ಬೆಂಗಳೂರು:ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 70ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) 6 ವಿಕೆಟ್ನಿಂದ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಸೋಲನುಭವಿಸಿತು. ಅಲ್ಲದೇ 16ನೇ ಆವೃತ್ತಿಯ ಐಪಿಎಲ್ನಿಂದ ಹೊರಗುಳಿಯಿತು. ಗುಜರಾತ್ ಟೈಟಾನ್ಸ್ ಗೆಲುವು ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಪ್ರವೇಶ ನೀಡಿತು.
ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಹಿಡಿಯುವಾಗ ಗಾಯಗೊಂಡಿದ್ದು, ಅಂತಾರಾಷ್ಟ್ರೀಯ ಪಂದ್ಯದ ವೇಳೆಗೆ ಸಂಕಷ್ಟಕ್ಕೆ ಒಳಗಾಗಗಲಿದ್ದಾರೆ ಎಂಬ ಆತಂಕ ಸದ್ಯಕ್ಕೆ ಕಾಡುತ್ತಿದೆ. ಜೂನ್ 7 ರಿಂದ 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಲಿದೆ. ಈ ಪಂದ್ಯದಲ್ಲಿ ಫಾರ್ಮ್ನಲ್ಲಿರುವ ವಿರಾಟ್ ಆಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವು ಜೂನ್ 7 ರಿಂದ 11 ರವರೆಗೆ ಇಂಗ್ಲೆಂಡ್‌ನ ಓವಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಗಾಯಗೊಂಡಿದ್ದರು. ಗುಜರಾತ್ ಟೈಟಾನ್ಸ್ ಇನಿಂಗ್ಸ್ ವೇಳೆ 15ನೇ ಓವರ್ನಲ್ಲಿ ವಿಜಯ್ ಶಂಕರ್ ಅವರ ಕ್ಯಾಚ್ ವೇಳೆ ಗಾಯಗೊಂಡರು.
ಈ ವೇಳೆ ಫಿಸಿಯೋ ಬಂದು ಚಿಕಿತ್ಸೆ ನೀಡಿದರಾದರೂ ವಿರಾಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿಲ್ಲ. 15ನೇ ಓವರ್ನ ನಂತರ ಡಗ್ಔಟ್ನಲ್ಲಿ ಕುಳಿತು ವಿರಾಟ್ ಪಂದ್ಯ ವೀಕ್ಷಿಸಿದರು. ನಂತರ ಫೀಲ್ಡಿಂಗ್‌ಗಾಗಿ ಮೈದಾನಕ್ಕೆ ಮರಳಲಿಲ್ಲ.
ವಿರಾಟ್ ಕೊಹ್ಲಿ ಗಾಯದ ಬಗ್ಗೆ ಆರ್ಸಿಬಿ ಮುಖ್ಯ ಕೋಚ್ ಸಂಜಯ್ ಬಂಗಾರ್ ಬಹಿರಂಗಪಡಿಸಿದ್ದಾರೆ. ಕೊಹ್ಲಿಯ ಗಾಯ ಗಂಭೀರವಾಗಿಲ್ಲ, ಶೀಘ್ರದಲ್ಲೇ ಅವರು ಫಿಟ್ ಆಗಲಿದ್ದಾರೆ ಎಂದು ಹೇಳಿದ್ದಾರೆ. ಇದರೊಂದಿಗೆ ಕೊಹ್ಲಿಯನ್ನು ಹೊಗಳಿದ ಸಂಜಯ್, 4 ದಿನಗಳಲ್ಲೇ ಕೊಹ್ಲಿ ಎರಡು ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ್ದು ಸಣ್ಣ ವಿಷಯವಲ್ಲ ಎಂದು ಹೇಳಿದ್ದಾರೆ.
ಪಂದ್ಯ: ನಿನ್ನೆ ಸೂಪರ್ ಸಂಡೆ ಲೆಕ್ಕದಲ್ಲಿ ಎರಡು ಪಂದ್ಯಗಳು ನಡೆದವು. ಸಂಜೆ 3:30ಕ್ಕೆ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ನಡೆಯಿತು. ಸನ್ ರೈಸರ್ಸ್ ಹೈದರಾಬಾದ್ ನೀಡಿದ್ದ 200 ರನ್ನ ಗುರಿಯನ್ನು ಮುಂಬೈ 2 ಓವರ್ ಬಾಕಿ ಇರುವಂತೆ ಹೊಡೆದು ಗೆದ್ದುಕೊಂಡಿತು. ಇದರಿಂದ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಅಲಂಕರಿಸಿತು.
ಕ್ಯಾಮರಾನ್ ಗ್ರೀನ್ ಶತಕ ಮತ್ತು ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ನೆರವಿನಿಂದ ಮುಂಬೈ ಕೇವಲ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿತ್ತು. ಆದರೆ ಈ ಗೆಲುವು ಮುಂಬೈ ಪ್ಲೇ ಆಫ್ ಪ್ರವೇಶವನ್ನು ನಿಗದಿ ಮಾಡಿರಲಿಲ್ಲ. ಎರಡನೇ ಪಂದ್ಯದ ಫಲಿತಾಂಶ ಮುಂಬೈಗೆ ಮುಖ್ಯವಾಗಿತ್ತು.
ನಿನ್ನೆಯ ಎರಡನೇ ಮುಖಾಮುಖಿಯಲ್ಲಿ ಆರ್ಸಿನಿ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್ನ ಸೋಲು ಕಂಡಿದ್ದು, ಮುಂಬೈಯನ್ನು ಪ್ಲೇ ಆಫ್ಗೆ ಸೇರಿಸಿತ್ತು. ವಿರಾಟ್ ಶತಕದ ನೆರವಿನಿಂದ 198 ರನ್ನ ಗುರಿಯನ್ನು ಜಿಟಿಗೆ ಬೆಂಗಳೂರು ನೀಡಿತ್ತು. ಇದನ್ನೂ ಬೆನ್ನತ್ತಿದ ಗುಜರಾತ್ಗೆ ಶುಭಮನ್ ಗಿಲ್ ಶತಕ ಮತ್ತು ವಿಜಯ್ ಶಂಕರ್ ಅರ್ಧಶತಕ ನೆರವಾಯಿತು. ಇದರಿಂದ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 5 ಬಾಲ್ ಉಳಿಸಿಕೊಂಡು ಪಂದ್ಯವನ್ನು ಗೆದ್ದುಕೊಂಡಿತು.
ಇದನ್ನೂ ಓದಿ:'ಈ ಸಲವೂ ಕಪ್ ನಮ್ಗಿಲ್ಲ': ಒಮ್ಮೆಯೂ ಪ್ರಶಸ್ತಿ ಗೆಲ್ಲದ ಆರ್ಸಿಬಿ, ಅಭಿಮಾನಿಗಳಿಗೆ ಬರೀ ನಿರಾಶೆ