ಕರ್ನಾಟಕ

karnataka

ETV Bharat / sports

ಅಕ್ಷರ್​-ವಾರ್ನರ್​ ಜೊತೆಯಾಟ; ಮುಂಬೈಗೆ 173 ರನ್​ ಸಾಧಾರಣ ಗುರಿ

ನವದೆಹಲಿಯ ಫಿರೋಜ್ ಶಾ ಕೋಟ್ಲಾದಲ್ಲಿ ನಡೆಯುತ್ತಿರುವ ಐಪಿಎಲ್​ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಫೀಲ್ಡಿಂಗ್‌ ಆಯ್ದುಕೊಂಡಿತು.

TATA IPL 2023  Delhi Capitals vs Mumbai Indians Match update
TATA IPL 2023 Delhi Capitals vs Mumbai Indians Match update

By

Published : Apr 11, 2023, 7:17 PM IST

Updated : Apr 11, 2023, 9:56 PM IST

ನವದೆಹಲಿ:ವಾರ್ನರ್​ ಮತ್ತು ಅಕ್ಷರ್​ ಪಟೇಲ್ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್​​ ಮುಂಬೈ ಇಂಡಿಯನ್ಸ್​ಗೆ 173 ರನ್​ನ ಸ್ಪರ್ಧಾತ್ಮಕ ಗುರಿ ನೀಡಿದೆ. ಅನುಭವಿ ಸ್ಪಿನ್ನರ್​ ಪಿಯೂಶ್​ ಚಾವ್ಲಾ ಡೆಲ್ಲಿಯ ಪ್ರಮುಖ ಮೂರು ವಿಕೆಟ್​ಗಳನ್ನು ಕಿತ್ತು ಬೃಹತ್​ ರನ್​ಗೆ ಕಡಿವಾಣ ಹಾಕಿದರು. ವಾರ್ನರ್​ 51 ಮತ್ತು ಅಕ್ಷರ್​ ಪಟೇಲ್​ 54 ರನ್‌ಗಳ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್​ 10 ವಿಕೆಟ್​ ನಷ್ಟಕ್ಕೆ 172 ರನ್​ ಗಳಿಸಿತು.

ಟಾಸ್​ ಸೋತು ಬ್ಯಾಟಿಂಗ್​ಗಿಳಿದ ಡೆಲ್ಲಿ ಮತ್ತೆ ಬೃಹತ್​ ಜೊತೆಯಾಟದ ಕೊರತೆ ಎದುರಿಸಿತು. ಆರಂಭಿಕ ಡೇವಿಡ್​ ವಾರ್ನರ್​ ಕಳೆದ ಪಂದ್ಯಗಳ ರೀತಿಯಲ್ಲೇ ಕ್ರೀಸ್​ ಕಚ್ಚಿ ನಿಂತರೆ ಇನ್ನೊಂದು ಬದಿಯಲ್ಲಿ ವಿಕೆಟ್​ಗಳು ಉರುಳುತ್ತಿದ್ದವು. ಆರಂಭಿಕ ಪೃಥ್ವಿ ಶಾ 15 ರನ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಮನೀಷ್​ ಪಾಂಡೆ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿ 26 ರನ್​ ಪೇರಿಸಿದರು. ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಯಶ್​ ದುಳ್​ 2 ರನ್​ಗೆ ಔಟ್​ ಆದರು. ಅವರ ಬೆನ್ನಲ್ಲೇ ರೋವ್‌ಮನ್ ಪೊವೆಲ್ (4), ಲಲಿತ್ ಯಾದವ್(2) ವಿಕೆಟ್​ ಒಪ್ಪಿಸಿದರು.

ಅಕ್ಷರ್ ಐಪಿಎಲ್​ ಚೊಚ್ಚಲ ಅರ್ಧಶತಕ: ಆಲ್​ ರೌಂಡರ್ ಅಕ್ಷರ್​ ಪಟೇಲ್​ ಅಬ್ಬರದ ಬ್ಯಾಟಿಂಗ್​ ಮಾಡಿ ಐಪಿಎಲ್​ನ ಚೊಚ್ಚಲ ಅರ್ಧಶತಕ ದಾಖಲಿಸಿದರು. ​25 ಬಾಲ್​ ಎದುರಿಸಿದ ಅವರು 5 ಸಿಕ್ಸ್​ ಮತ್ತು 4 ಬೌಂಡರಿಯಿಂದ 54 ರನ್​ ಗಳಿಸಿದರು. ಇವರು ನಾಯಕ ವಾರ್ನರ್​ ಜೊತೆ ಸೇರಿ 50 ರನ್​ ಜೊತೆಯಾಟ ನೀಡಿದರು.

ಡೇವಿಡ್​ ವಾರ್ನರ್​ ಏಕಾಂಗಿ ಆಟ: ನಾಲ್ಕನೇ ಪಂದ್ಯದಲ್ಲೂ ಡೇವಿಡ್​ ವಾರ್ನರ್​ ಏಕಾಂಗಿ ಆಟ ಆಡಿದರು. ಇಂದು ಅವರು ಐಪಿಎಲ್​ನ 58ನೇ ಅರ್ಧಶತಕ ಪೂರೈಸಿದರು. 47 ಬಾಲ್​ ಎದುರಿಸಿದ ಅವರು 6 ಬೌಂಡರಿ ಸಹಿತ 51 ರನ್​ ಗಳಿಸಿದರು. ಅಭಿಷೇಕ್ ಪೊರೆಲ್ (1​), ಕುಲದೀಪ್ ಯಾದವ್ (0), ಅನ್ರಿಚ್ ನಾರ್ಟ್ಜೆ (5), ಮುಸ್ತಾಫಿಜುರ್ ರೆಹಮಾನ್ (1*) ಬೇಗ ವಿಕೆಟ್​ ಕೊಟ್ಟರು. ಇದರಿಂದ ಡೆಲ್ಲಿ 172 ಕ್ಕೆ ಆಲ್​ ಔಟ್​ ಆಯಿತು.

ಮುಂಬೈ ಪರ ಜೇಸನ್ ಬೆಹ್ರೆಂಡಾರ್ಫ್ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್​, ರಿಲೆ ಮೆರೆಡಿತ್ 2 ಮತ್ತು ಹೃತಿಕ್ ಶೋಕೀನ್ 1 ವಿಕೆಟ್​ ಪಡೆದರು.

ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್​:ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್​ ಕೀಪರ್​), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್

ಮುಂಬೈ ಇಂಡಿಯನ್ಸ್​:ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್​ ಕೀಪರ್​), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್

ಇದನ್ನೂ ಓದಿ:IPL 2023: ಮೊದಲ ಗೆಲುವಿಗಾಗಿ ಡೆಲ್ಲಿ - ಮುಂಬೈ ಫೈಟ್

Last Updated : Apr 11, 2023, 9:56 PM IST

ABOUT THE AUTHOR

...view details