ಬೆಂಗಳೂರು:ವಿರಾಟ್ ಕೊಹ್ಲಿ 2022ರ ಕೊನೆಯಲ್ಲಿ ಸುಮಾರು ಎರಡು ವರ್ಷಗಳ ನಂತರ ಫಾರ್ಮ್ಗೆ ಮರಳಿದರು. ಎರಡು ವರ್ಷ ಅವರ ಬ್ಯಾಟ್ನಿಂದ ರನ್ ಬರುತ್ತಿಲ್ಲ ಎಂದು ಹಲವಾರು ಟೀಕೆಗಳಿಗೆ ವಿರಾಟ್ ಗುರಿಯಾಗಿದ್ದರು. ಫಾರ್ಮ್ಗೆ ಬಂದ ನಂತರ ವಿರಾಟ್ ಮತ್ತೆ ರನ್ ಮಷಿನ್ ಆಗಿದ್ದಾರೆ. ಐಪಿಎಲ್ನಲ್ಲಿ ಅವರು ತಮ್ಮ ಗೋಲ್ಡನ್ ಫಾರ್ಮ್ನ್ನು ಮುಂದುವರೆಸಿದ್ದಾರೆ.
ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯಲ್ಲಿ ಐದನೇ ಅರ್ಧಶತಕವನ್ನು ಗಳಿಸಿದರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನ್ನು ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಸೋಲನುಭವಿಸಿತು. ವಿರಾಟ್ ಅರ್ಧಶತಕ ವ್ಯರ್ಥವಾಯಿತು.
ಕೋಲ್ಕತ್ತಾ ಆರ್ಸಿಬಿಗೆ 201 ರನ್ನ ಗುರಿ ನೀಡಿತು. ಈ ರನ್ ಚೇಸಿಂಗ್ ಮಾಡುವಾಗ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿದರು. ಅವರ ಜೊತೆ ತಂಡದಲ್ಲಿ ಮಹಿಪಾಲ್ ಲೊಮ್ರೋರ್ 18 ಎಸೆತಗಳಲ್ಲಿ 34 ರನ್ ಗಳಿಸಿದ ಚೇಸಿಂಗ್ನಲ್ಲಿ ನೆರವಾದರು. ಆದರೆ, ಬೇರಾವ ಬ್ಯಾಟರ್ಗಳು ರನ್ ಗಳಿಸದ ಕಾರಣ ತಂಡ 21 ರನ್ ಸೋಲು ಕಾಣಬೇಕಾಯಿತು.
ಈ ನಡುವೆ ವಿರಾಟ್ ಒಂದು ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ಈಗ ಟಿ-20ಯಲ್ಲಿ ಒಂದೇ ಸ್ಥಳದಲ್ಲಿ 3,000 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಇದುವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 92 ಇನ್ನಿಂಗ್ಸ್‌ಗಳಲ್ಲಿ 3,015 ರನ್ ಗಳಿಸಿದ್ದಾರೆ. ಅವರ ನಂತರ ಬಾಂಗ್ಲಾದೇಶದ ಮಾಜಿ ನಾಯಕರಾದ ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಪಟ್ಟಿಯಲ್ಲಿದ್ದಾರೆ. ಮೀರ್‌ಪುರದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ರಹೀಮ್ 121 ಇನ್ನಿಂಗ್ಸ್‌ಗಳಲ್ಲಿ 2,989 ರನ್ ಗಳಿಸಿದ್ದರೆ, ಮಹಮುದುಲ್ಲಾ 130 ಇನ್ನಿಂಗ್ಸ್‌ಗಳಲ್ಲಿ 2,813 ರನ್ ಗಳಿಸಿದ್ದಾರೆ.