ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ ಯಶಸ್ವಿ ಬ್ಯಾಟರ್ ಶುಭಮನ್ ಗಿಲ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ ಈ ವರ್ಷ ಗಿಲ್ ಅವರು ಲಯದಲ್ಲಿ ಬ್ಯಾಟ್ ಬೀಸುತ್ತಿರುವುದು. ಐಪಿಎಲ್ಗೂ ಮುನ್ನ ಅಂತಾರಾಷ್ಟ್ರೀಯ ಪಂದ್ಯದಲ್ಲೂ ಗಿಲ್ ಶತಕ ಮತ್ತು ದ್ವಿಶತಕ ಗಳಿಸಿ ಉತ್ತಮ ಆರಂಭವನ್ನು ತಂಡಕ್ಕೆ ಕೊಟ್ಟಿದ್ದರು.
16ನೇ ಆವೃತ್ತಿಯಲ್ಲಿ ಶುಭಮನ್ ಸ್ಟಾರ್ ಆಟಗಾರರಾಗಿದ್ದಾರೆ. ಅವರು ಈ ಆವೃತ್ತಿಯಲ್ಲಿ ಹೆಚ್ಚು ರನ್ ಕಲೆಹಾಕಿದ್ದು, ಡು ಪ್ಲೆಸಿಸ್ ಅವರ ಬಳಿ ಇದ್ದ ಆರಂಜ್ ಕ್ಯಾಪ ಅನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ನ ಕಳೆದ ನಾಲ್ಕು ಪಂದ್ಯದಲ್ಲಿ ಮೂರು ಶತಕ ಗಳಿಸಿ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ವಿರಾಟ್ ಮತ್ತು ಬಟ್ಲರ್ ನಾಲ್ಕು ಶತಕ ಸಿಡಿಸಿದ್ದು, ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದಾರೆ.
ಲೀಗ್ ಒಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಗಿಲ್ ಮೂರನೇ ಸ್ಥಾನದಲ್ಲಿದ್ದಾರೆ. 2016ರ ಐಪಿಎಲ್ನಲ್ಲಿ ವಿರಾಟ್ ಸಾವಿರ ರನ್ಗೆ 27 (973) ರನ್ ಕಡಿಮೆ ಗಳಿಸಿದ್ದು ಇದುವರೆಗಿನ ದಾಖಲೆಯ ರನ್ ಆಗಿದೆ. ಎರಡನೇ ಸ್ಥಾನದಲ್ಲಿ ಬಟ್ಲರ್ ಇದ್ದಾರೆ. ಗಿಲ್ 13 ರನ್ ಗಳಿಸಿದಲ್ಲಿ ಬಟ್ಲರ್ನ್ನು ಹಿಂದಿಕ್ಕಲಿದ್ದಾರೆ. ಅದರೆ, ವಿರಾಟ್ ಅವರನ್ನು ಹಿಮ್ಮೆಟ್ಟಿಸಲು ಗಿಲ್ ಇಂದು ಮತ್ತೊಂದು ಶತಕ ಮಾಡಬೇಕಿದೆ.
ಜನ ಹೋಲಿಕೆ ಮಾಡುತ್ತಿರುವುದರ ಬಗ್ಗೆ ಮಾತನಾಡಿದ ಶುಭಮನ್ ಗಿಲ್,"ಜನರು ಈ ರೀತಿ ಹೋಲಿಕೆ ಮಾಡುವುದು ಅದ್ಭುತವಾಗಿದೆ. ಆದರೆ ಇದನ್ನು ನಾನು ಸ್ಫೂರ್ತಿಯಾಗಿ ತೆಗೆದುಕೋಳ್ಳುತ್ತೇನೆ. ಸಚಿನ್, ವಿರಾಟ್ ಮತ್ತು ರೋಹಿತ್ ಶರ್ಮಾ ಒಂದು ಪೀಳಿಗೆಗೆ ಸ್ಫೂರ್ತಿ. 1983ರ ವಿಶ್ವಕಪ್, 2011ರ ವಿಶ್ವಕಪ್ ತಂಡದಲ್ಲಿ ನಾನು ಆಡುತ್ತಿದ್ದೇನೆ ಎನ್ನುವುದು ನನಗೆ ಹೆಮ್ಮೆಯ ವಿಷಯ" ಎಂದಿದ್ದಾರೆ.