ಕರ್ನಾಟಕ

karnataka

ETV Bharat / sports

RCB ಪರ ಡೆಬ್ಯು ಮಾಡಿದ ಡೇವಿಡ್; IPL​​ನಲ್ಲಿ ಆಡುವ ಅವಕಾಶ ಪಡೆದ ಮೊದಲ ಸಿಂಗಾಪುರ್​ ಪ್ಲೇಯರ್ - ಆರ್​ಸಿಬಿ ವರ್ಸಸ್​ ಸಿಎಸ್​ಕೆ

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ಪರ ಸಿಂಗಾಪುರ್​ ದೇಶದ ಆಟಗಾರ ಟಿಮ್ ಡೇವಿಡ್ ಅವಕಾಶ ಪಡೆದಿದ್ದಾರೆ. ಬಿಬಿಎಲ್, ಪಿಎಸ್​ಎಲ್, ಟಿ-20 ಬ್ಲಾಸ್ಟ್​ ಮತ್ತು ಸಿಪಿಎಲ್​ನಲ್ಲಿ ಆಡಿದ ಅನುಭವ ಹೊಂದಿರುವ 25 ವರ್ಷದ ಯುವ ಆಟಗಾರ, ಸಿಂಗಾಪುರ್​ ತಂಡದ ಪರ 14 ಟಿ20 ಪಂದ್ಯಗಳನ್ನು ಆಡಿದ್ದಾರೆ.

Tim David
Tim David

By

Published : Sep 24, 2021, 9:22 PM IST

ಶಾರ್ಜಾ:ಇಂಡಿಯನ್​ ಪ್ರೀಮಿಯರ್ ಲೀಗ್​ನ 14ನೇ ಆವೃತ್ತಿ ದ್ವಿತೀಯಾರ್ಧದ ಇಂದಿನ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್​ ಹಾಗೂ ರಾಯಲ್​ ಚಾಲೆಂಜರ್ಸ್​​​ ಬೆಂಗಳೂರು ತಂಡ ಮುಖಾಮುಖಿಯಾಗಿದ್ದು, ಶಾರ್ಜಾ ಮೈದಾನದಲ್ಲಿ ಮ್ಯಾಚ್ ನಡೆಯುತ್ತಿದೆ.

ಕೋಲ್ಕತ್ತಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲುವ ಮೂಲಕ ನಿರಾಸೆಗೊಳಗಾಗಿರುವ ಆರ್​​ಸಿಬಿ, ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಗುರಿಯೊಂದಿಗೆ ಮೈದಾನಕ್ಕಿಳಿದಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.

ಸಿಂಗಾಪುರ್ ಪ್ಲೇಯರ್​​ ಡೇವಿಡ್​​

ಸಿಂಗಪೂರ್ ದೇಶದ​ ಪ್ಲೇಯರ್​ಗೆ ಅವಕಾಶ

ಬ್ಯಾಟರ್​​ ಸಚಿನ್ ಬೇಬಿ ಸ್ಥಾನಕ್ಕೆ ಆರ್​ಸಿಬಿ ಟಿಮ್​ ಡೇವಿಡ್​ಗೆ ಅವಕಾಶ ನೀಡಿದೆ. ಐಪಿಎಲ್​ನಲ್ಲಿ ಆಡುತ್ತಿರುವ ಮೊದಲ ಸಿಂಗಾಪೂರ್​ ಪ್ಲೇಯರ್​ ಎಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಕೇವಲ 1 ರನ್​ಗಳಿಕೆ ಮಾಡಿ ನಿರಾಸೆ ಮೂಡಿಸಿದರು.

ಬಿಬಿಎಲ್, ಪಿಎಸ್​ಎಲ್, ಟಿ-20 ಬ್ಲಾಸ್ಟ್​ ಮತ್ತು ಸಿಪಿಎಲ್​ನಲ್ಲಿ ಆಡಿದ ಅನುಭವ ಹೊಂದಿರುವ 25 ವರ್ಷದ ಯುವ ಆಟಗಾರ, ಸಿಂಗಾಪುರ್​ ತಂಡದ ಪರ 14 ಟಿ20 ಪಂದ್ಯಗಳನ್ನು ಆಡಿದ್ದಾರೆ. 4 ಅರ್ಧಶತಕಸಹಿತ 558 ರನ್​ ಸಿಡಿಸಿದ್ದಾರೆ. ಇದೀಗ ವಿಶ್ವದ ಶ್ರೀಮಂತ ಟಿ-20 ಲೀಗ್​ ಆಗಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ದ್ವಿತೀಯ ಹಂತದಲ್ಲೂ ಅವಕಾಶ ಪಡೆದುಕೊಂಡಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ 50 ಪಂದ್ಯಗಳನ್ನಾಡಿದ್ದು, 6 ಅರ್ಧಶತಕಗಳ ಸಹಿತ 155.84ರ ಸ್ಟ್ರೈಕ್​ರೇಟ್​ನಲ್ಲಿ 1186 ರನ್​ಗಳಿಸಿದ್ದಾರೆ.

ABOUT THE AUTHOR

...view details