ಮುಂಬೈ:ಜಿಯೋ ಸಿನಿಮಾದಲ್ಲಿ ಟಾಟಾ ಐಪಿಎಲ್ 2023ರ ವೀಕ್ಷಣೆ ಫ್ರೀ ಸಿಕ್ಕಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಇನ್ನಷ್ಟು ಮನರಂಜನೆ ಸಿಕ್ಕಂತಾಗಿದೆ. ಅಂಕಿ - ಅಂಶಗಳ ಪ್ರಕಾರ ಕಳೆದ ಸೀಸನ್ ಒಂದರ ವೀಕ್ಷಣೆ ವಾರಾಂತ್ಯದಲ್ಲಿ ಆಗಿದೆ. ಅಲ್ಲದೇ ಜಿಯೋ ಸಿನಿಮಾ ಅಪ್ಲಿಕೇಶನ್ ಡೌಲೋಡ್ ಕೂಡಾ ಹೆಚ್ಚಾಗಿದೆ. ಐಸಿಸಿ ಟಿ20 ವಿಶ್ವ ಕಪ್ ವೀಕ್ಷಣೆಯ ಸಂಖ್ಯೆಯನ್ನೂ ಮೀರಿ ಐದು ಪಂದ್ಯಗಳನ್ನು ಪ್ರೇಕ್ಷಕರು ನೋಡಿದ್ದಾರೆ.
ಪ್ರತೀ ಪಂದ್ಯವನ್ನು ಪ್ರೇಕ್ಷಕರು ವೀಕ್ಷಿಸಿದ ಸಮಯ 57 ನಿಮಿಷವಾಗಿದೆ. ಇದು ಬಹುತೇಕ 60 ಶೇಕಡದಷ್ಟು ವೀಕ್ಷಕರು ಸ್ಕ್ರೀನ್ ಮೇಲೆ ಕಳೆದ ಕ್ಷಣವಾಗಿದೆ. ಜಿಯೋ ಸಿನಿಮಾ ಓಟಿಟಿ ವೇದಿಕೆ 147 ಕೋಟಿ ವೀಕ್ಷಣೆಯನ್ನು ವಾರಾಂತ್ಯದ ಪಂದ್ಯಕ್ಕೆ ಗಳಿಸಿದ್ದು, ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್ನ ಅತಿ ಹೆಚ್ಚು ಆರಂಭಿಕ ವಾರಾಂತ್ಯದ ವೀಕ್ಷಣೆಯ ದಾಖಲೆ ಇದಾಗಿದೆ.
"ಈ ಅಸಾಧಾರಣ ಸಂಖ್ಯೆ ದೇಶದಾದ್ಯಂತ ಡಿಜಿಟಲ್ ಕ್ರಾಂತಿಗೆ ಸಾಕ್ಷಿಯಾಗಿದೆ. ಡಿಜಿಟಲ್ ಮಾಧ್ಯಮ ಪ್ರೇಕ್ಷಕರನ್ನು ಗುರಿಯಾಗಿಸುತ್ತದೆ, ಸಂವಾದ ಮಾಡಲು ಸಾಧ್ಯವಾಗುತ್ತದೆ ಮತ್ತು ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ಇದು ಪಾರಂಪರಿಕ ಮಾಧ್ಯಮದಿಂದ ಭಿನ್ನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಡಿಜಿಟಲ್ ಮಾಧ್ಯಮದಲ್ಲಿ ವೀಕ್ಷಕರ ಸಂಖ್ಯೆಯನ್ನು ಸ್ಪಷ್ಟವಾಗಿ ಅರಿಯಲು ಸಾಧ್ಯವಿದೆ" ಎಂದು ವಯಾಕಾಂ18 ಸ್ಪೋರ್ಟ್ಸ್ ಸಿಇಒ ಅನಿಲ್ ಜಯರಾಜ್ ಹೇಳಿದ್ದಾರೆ.
"ಪ್ರಾದೇಶಿಕ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಿರುವುದು ಸಹ ಹೆಚ್ಚು ಜನರನ್ನು ತಲುಪಲು ಕಾರಣವಾಗಿದೆ. ಇದರಿಂದ ಎಲ್ಲ ಸ್ಥಳೀಯ ಭಾಷಿಕರಿಗೆ ತಮ್ಮ ನೆಚ್ಚಿನ ಕ್ರೀಡೆಯನ್ನು ತಮ್ಮ ಭಾಷೆಯಲ್ಲೇ ವೀಕ್ಷಣೆ ಸಾಧ್ಯವಾಗಿದೆ. ಭೋಜ್‌ಪುರಿ, ಪಂಜಾಬಿ, ಒರಿಯಾ ಮತ್ತು ಗುಜರಾತಿ ಭಾಷೆಗಳಿಗೆ ಹೆಚ್ಚಿನ ವೀಕ್ಷಣೆ ದೊರೆತಿದೆ. ಟಾಟಾ ಐಪಿಎಲ್ನ್ನು ನಮ್ಮ ವೇದಿಕೆಯ ಮುಖಾಂತರ ವೀಕ್ಷಿಸುವ ಪ್ರೇಕ್ಷಕರಿಗೆ ಇನ್ನಷ್ಟೂ ಉತ್ತಮ ಮನರಂಜನೆ ನೀಡಲು ನಾವು ಬಯಸುತ್ತೇವೆ. ನಮ್ಮ ಎಲ್ಲ ಪ್ರಾಯೋಜಕರು, ಜಾಹೀರಾತುದಾರರು ಮತ್ತು ಪಾಲುದಾರರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ" ಎಂದು ಅನಿಲ್ ಜಯರಾಜ್ ತಿಳಿಸಿದರು.
ಅಹಮದಾಬಾದ್ನಲ್ಲಿ ನಡೆದ ಮೊದಲ ಉದ್ಘಾಟನಾ ಚೆನ್ನೈ-ಗುಜತರಾತ್ ಪಂದ್ಯದಲ್ಲಿ 1.6 ಕೋಟಿ ವೀಕ್ಷಣೆ ಪಡೆದು ದಾಖಲೆ ನಿರ್ಮಾಣವಾಗಿತ್ತು. ಜೊತೆಗೆ ಒಂದೇ ದಿನ 2.5 ಕೋಟಿ ಜಿಯೋ ಸಿನಿಮಾ ಅಪ್ಲಿಕೇಶನ್ ಡೌನ್‌ಲೋಡ್ ಆಗಿದ್ದು, ಇದು ಸಹ ದಾಖಲೆಯಾಗಿದೆ. ಮೊದಲ ವಾರದಲ್ಲಿ 10 ಕೋಟಿಗಿಂತ ಹೆಚ್ಚು ಪ್ರೇಕ್ಷಕರು, 5 ಕೋಟಿಗಿಂತ ಹೆಚ್ಚು ಹೊಸ ನೋಡುಗರನ್ನು ಜಿಯೋ ಸಿನಿಮಾ ಮುಟ್ಟಿದೆ. 4ಕೆ ಅನುಭವದ ವಿಡಿಯೋ ಸ್ಪಷ್ಟಿಕರಣದ ಜೊತೆಗೆ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ, ಹೈಪ್ ಮೋಡ್ ಮತ್ತು ಮಲ್ಟಿ-ಕ್ಯಾಮ್ ಸೆಟಪ್‌ನಂತಹ ವೈಶಿಷ್ಟ್ಯಗಳನ್ನು ಅಪ್ಲಿಕೇಶನ್ ಹೊಂದಿದೆ.
ವೀಕ್ಷಕರಿಗೆ ಇನ್ನಷ್ಟೂ ಉತ್ತಮ ಅನುಭವವನ್ನು ಡಿಜಿಟಲ್ ಸ್ಕ್ರೀನ್ ನಲ್ಲಿ ನೀಡಲು ವಾರಕ್ಕೊಂದು ಹೊಸ ಬದಲಾವಣೆಗಳನ್ನು ಮಾಡುವ ಬಗ್ಗೆ ಜಿಯೋ ಸಿನಿಮಾ ತಿಳಿಸಿದೆ. ಈ ಮೂಲಕ ಇನ್ನಷ್ಟು ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನವನ್ನು ಒಟಿಟಿ ವೇದಿಕೆ ಮಾಡುತ್ತಿದೆ.
ಇದನ್ನೂ ಓದಿ:IPL 2023: ತವರಿನಲ್ಲಿ ಮೊದಲ ಜಯದ ಹಂಬಲದಲ್ಲಿ ಧೋನಿ ಪಡೆ.. ಚೆಪಾಕ್ನಲ್ಲಿ "ಸೂಪರ್"ಗಳ ಹಣಾಹಣಿ