ಲಂಡನ್:ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಮುಂದೂಡಿದ್ದು ವಿವೇಚನಾಯುಕ್ತ ನಿರ್ಧಾರವೆಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
ಐಪಿಎಲ್ ಮುಂದೂಡಿದ್ದು ವಿವೇಚನಾಯುಕ್ತ ನಿರ್ಧಾರ: ಮೈಕಲ್ ವಾನ್ - ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾಘನ್
ಭಾರತದಲ್ಲಿ ಕೋವಿಡ್ ಪ್ರಕರಣಗಳು ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದರಿಂದ ಪಂದ್ಯಾವಳಿಯನ್ನು ನಿಲ್ಲಿಸುವಂತೆ ಈ ಹಿಂದೆ ಕರೆ ನೀಡಿದ್ದ ಇಂಗ್ಲಿಷ್ ಪತ್ರಕರ್ತ ಪಿಯರ್ಸ್ ಮೊರ್ಗನ್ ಕೂಡ ಬಿಸಿಸಿಐ ನಡೆಯನ್ನು "ಸರಿಯಾದ ನಿರ್ಧಾರ" ಎಂದು ಹೇಳಿದ್ದಾರೆ. ಇದೀಗ ಮತ್ತೋರ್ವ ಕ್ರಿಕೆಟಿಗ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಮೈಕೆಲ್ ವಾಘನ್
"ಐಪಿಎಲ್ ಮುಂದೂಡಿ ಬಿಸಿಸಿಐ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ ಟೂರ್ನಿ ನಡೆಯುವ ಬಯೋಬಬಲ್‌ಗಳಲ್ಲೂ ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿದ್ದು ಅವರಿಗೆ(ಬಿಸಿಸಿಐ) ಅನ್ಯ ದಾರಿ ಕಾಣದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ. ಈಗ ವಿದೇಶಿ ಆಟಗಾರರು ತಮ್ಮ ಕುಟುಂಬಗಳನ್ನು ಸೇರುವ ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಇದು ತಮಾಷೆಯ ವಿಷಯವಲ್ಲ': ಕೊರೊನಾ ಸ್ಫೋಟದ ಬಗ್ಗೆ ಕ್ರಿಕೆಟಿಗ ರೈನಾ