ಅಹಮದಾಬಾದ್ (ಗುಜರಾತ್):ಶುಭಮನ್ ಗಿಲ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯರ ಚುರುಕಿನ ಆಟ, ಕ್ರಿಕೆಟ್ನ ಮಾಸ್ಟರ್ ಮೈಂಡ್ ಎಮ್ಎಸ್ ಧೋನಿ ಅವರ ಚಾಣಾಕ್ಷ ನಡೆಯ ಪಂದ್ಯವನ್ನು ನೋಡಲು ನಿನ್ನೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳಿಗೆ ವರುಣ ಬೇಸರ ಉಂಟುಮಾಡಿದ್ದ. ಆದರೆ, ಪಂದ್ಯವನ್ನು ಸೋಮವಾರ (ಇಂದು)ದ ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗಾದರೆ ಇಂದಿನ ಹವಾಮಾನ ವರದಿ ಏನಿದೆ..?
ಗುಜರಾತ್ನಲ್ಲಿ ಅಕಾಲಿಕ ಮಳೆ ಅನಾಹುತ ಸೃಷ್ಟಿಸುತ್ತಿದೆ. ಚಂಡಮಾರುತದ ಚಲನೆಯಿಂದಾಗಿ, ಕಳೆದ ಕೆಲವು ದಿನಗಳಿಂದ ಸುಡುವ ಶಾಖದ ನಡುವೆ ಗುಜರಾತ್ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಅದು ನೀರಾಗಿದ್ದು, ಐಪಿಎಲ್ ಪಂದ್ಯವನ್ನು ತೊಯ್ದಿದೆ. ಗುಜರಾತ್ನ ಹವಮಾನ ವರದಿಯ ಪ್ರಕಾರ ಇಂದು ನಾಳೆ ಮಳೆಯಾಗುವ ಸಂಭವ ಇದೆ. ಫೈನಲ್ ನೋಡಲು ಬರುವ ಅಭಿಮಾನಿಗಳಿಗೆ ಇಂದು ಬೇಸರ ಉಂಟುಮಾಡ್ತಾನಾ ವರುಣಾ ಇಲ್ಲ, ಫಲಿತಾಂಶಕ್ಕಾಗಿ ಚುಟುಕು ಪಂದ್ಯಕ್ಕಾದರೂ ಬಿಡುವು ಕೊಡುತ್ತಾನಾ ಕಾದುನೋಡಬೇಕಿದೆ.
"ಮುಂದಿನ ಎರಡು ದಿನಗಳಲ್ಲಿ ಅಹಮದಾಬಾದ್ ನಗರದಲ್ಲಿ ಸಂಜೆ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಅಕಾಲಿಕ ಮಾನ್ಸೂನ್ ರೂಪುಗೊಂಡಿದೆ, ಇದರ ಪರಿಣಾಮ ಇನ್ನೂ ಎರಡು ದಿನಗಳವರೆಗೆ ಮಳೆ ಇರುತ್ತದೆ. ಈ ಎರಡು ದಿನಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇದ್ದು, ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಜಿನ್ ಲಾಲ್ ತಿಳಿಸಿದ್ದಾರೆ.