ದುಬೈ :ಅರಬ್ ನಾಡಿನಲ್ಲಿ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡದ ವೇಗಿ ಟಿ. ನಟರಾಜನ್ಗೆ ಕೊರೊನಾ ಸೋಂಕು ಕಾಣಿಸಿದೆ. ಈಗಾಗಲೇ ಅವರು ಕ್ವಾರಂಟೈನ್ಗೊಳಗಾಗಿದ್ದಾರೆ. ಇದೀಗ ತಂಡ ಬದಲಿ ಆಟಗಾರನಿಗೆ ಮಣೆ ಹಾಕಿದೆ.
ಅನ್ಕ್ಯಾಪ್ಡ್, ಮಧ್ಯಮ ವೇಗಿ ಉಮ್ರಾನ್ ಮಲಿಕ್ಗೆ ಹೈದರಾಬಾದ್ ತಂಡ ಮಣೆ ಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದೆ. 21 ವರ್ಷದ ಮಲಿಕ್ ಈಗಾಗಲೇ ಲಿಸ್ಟ್ A ಪಂದ್ಯದಲ್ಲಿ ಜಮ್ಮು-ಕಾಶ್ಮೀರ ಪರ ಏಕೈಕ ಟಿ-20 ಪಂದ್ಯವನ್ನಾಡಿ 4 ವಿಕೆಟ್ ಪಡೆದಿದ್ದಾರೆ. ಈಗಾಗಲೇ ಸನ್ರೈಸರ್ಸ್ ಹೈದರಾಬಾದ್ ತಂಡದಲ್ಲಿ ನೆಟ್ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ.