ಕರ್ನಾಟಕ

karnataka

ETV Bharat / sports

ತಂಡ ತೊರೆದು ತವರಿಗೆ ಮರಳಲಿರುವ ವಾರ್ನರ್, ಸ್ಟೀವ್ ಸ್ಮಿತ್? - ಸ್ಟೀವ್ ಸ್ಮಿತ್

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ, ಆಟಗಾರರು ತವರಿಗೆ ಮರಳುವುದು ಕಷ್ಟಕರವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ತಂಡ ತೊರೆದು ತವರಿಗೆ ಮರಳಲಿರುವ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್
ತಂಡ ತೊರೆದು ತವರಿಗೆ ಮರಳಲಿರುವ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್

By

Published : Apr 27, 2021, 10:04 AM IST

ಸಿಡ್ನಿ: ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತಾ ಸಮಿತಿಯ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಈ ಸಭೆಯ ನಂತರ ಭಾರತದಲ್ಲಿ ಐಪಿಎಲ್​ ಟೂರ್ನಿಯಲ್ಲಿ ಭಾಗಿಯಾದ ಆಸ್ಟ್ರೇಲಿಯಾ ಕ್ರಿಕೆಟರ್​ಗಳು ತವರಿಗೆ ಮರಳುವ ಬಗ್ಗೆ ಖಚಿತ ಮಾಹಿತಿ ದೊರೆಯಲಿದೆ.

ಆಸ್ಟ್ರೇಲಿಯಾ ಮಾಧ್ಯಮಗಳ ವರದಿ ಪ್ರಕಾರ, ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಸೇರಿದಂತೆ ಆಸ್ಟ್ರೇಲಿಯಾದ ಅಗ್ರ ಕ್ರಿಕೆಟಿಗರು ಶೀಘ್ರದಲ್ಲೇ ಭಾರತದಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ವಾಪಸ್‌ ಆಗಲಿದ್ದಾರೆ ಎಂಬ ಮಾಹಿತಿ ಇದೆ. ವಾರ್ನರ್ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುನ್ನಡೆಸುತ್ತಿದ್ದರೆ, ಸ್ಮಿತ್ ದೆಹಲಿ ಕ್ಯಾಪಿಟಲ್ಸ್ ಪರ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 17 ಆಸ್ಟ್ರೇಲಿಯಾದ ಆಟಗಾರರು ಭಾಗವಹಿಸಿದ್ದರು. ಇವರ ಪೈಕಿ ಮೂವರು ಆಟಗಾರರಾದ ಆ್ಯಡಂ ಜಂಪಾ, ಕೇನ್ ರಿಚರ್ಡ್‌ಸನ್ (ಇಬ್ಬರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು) ಮತ್ತು ಆಂಡ್ರ್ಯೂ ಟೈ (ರಾಜಸ್ಥಾನ್ ರಾಯಲ್ಸ್) ಈಗಾಗಲೇ ತವರಿಗೆ ಮರಳಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತದಿಂದ ಬರುವ ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಿದರೆ, ಆಟಗಾರರು ತವರಿಗೆ ಮರಳುವುದು ಕಷ್ಟಕರವಾಗುತ್ತದೆ ಎಂದು ರಾಷ್ಟ್ರೀಯ ಭದ್ರತಾ ಸಮಿತಿ ತಿಳಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಹೆಚ್ಚುತ್ತಿರುವ ಕೋವಿಡ್ -19 : ಐಪಿಎಲ್​​ ಬಿಟ್ಟು ತವರಿಗೆ ಮರಳಲು ಆಸೀಸ್​ ಆಟಗಾರರ ಚಿಂತನೆ..

ABOUT THE AUTHOR

...view details