ಅಹಮದಾಬಾದ್ (ಗುಜರಾತ್):ಶುಭಮನ್ ಗಿಲ್, ಅಭಿನವ್ ಮನೋಹರ್ ಮತ್ತು ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ಬಲದಿಂದ ಕೊನೆ ಐದು ಓವರ್ನಲ್ಲಿ 77 ರನ್ ಗಳಿಸಿದ ಗುಜರಾತ್ ಟೈಟಾನ್ಸ್ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿತು. ಆರಂಭಿಕ ಬೃಹತ್ ಜೊತೆಯಾಟದ ಕೊರತೆಯ ನಡುವೆ ಗುಜರಾತ್ ಕೊನೆಯ ಓವರ್ಗಳಲ್ಲಿ ಕಮ್ ಬ್ಯಾಕ್ ಮಾಡಿದ್ದು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ತಂಡಕ್ಕೆ ಆಸರೆ ಆದ ಕಾರಣ ಮುಂಬೈಗೆ 208 ರನ್ನ ಗುರಿ ನೀಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಗುಜರಾತ್ಗೆ ಅರಂಭಿಕ ವೃದ್ಧಿಮಾನ್ ಸಹಾರ ವಿಕೆಟ್ ನಷ್ಟವಾಯಿತು. ಕೇವಲ ನಾಲ್ಕು ರನ್ಗೆ ಔಟ್ ಆದರು. ಅವರ ನಂತರ ಬಂದ ನಾಯಕ ಹಾರ್ದಿಕ್ ಪಾಂಡ್ಯ ಶುಭಮನ್ ಗಿಲ್ ಸಾಥ್ ನೀಡಲಿಲ್ಲ. ಹಾರ್ದಿಕ್ 13 ರನ್ ಔಟ್ ಆದರೆ ವಿಜಯ್ ಶಂಕರ್ 19 ರನ್ ವಿಕೆಟ್ ಒಪ್ಪಿಸಿದರು.
ನಂತರ ಬಂದ ಡೇವಿಡ್ ಮಿಲ್ಲರ್ ಮತ್ತು ಅಭಿನವ್ ಮನೋಹರ್ ಉತ್ತಮ ಜೊತೆಯಾಟ ಮಾಡಿದರು. ಈ ಇಬ್ಬರ ಜೋಡಿ ರನ್ ಮಳೆಗೈದಿತು. ಪಿಯೂಷ್ ಚಾವ್ಲಾ ಅವರ 15ನೇ ಓವರ್ನಲ್ಲಿ 16 ರನ್ ತಂದರು. ಅಲ್ಲಿಂದ ತಂಡದ ಮೊತ್ತಕ್ಕೆ ವೇಗ ಹೆಚ್ಚಾಯಿತು. 17ನೇ ಓವರ್ನಲ್ಲಿ ಮೆರಿಡಿತ್ಗೆ 13 ರನ್ ಮತ್ತು 18ನೇ ಓವರ್ನಲ್ಲಿ ಕ್ಯಾಮೆರಾನ್ ಗ್ರೀನ್ಗೆ 22 ರನ್ ಮಿಲ್ಲರ್ ಮನೋಹರ್ ಜೋಡಿ ಚಚ್ಚಿತು. ಇದರಿಂದ 14 ಓವರ್ ಅಂತ್ಯಕ್ಕೆ 113 ಇದ್ದ ಸ್ಕೋರ್ 172ಕ್ಕೆ ಏರಿತ್ತು.
ಅಭಿನವ್ ಮನೋಹರ್ 21 ಬಾಲ್ನಲ್ಲಿ 3 ಸಿಕ್ಸ್ ಮತ್ತು ಬೌಂಡರಿಯಿಂದ 42 ರನ್ ಗಳಿಸಿ ಔಟ್ ಆದರೆ, ಡೇವಿಡ್ ಮಿಲ್ಲರ್ 22 ಬಾಲ್ನಲ್ಲಿ 4 ಸಿಕ್ಸ್ ಮತ್ತು 2 ಬೌಂಡರಿಯಿಂದ 46 ರನ್ ಕಲೆಹಾಕಿದರು. ಕೊನೆಯಲ್ಲಿ ತೆವಾಟಿಯ ಸಹ ಅಬ್ಬರಿಸಿದರು. 5 ಬಾಲ್ ಎದುರಿಸಿ 3 ಸಿಕ್ಸರ್ನಿಂದ 20 ರನ್ ಜೋಡಿಸಿದರು. ಇವರ ಡೆತ್ ಓವರ್ನ ಬ್ಯಾಟಿಂಗ್ ಅಬ್ಬರಕ್ಕೆ ಗುಜರಾತ್ ಮೊತ್ತ 207ಕ್ಕೆ ಏರಿತು.