ಕರ್ನಾಟಕ

karnataka

ETV Bharat / sports

Dhoni ಇಲ್ಲದೆ, CSK ಇಲ್ಲ.. ಚೆನ್ನೈ ಸೂಪರ್​ ಕಿಂಗ್ಸ್​ ಮಾಲೀಕ ಶ್ರೀನಿವಾಸನ್​ - Mahendra singh Dhoni

ಎಂಎಸ್ ಧೋನಿ ದುಬೈನಿಂದ ವಾಪಸಾದ ಬಳಿಕ ಸಿಎಂ ಸ್ಟ್ಯಾಲಿನ್ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಟ್ರೋಫಿ ಹಸ್ತಾಂತರ ಮಾಡಲಿದ್ದಾರೆ. ತಂಡದ ನಾಯಕ ಧೋನಿ ಇಲ್ಲದೆ, ಸಿಎಸ್​ಕೆ ಇಲ್ಲವೆಂದು ಟೀಂನ ಮಾಲೀಕ ಶ್ರೀನಿವಾಸನ್​ ಹೇಳಿದ್ದಾರೆ.

Trophy kept under pooja in Tirumala Tirupati Devasthanam
ಐಪಿಎಲ್ ಟ್ರೋಫಿಗೆ ತಿರುಪತಿ ತಿರುಮಲ ದೇವಾಲಯದಲ್ಲಿ ವಿಶೇಷ ಪೂಜೆ

By

Published : Oct 19, 2021, 2:15 PM IST

ನವದೆಹಲಿ:ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2021ರ ಫೈನಲ್​​ನಲ್ಲಿ ಗೆದ್ದು, 4ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ. ಈ ನಡುವೆ ಟ್ರೋಫಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ.

ಟ್ರೋಫಿಗೆ ಎಲ್ಲಾ ಪೂಜಾ ವಿಧಿವಿಧಾನ ನೆರವೇರಿದ ಬಳಿಕ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ಬೋರ್ಡ್ ಸದಸ್ಯರಾಗಿರುವ ಸಿಎಸ್​ಕೆ ಮಾಲೀಕ ಶ್ರೀನಿವಾಸನ್ ಟ್ರೋಫಿ ಪಡೆದಿದ್ದಾರೆ.

ಸದ್ಯ ದುಬೈನಲ್ಲಿ ಟಿ-20 ವಿಶ್ವಕಪ್ ತಂಡಕ್ಕೆ ಮೆಂಟರ್ ಆಗಿ ನೇಮಕವಾಗಿರುವ ಮಹೇಂದ್ರ ಸಿಂಗ್ ಧೋನಿ, ಟೂರ್ನಿ ಮುಕ್ತಾಯದ ಬಳಿಕ ಚೆನ್ನೈಗೆ ಆಗಮಿಸಲಿದ್ದು, ಬಳಿಕ ಸಿಎಂ ಎಂ.ಕೆ ಸ್ಟ್ಯಾಲಿನ್ ಜೊತೆ ಟೂರ್ನಿ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಧೋನಿ ಸೇರಿ ಕೆಲ ಆಟಗಾರರು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:2023ರ ಏಷ್ಯಾಕಪ್ ಪಾಕಿಸ್ತಾನದಲ್ಲಿ ಕನ್ಫರ್ಮ್, ಅದು 50 ಓವರ್​ಗಳ ಟೂರ್ನಿಯಾಗಿರಲಿದೆ: ಪಿಸಿಬಿ ಮುಖ್ಯಸ್ಥ ರಾಜಾ

ABOUT THE AUTHOR

...view details