ಕರ್ನಾಟಕ

karnataka

ETV Bharat / sports

U19 ಮಾಜಿ ಬ್ಯಾಟರ್​ ಬಗ್ಗೆ ಗುಣಗಾನ.. ಆದಷ್ಟು ಬೇಗ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದ ರೋಹಿತ್​​ - ಐಪಿಎಲ್ 2022

ಮುಂಬೈ ಇಂಡಿಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿರುವ ಅನ್​ಕ್ಯಾಪ್ಡ್ ಪ್ಲೇಯರ್​ ತಿಲಕ್ ವರ್ಮಾ ಬಗ್ಗೆ ರೋಹಿತ್ ಶರ್ಮಾ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Tilak Varma
Tilak Varma

By

Published : May 13, 2022, 5:27 PM IST

ಮುಂಬೈ:ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಐದು ಸಲ ಚಾಂಪಿಯನ್ ತಂಡ ಮುಂಬೈ ಇಂಡಿಯನ್ಸ್​​ ಈ ಸಲದ ಪ್ಲೇ-ಆಫ್​ ರೇಸ್​​ನಿಂದ ಈಗಾಗಲೇ ಹೊರಬಿದ್ದಿದೆ. ಆದರೆ, ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿರುವ ಅಂಡರ್​​-19 ತಂಡದ ಮಾಜಿ ಪ್ಲೇಯರ್​​ ತಿಲಕ್​ ವರ್ಮಾ ಬಗ್ಗೆ ಹೆಚ್ಚಿನ ಗುಣಗಾನ ವ್ಯಕ್ತವಾಗ್ತಿದೆ. ಇದೀಗ ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಇವರ ಬಗ್ಗೆ ಮಾತನಾಡಿದ್ದಾರೆ.

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ತಿಲಕ್​

ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ ತಿಲಕ್ ವರ್ಮಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಇವರ ಪ್ರದರ್ಶಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಟೀಂ ಇಂಡಿಯಾ ಹಾಗೂ ಮುಂಬೈ ಇಂಡಿಯನ್ಸ್​ ಕಪ್ತಾನ್ ರೋಹಿತ್​ ಶರ್ಮಾ, ಆದಷ್ಟು ಬೇಗ ಈ ಪ್ಲೇಯರ್​ ಟೀಂ ಇಂಡಿಯಾ ಪರ ಆಡಲಿದ್ದಾರೆ ಎಂದಿದ್ದಾರೆ.

ಉದಯೋನ್ಮುಖ ಪ್ರತಿಭೆ ತಿಲಕ್ ವರ್ಮಾ ಐಪಿಎಲ್​​ನಲ್ಲಿ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಐಪಿಎಲ್​​ನ ಮೊದಲ ವರ್ಷವೇ ಇಷ್ಟೊಂದು ತಾಳ್ಮೆಯಿಂದ ಬ್ಯಾಟ್​ ಬೀಸುವುದು ಕಷ್ಟಕರ. ನನ್ನ ಪ್ರಕಾರ ಅವರು ಆದಷ್ಟು ಬೇಗ ಟೀಂ ಇಂಡಿಯಾ ಪರ ಎಲ್ಲ ಮಾದರಿ ಕ್ರಿಕೆಟ್​​ನಲ್ಲೂ ಆಡಲಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ:ಉಮ್ರಾನ್ ಮಲಿಕ್ ಪಾಕ್​​ನಲ್ಲಿ ಇದ್ದಿದ್ದರೆ ಖಂಡಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದರು: ಅಕ್ಮಲ್

ತಿಲಕ್ ಉತ್ತಮ ತಂತ್ರಗಾರಿಕೆ ಹೊಂದಿದ್ದಾರೆ. ಓರ್ವ ಬ್ಯಾಟರ್​ಗೆ ಇದು ಅತಿ ಅವಶ್ಯ. ಪಂದ್ಯವನ್ನ ಗೆಲ್ಲಿಸಬೇಕೆಂಬ ಹಂಬಲ ಅವರಲ್ಲಿ ಎದ್ದು ಕಾಣಿಸುತ್ತದೆ. ಬರುವ ದಿನಗಳಲ್ಲೂ ಇದನ್ನ ಮುಂದುವರೆಸಿಕೊಂಡು ಹೋದರೆ ಖಂಡಿತವಾಗಿ ಓರ್ವ ಅತ್ಯುತ್ತಮ ಬ್ಯಾಟರ್​ ಆಗಿ ರೂಪಗೊಳ್ಳಲಿದ್ದಾರೆ ಎಂದರು. 2022ರ ಐಪಿಎಲ್​​ನಲ್ಲಿ ತಿಲಕ್​ ವರ್ಮಾ ಆಡಿರುವ 12 ಪಂದ್ಯಗಳಿಂದ 368 ರನ್​​​ಗಳಿಕೆ ಮಾಡಿದ್ದು, ಈ ಹಿಂದೆ 2017ರಲ್ಲಿ ರಿಷಭ್ ಪಂತ್(ಯುವ ಪ್ಲೇಯರ್​​) ನಿರ್ಮಾಣ ಮಾಡಿದ್ದ ದಾಖಲೆ ಬ್ರೇಕ್ ಮಾಡಿದ್ದಾರೆ.

ABOUT THE AUTHOR

...view details