ಅಬುಧಾಬಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯೋನ್ ಮಾರ್ಗನ್ ಐಪಿಎಲ್ನಲ್ಲಿ ತಮ್ಮ ತಂಡದ ಪ್ರದರ್ಶನ ಮತ್ತು ಹೊಸ ಆಟಗಾರ ವೆಂಕಟೇಶ್ ಅಯ್ಯರ್ ಅವರ ಉತ್ತಮ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದ ಕೆಕೆಆರ್, ಇದೀಗ ಅಂಕಪಟ್ಟಿಯಲ್ಲಿ ಅಗ್ರ - ನಾಲ್ಕು ಸ್ಥಾನದಲ್ಲಿದೆ.
"ವೆಂಕಟೇಶ್ ಅಯ್ಯರ್ ರನ್ ಗಳಿಸಿದ ರೀತಿ ನಿಜಕ್ಕೂ ಅದ್ಭುತ".. ಕೆಕೆಆರ್ ನಾಯಕ ಇಯೋನ್ ಮಾರ್ಗನ್ - Kolkata Knight Riders players
ವೆಂಕಟೇಶ್ ಅಯ್ಯರ್ ಅವರನ್ನು 11 ಜನರ ಪಟ್ಟಿಯಲ್ಲಿ ಅಳವಡಿಸುವುದು ಬಹಳಷ್ಟು ಕಷ್ಟವಾಯಿತು. ಏಕೆಂದರೆ ಪ್ರತಿಭಾವಂತ ವ್ಯಕ್ತಿಗಳು ಇದ್ದರು. ಆದರೆ, ಅವರು ರನ್ ಗಳಿಸಿದ ರೀತಿ ನಿಜಕ್ಕೂ ಅದ್ಭುತವಾಗಿದೆ. ಅಭ್ಯಾಸದ ಆಟಗಳಲ್ಲೂ ಅವರು ಇದೇ ರೀತಿ ಆಡುತ್ತಿದ್ದರು ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯೋನ್ ಮಾರ್ಗನ್ ಹೇಳಿದರು.
ಇಯೋನ್ ಮಾರ್ಗನ್
"ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು155 ರನ್ಗಳಲ್ಲಿ ಹಿಡಿದಿಟ್ಟುಕೊಳ್ಳಲಾಯಿತು. ಬಳಿಕ ಈ ಗುರಿಯನ್ನು ತಲುಪುವ ಆತ್ಮವಿಶ್ವಾಸವೂ ನಮ್ಮಲ್ಲಿತ್ತು" ಎಂದು ಮಾರ್ಗನ್ ಹೇಳಿದ್ದಾರೆ.
ಇನ್ನು ಅಯ್ಯರ್ ಬಗ್ಗೆ ಮಾತನಾಡುತ್ತ "ವೆಂಕಟೇಶ್ ಅಯ್ಯರ್ ಅವರನ್ನು 11 ಜನರ ಪಟ್ಟಿಯಲ್ಲಿ ಅಳವಡಿಸುವುದು ಬಹಳಷ್ಟು ಕಷ್ಟವಾಯಿತು. ಏಕೆಂದರೆ ಪ್ರತಿಭಾವಂತ ವ್ಯಕ್ತಿಗಳು ಇದ್ದರು. ಆದರೆ, ಅವರು ರನ್ ಗಳಿಸಿದ ರೀತಿ ನಿಜಕ್ಕೂ ಅದ್ಭುತವಾಗಿದೆ. ಅಭ್ಯಾಸದ ಆಟಗಳಲ್ಲೂ ಅವರು ಇದೇ ರೀತಿ ಆಡುತ್ತಿದ್ದರು" ಎಂದರು.