ಇಂಡಿಯನ್ ಪ್ರೀಮಿಯರ್ ಲೀಗ್‌ನ(ಐಪಿಎಲ್) ಮೊದಲ ಪಂದ್ಯದಲ್ಲಿ ಮುಂಬೈ ತಂಡದ ಯುವ ಪ್ರತಿಭೆ ತಿಲಕ್ ವರ್ಮಾ ಸ್ಟಾರ್ ಪರ್ಫಾರ್ಮರ್ ಆಗಿ ಹೊರಹೊಮ್ಮಿದರು. ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ವಿರುದ್ಧ ಕೇವಲ 46 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿ ತಂಡದ ಮೊತ್ತ 171 ರನ್‌ಗಳಿಗೆ ಏರಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು.
ರೋಹಿತ್ ಶರ್ಮಾ ನೇತೃತ್ವದ ಮುಂಬೈ 48 ರನ್ಗಳಿಕೆ ಸಂದರ್ಭದಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತ್ತು. ಈ ವೇಳೆ ಕ್ರೀಸ್ಗಿಳಿದ ತಿಲಕ್ ವರ್ಮಾ ಬಿರುಸಿನ ಆಟವಾಡಿದರು. ತಿಲಕ್ ವರ್ಮಾ ಅಜೇಯ ಪ್ರದರ್ಶನ ಕ್ರಿಕೆಟ್‌ಪ್ರಿಯರ ಗಮನ ಸೆಳೆಯಿತು. ಅದರಲ್ಲೂ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಅವರು ಹೊಡೆದ ಹೆಲಿಕಾಪ್ಟರ್ ಶಾಟ್ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆದರು.
2011ರ ವಿಶ್ವಕಪ್ ಸಂದರ್ಭದಲ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಹೊಡೆದಿದ್ದ ಹೆಲಿಕಾಪ್ಟರ್ ಶಾಟ್ ಸಿಗ್ನೇಚರ್ ಶಾಟ್ ಆಗಿತ್ತು. ಅಲ್ಲದೇ ಭಾರತ ಅಂದು ವಿಶ್ವಕಪ್ ಗೆದ್ದು ಸಂಭ್ರಮಿಸಿತ್ತು. ಇದೀಗ 12 ವರ್ಷಗಳ ನಂತರ ನಿನ್ನೆ ದಿನ ತಿಲಕ್ ವರ್ಮಾ ಕೊನೆಯ ಎಸೆತದಲ್ಲಿ ಹೆಲಿಕಾಪ್ಟರ್ ಶಾಟ್ ಸಿಡಿಸಿ ಭಾರತದ ಕ್ರಿಕೆಟ್ ದಂತಕಥೆ ಧೋನಿ ನೆನಪಿಸಿದರು.
ಮುಂಬೈ ತಂಡ ಪವರ್‌ಪ್ಲೇ ಮುಕ್ತಾಯದ ಹಂತದಲ್ಲಿ ಅಗ್ರ ಬ್ಯಾಟರ್‌ಗಳಾದ ಇಶಾನ್ ಕಿಶನ್ (10), ರೋಹಿತ್ ಶರ್ಮಾ (1) ಮತ್ತು ಕ್ಯಾಮರೂನ್ ಗ್ರೀನ್ (5) ಅವರ ವಿಕೆಟ್‌ಗಳನ್ನು ಕಳೆದುಕೊಂಡು, ಕಳಪೆ ಆರಂಭ ಪಡೆಯಿತು. ಸೂರ್ಯಕುಮಾರ್ ಯಾದವ್ (15) ಕೂಡ ನಿರಾಸೆ ಮೂಡಿಸಿದರು. ತಂಡಕ್ಕೆ ಆಪದ್ಬಾಂಧವನಾಗಿ ಬಂದ ತಿಲಕ್ ವರ್ಮಾ ಜವಾಬ್ದಾರಿಯುತ ಆಟ ಪ್ರದರ್ಶಿಸುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿ ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಎಂ.ಚಿನ್ನಸ್ವಾಮಿ ಕ್ರೀಡಾಂಗಣವು ಬ್ಯಾಟಿಂಗ್ ಸ್ನೇಹಿ ಮೈದಾನವೆಂದು ತಿಳಿದಿದ್ದರೂ, ಆರ್‌ಸಿಬಿ ಬೌಲರ್ಗಳ ದಾಳಿಗೆ ಸಿಲುಕಿ ಮುಂಬೈ ನಲುಗಿತು. ವೇಗಿ ಜೋಫ್ರಾ ಆರ್ಚರ್ ತಂಡದ ಭರವಸೆಯ ಆಟಗಾರರಾಗಿದ್ದರು. 4 ಓವರ್ ಬೌಲಿಂಗ್ ಮಾಡಿದ ಆರ್ಚರ್ ವಿಕೆಟ್ ಪಡೆಯದೇ 33 ರನ್ಗಳನ್ನು ಬಿಟ್ಟುಕೊಡುವ ಮೂಲಕ ನಿರಾಸೆ ಮೂಡಿಸಿದರು.
ಇದನ್ನೂ ಓದಿ:ಐಪಿಎಲ್ 2023: ಧೋನಿ ಕ್ಲಬ್ಗೆ ಸೇರಿದ ಆರ್‌ಸಿಬಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್
ನಿನ್ನೆಯ ಪಂದ್ಯದಲ್ಲಿ ಮುಂಬೈ ಅಚ್ಚರಿಯೆಂಬಂತೆ 3 ವಿದೇಶಿ ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು. ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲಿಯೇ ಇಂಪ್ಯಾಕ್ಟ್ ಪ್ಲೇಯರ್ ಆಗಿ ವೇಗಿ ಜೇಸನ್ ಬ್ರೆರೆನ್‌ಡಾರ್ಫ್ ಅವರನ್ನು ತಂಡಕ್ಕೆ ಕರೆತಂದು, ಸೂರ್ಯಕುಮಾರ್ ಯಾದವ್‌ರನ್ನು ಕೈಬಿಟ್ಟಿತ್ತು. ಹೀಗಿದ್ದರೂ ಮುಂಬೈನ ಇಂಪ್ಯಾಕ್ಟ್ ಆಟಗಾರನಿಂದ ಆರ್‌ಸಿಬಿ ಮೇಲೆ ಯಾವುದೇ ಇಂಪ್ಯಾಕ್ಟ್ ಆಗಲಿಲ್ಲ.
ಇದನ್ನೂ ಓದಿ:ಮುಂಬೈ, ಚೆನ್ನೈ ಕಪ್ ಗೆದ್ದಿರುವುದಕ್ಕಿಂತ ಹೆಚ್ಚು ಆರ್‌ಸಿಬಿ ಕ್ವಾಲಿಫೈರ್ ಹಂತ ತಲುಪಿದೆ: ಕೊಹ್ಲಿ