ಕರ್ನಾಟಕ

karnataka

ETV Bharat / sports

T20 ವಿಶ್ವಕಪ್​: ಹಾರ್ದಿಕ್ ​​- ವರುಣ್​​ ಗಾಯದ ಸಮಸ್ಯೆ: ಮಾರ್ಗದರ್ಶಕ ಧೋನಿ ಮೇಲೆ ಎಲ್ಲರ ಕಣ್ಣು!

ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್​ಗಾಗಿ ಈಗಾಗಲೇ ಘೋಷಣೆಯಾಗಿದ್ದು, ತಂಡದಲ್ಲಿರುವ ಕೆಲ ಪ್ಲೇಯರ್ಸ್​ಗಳಲ್ಲಿ ಗಾಯದ ಸಮಸ್ಯೆ ಹಾಗೂ ಕಳಪೆ ಪ್ರದರ್ಶನ ನೀಡುತ್ತಿರುವುದು ಇದೀಗ ತಲೆನೋವಾಗಿದೆ.

T20 World Cup
T20 World Cup

By

Published : Oct 9, 2021, 3:52 PM IST

Updated : Oct 9, 2021, 4:04 PM IST

ನವದೆಹಲಿ: ಐಸಿಸಿ ಟಿ -20 ವಿಶ್ವಕಪ್​ ಟೂರ್ನಿಗೋಸ್ಕರ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದ್ದು, ಈ ತಂಡದಲ್ಲಿರುವ ಅನೇಕ ಪ್ರತಿಭೆಗಳು ಈಗಾಗಲೇ ಐಪಿಎಲ್​​ನಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿವೆ. ಆದರೆ, ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ಹಾಗೂ ವರುಣ್​ ಚಕ್ರವರ್ತಿ ಗಾಯದ ಸಮಸ್ಯೆ ಇದೀಗ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಐಪಿಎಲ್​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಕಣಕ್ಕಿಳಿಯುತ್ತಿರುವ ಹಾರ್ದಿಕ್ ಪಾಂಡ್ಯ ಬ್ಯಾಟ್​ನಿಂದ ರನ್​​ ಹರಿದು ಬರುತ್ತಿಲ್ಲ. ಕೋಲ್ಕತ್ತಾ ನೈಟ್​ ರೈಡರ್ಸ್​​ ತಂಡದ ವರುಣ್​ ಚಕ್ರವರ್ತಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಗಾಯದ ಸಮಸ್ಯೆಗೊಳಗಾಗಿದ್ದು, ಮಂಡಿನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ವಿಶ್ವಕಪ್​ ತಂಡಕ್ಕೆ ಮಾರ್ಗದರ್ಶಕರಾಗಿ ಆಯ್ಕೆಯಾಗಿರುವ ಮಹೇಂದ್ರ ಸಿಂಗ್​ ಧೋನಿ ಮೇಲೆ ಇದೀಗ ಎಲ್ಲರ ಕಣ್ಣು ನೆಟ್ಟಿದೆ.

ಇದನ್ನೂ ಓದಿರಿ:ಹೆಟೆರೊ ಡ್ರಗ್ಸ್​ ಕಂಪನಿ ಮೇಲೆ IT ದಾಳಿ.. 142 ಕೋಟಿ ರೂ. ನಗದು, 550 ಕೋಟಿ ಲೆಕ್ಕವಿಲ್ಲದ ಆದಾಯ ಪತ್ತೆ!

ವಿಶ್ವಕಪ್​​ಗಾಗಿ ಘೋಷಣೆಯಾಗಿರುವ ತಂಡಗಳಲ್ಲಿ ಬದಲಾವಣೆ ಮಾಡಲು ಅಕ್ಟೋಬರ್​​ 10ರವರೆಗೆ ಸಮಯವಕಾಶ ನೀಡಲಾಗಿದ್ದು, ಗಾಯಗೊಂಡಿರುವ ವರುಣ್​​ ಚಕ್ರವರ್ತಿ ಹಾಗೂ ಕಳಪೆ ಪ್ರದರ್ಶನ ನೀಡುತ್ತಿರುವ ಹಾರ್ದಿಕ್​ ಪಾಂಡ್ಯ ಸ್ಥಾನಕ್ಕೆ ಬೇರೆ ಆಟಗಾರರ ಆಯ್ಕೆ ಮಾಡುವ ಮಾತುಗಳು ಸಹ ಕೇಳಿ ಬರುತ್ತಿವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಇಂದು ಮಹತ್ವದ ಸಭೆ ನಡೆಸಲಿದ್ದು, ನಿರ್ಧಾರ ಕೂಡ ಹೊರಬೀಳುವ ಸಾಧ್ಯತೆ ಇದೆ.

ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವ ಆಟಗಾರರ ಪ್ರದರ್ಶನದ ಬಗ್ಗೆ ಇದೀಗ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಕೋಚ್​ ರವಿಶಾಸ್ತ್ರಿ ಹಾಗೂ ಮಾರ್ಗದರ್ಶಕರಾಗಿರುವ ಎಂ.ಎಸ್ ಧೋನಿ ಚರ್ಚೆ ನಡೆಸುವ ಸಾಧ್ಯತೆ ಇದೆ. ವರುಣ್​ ಚಕ್ರವರ್ತಿ ಕೇವಲ 4 ಓವರ್​ ಮಾಡುವ ಕಾರಣ ಅವರು ಹೆಚ್ಚಿನ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇಲ್ಲ.

ಆದರೆ, ಮ್ಯಾಚ್​ ವಿನ್ನರ್​, ಆಲ್​ರೌಂಡರ್​ ಆಗಿರುವ ಹಾರ್ದಿಕ್ ಪಾಂಡ್ಯ ಪ್ರದರ್ಶನ ಇದೀಗ ನಿರ್ಣಾಯಕವಾಗಿದ್ದು, ಅವರ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಮಹೇಂದ್ರ ಸಿಂಗ್ ಧೋನಿ ನೀಡುವ ಮಾರ್ಗದರ್ಶನ ಇಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುತ್ತಿರುವ ಹಾರ್ದಿಕ್​, ಇಲ್ಲಿಯವರೆಗೆ ಬೌಲಿಂಗ್ ಮಾಡಿಲ್ಲ. ಆದರೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಮುಂದಿನ ವಾರದಿಂದ ಅವರು ಬೌಲ್​ ಮಾಡಬಹುದು ಎಂಬ ಮಾತು ಕೇಳಿ ಬಂದಿವೆ.

ತಂಡಕ್ಕೆ ಇಷ್ಟು ದಿನ ದೊಡ್ಡ ತಲೆನೋವಾಗಿದ್ದ ಸೂರ್ಯಕುಮಾರ್ ಯಾದವ್​ ಹಾಗೂ ಇಶನ್​ ಕಿಶನ್ ಸದ್ಯ ಲಯ ಕಂಡುಕೊಂಡಿದ್ದು, ತಂಡಕ್ಕೆ ಮತ್ತಷ್ಟು ಶಕ್ತಿ ನೀಡಿದೆ.

Last Updated : Oct 9, 2021, 4:04 PM IST

ABOUT THE AUTHOR

...view details