ನವದೆಹಲಿ : ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ತಮ್ಮ ರೆಸ್ಟೋರೆಂಟ್‌ಗೆ ಆಹ್ವಾನಿಸಿ ಅದ್ಧೂರಿ ಔತಣ ನೀಡಿದ್ದಾರೆ. ಮುಂದಿನ ಪಂದ್ಯಕ್ಕೂ ಮುನ್ನ ಆರ್‌ಸಿಬಿ ತಂಡದ ಎಲ್ಲ ಆಟಗಾರರು ಕೊಹ್ಲಿ ಅವರು ಒನ್8 ರೆಸ್ಟೋರೆಂಟ್ನಲ್ಲಿ ಸಖತ್ ಮೋಜು ಮಸ್ತಿ ಮಾಡಿದ್ದಾರೆ. ರೆಸ್ಟೊರೆಂಟ್‌ನಲ್ಲಿ ಊಟ ಮುಗಿದ ಬಳಿಕ ತಂಡದ ನಾಲ್ವರು ಆಟಗಾರರು ತಮ್ಮ ಚಿತ್ರಗಳನ್ನು ಹಂಚಿಕೊಂಡು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮೊಹಮ್ಮದ್ ಸಿರಾಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಫೋಸ್ಟ್ ಇದನ್ನೂ ಓದಿ :ಲಕ್ನೋ ತಂಡಕ್ಕೆ ತವರಿನಲ್ಲೇ ಶಾಕ್ ಕೊಟ್ಟ ಆರ್‌ಸಿಬಿ: ಫೋಟೋಗಳಲ್ಲಿ ಪಂದ್ಯದ ಹೈಲೈಟ್ಸ್ ನೋಡಿ..
ನಿನ್ನೆ (ಬುಧುವಾರ) ರಾತ್ರಿ ಆರ್‌ಸಿಬಿ ತಂಡ ದೆಹಲಿಗೆ ಆಗಮಿಸಿದ್ದು, ಬಳಿಕ ವಿರಾಟ್ ಕೊಹ್ಲಿ ಇಡೀ ತಂಡವನ್ನು ತಮ್ಮ ರೆಸ್ಟೋರೆಂಟ್‌ಗೆ ಆಹ್ವಾನಿಸಿದ್ದು, ಆಟಗಾರರಿಗಾಗಿ ಏರ್ಪಡಿಸಿದ ರಸದೌತಣವನ್ನು ಸವಿದು ಎಲ್ಲರೂ ಸಂತೋಷಗೊಂಡಿದ್ದಾರೆ. ಈ ಸಂದರ್ಭದಲ್ಲಿ, ಆರ್‌ಸಿಬಿ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಕರಣ್ ಶರ್ಮಾ, ವೇಯ್ನ್ ಪಾರ್ನೆಲ್ ಸೇರಿದಂತೆ ಸಿದ್ಧಾರ್ಥ್ ಕೌಲ್ ಜೊತೆಗಿರುವ ಫೋಟೊವೊಂದನ್ನು ಹಂಚಿಕೊಂಡಿದ್ದು, " ಡಿನ್ನರ್ ಕ್ಲಾಸ್ ಥ್ಯಾಂಕ್ಸ್ ವಿರಾಟ್ ಭಾಯ್ " ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ :ನಾವು ನೋಡೋದೆಲ್ಲ ದೃಷ್ಟಿಕೋನವಷ್ಟೇ, ಸತ್ಯವಲ್ಲ: ವಿರಾಟ್ ಕೊಹ್ಲಿ ಮಾರ್ಮಿಕ ಪೋಸ್ಟ್
ಮುಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಆರ್‌ಸಿಬಿ ಇದೇ ಶನಿವಾರ 6 ರಂದು ಆಡಲಿದ್ದು, ಇದಕ್ಕಾಗಿ ಆರ್‌ಸಿಬಿ ದೆಹಲಿ ತಲುಪಿದೆ. ಲಕ್ನೋದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಹೀನಾಯವಾಗಿ ಸೋಲಿಸಿದ ಆರ್‌ಸಿಬಿ ಭಾರಿ ಉತ್ಸಾಹದಲ್ಲಿದೆ. ಆರ್‌ಸಿಬಿ ಈವರೆಗೆ 9 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 5 ಪಂದ್ಯಗಳನ್ನು ಗೆದ್ದು, 4 ರಲ್ಲಿ ಸೋಲಿನ ಕಹಿ ಕಂಡಿದೆ. ಈ ಮೂಲಕ ಒಟ್ಟು 10 ಅಂಕ ಗಳಿಸಿದೆ. ಡೆಲ್ಲಿ ವಿರುದ್ದ ಪಂದ್ಯವನ್ನು ಗೆಲ್ಲುವ ಮೂಲಕ 5 ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಮುಂದಿನ ಪಂದ್ಯ ಗೆಲ್ಲುವ ಮೂಲಕ ಆರ್‌ಸಿಬಿ ಅಗ್ರಸ್ಥಾನದಲ್ಲಿರುವ ಎರಡು ತಂಡಗಳ ಸಾಲಿನಲ್ಲಿ ಸೇರ್ಪಡೆಗೊಳ್ಳಲು ಕಾತರತೆ ಹೊಂದಿದೆ. ಅದಕ್ಕಾಗಿಯೇ ಆರ್‌ಸಿಬಿ ಆಡಗಾರರು ಮೈದಾನದಲ್ಲಿ ಅಭ್ಯಾಸಕ್ಕೂ ಮುನ್ನ ರಿಲೀಪ್ ಮೂಡ್ಗೆ ಜಾರಿದ್ದಾರೆ.
ಭಾರತ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮದೇ ಆದ ಆನೇಕ ರೆಸ್ಟೋರೆಂಟ್‌ಗಳನ್ನು ಹೊಂದಿದ್ದಾರೆ. ದೇಶದ ಇತರ ಪ್ರಮುಖ ನಗರಗಳಲ್ಲಿ ' ಒನ್8 ಎಂಬ ಹೆಸರಿನಿಂದ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿದ್ದಾರೆ. ವಿರಾಟ್ ಕೊಹ್ಲಿ ಆನೇಕ ಬಾರಿ ಹೀಗೆ ತಂಡದ ಆಟಗಾರರನ್ನು ತಮ್ಮ ರೆಸ್ಟೋರೆಂಟ್‌ಗೆ ಆಹ್ವಾನಿಸಿ ಹಲವು ಪಾರ್ಟಿಗಳನ್ನು ಮಾಡಿದ್ದಾರೆ.
ಆಟಗಾರರಿಗೆ ಪಾರ್ಟಿ ಕೊಡುವ ಮೂಲಕ ಮುಂದಿನ ಪಂದ್ಯಗಳಲ್ಲಿ ಯಾವುದೇ ಒತ್ತಡ ಇಲ್ಲದೇ ಆಟ ಆಡುವ ಮೂಲಕ ಉತ್ತಮ ಫಲಿತಾಂಶ ಪಡೆಯುವುದು ಕೊಹ್ಲಿ ಲೆಕ್ಕಾಚಾರವಾಗಿರಬಹುದು.
ಇದನ್ನೂ ಓದಿ :ವಿರಾಟ್ - ಗಂಭೀರ್ ವಾಗ್ವಾದ: ಜಾಗೃತಿ ಮೂಡಿಸಿದ ಹುಬ್ಬಳ್ಳಿ ಧಾರವಾಡ ಪೊಲೀಸರು