯಾಟವನ್ನು ಮಾಡಿದ್ದಾರೆ. ವಿರಾಟ್ ಇದನ್ನು ಸಾವಿರದ ಗಡಿ ತಲುಪಿಸುವ ಆಸೆಯನ್ನೂ ಸಂದರ್ಶನದ ವೇಳೆ ಹಂಚಿಕೊಂಡಿದ್ದಾರೆ. ಈರ್ವರ ಈ ಜೊತೆಯಾಟದಿಂದ ಈ ಆವೃತ್ತಿಯ ಬೆಸ್ಟ್ ಓಪನ್ ಪೇರ್ ಆಗಿದ್ದಾರೆ. ಫಾಫ್ ಆರೆಂಜ್ ಕ್ಯಾಪ್ ಹೊಂದಿದ್ದರೆ, ವಿರಾಟ್ ಈ ರೇಸ್ನಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಜೊತೆಯಾಟದ ರಹಸ್ಯ ಬಿಚ್ಚಿಟ್ಟ ಫಾಫ್-ವಿರಾಟ್: ಯಶಸ್ವಿ ಜೊತೆಯಾಟದ ರಹಸ್ಯವನ್ನು ಇಬ್ಬರೂ ಹೇಳಿಕೊಂಡಿದ್ದಾರೆ. ಇಬ್ಬರ ನಡುವಿನ ರನ್ ಗಳಿಸುವ ರೀತಿ ಹಾಗೂ ಅವರ ಅಭಿರುಚಿಯೇ ಕಾರಣ ಎಂದಿದ್ದಾರೆ. ವಿರಾಟ್ ಮತ್ತು ಫಾಫ್ ಅವರ ಟ್ಯಾಟೂಗಳ ಬಗ್ಗೆ ಇತರರು ಮಾತನಾಡುತ್ತಾ ಇಂಕ್ ಬಾಯ್ಸ್ ಎನ್ನುತ್ತಾರೆ, ಇದು ಹಾಸ್ಯವಾದರೂ ನಿಜ. ಆದರೆ, ಇಬ್ಬರ ನಡುವಿನ ಹೊಂದಾಣಿಗೆ ಈ ಜೊತೆಯಾಟಕ್ಕೆ ಕಾರಣ ಎಂದು ಫಾಫ್ ಉಲ್ಲೇಖಿಸುತ್ತಾರೆ. ಇದರ ಜೊತೆಗೆ ವಾಚ್, ಟ್ಯಾಟೂ, ಊಟ ಮತ್ತು ಫಿಟ್ನೆಸ್ ಇವೆಲ್ಲದರಲ್ಲೂ ಒಂದೇ ರೀತಿಯ ಅಭಿರುಚಿ ಇರುವುದು ಆನ್ ಫೀಲ್ಡ್ ಮತ್ತು ಆಫ್ ಫಿಲ್ಡ್ನ ಹೊಂದಾಣಿಕೆಯ ಅಂಶ ಎಂದು ಇಬ್ಬರು ಪರಸ್ಪರ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ:''Real King Virat Kohli'': ವಿರಾಟ್ ಬ್ಯಾಟಿಂಗ್ ಕೊಂಡಾಡಿದ ಪಾಕ್ ಕ್ರಿಕೆಟಿಗ, ಬಾಬರ್ ಫ್ಯಾನ್ಸ್ಗೆ ಟಾಂಗ್!