ಚೆನ್ನೈ:ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಬಗ್ಗೆ ತಂಡದ ನಾಯಕ ರೋಹಿತ್ ಶರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೂರ್ಯಕುಮಾರ್ ನಿರ್ಭಯವಾಗಿ ಬ್ಯಾಟ್ ಬೀಸುತ್ತಾರೆ: ರೋಹಿತ್ ಶರ್ಮಾ - ಕೆಕೆಆರ್
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ತನ್ನ ಎರಡನೇ ಪಂದ್ಯದಲ್ಲಿ ನಿಗದಿತ 20 ಓವರ್ಗಳಲ್ಲಿ 152 ರನ್ಗಳಿಗೆ ಆಲೌಟ್ ಆಗಿತ್ತು. ಮುಂಬೈ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದ ಸೂರ್ಯಕುಮಾರ್ ಯಾದವ್ ಅರ್ಧಶತಕ ಸಿಡಿಸಿ ಮಿಂಚಿದ್ದರು. ಇದು ಅವರ ಐಪಿಎಲ್ ಕರಿಯರ್ನ 13ನೇ ಅರ್ಧಶತಕವೂ ಹೌದು.
ರೋಹಿತ್ ಶರ್ಮಾ-ಸೂರ್ಯಕುಮಾರ್
ಸೂರ್ಯ ಟೀಮ್ ಇಂಡಿಯಾಗೆ ಆಡಿದ ಮೇಲೆ ಅವರ ಆಟದ ಶೈಲಿ ಬದಲಾಗಿದೆ. ಅವರ ಕಾನ್ಫಿಡೆನ್ಸ್ ಲೆವೆಲ್ ಬದಲಾಗಿದೆ. ಇಂತಹ ಕಠಿಣ ಪಿಚ್ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಆದರೆ ಅವರು ಸುಲಲಿತವಾಗಿ ಬ್ಯಾಟ್ ಬೀಸಿದರು. ಅವರು ಬ್ಯಾಟ್ ಮಾಡುವಾಗ ಯಾವುದೇ ತೆರನಾದ ಅಂಜಿಕೆ, ಅಳುಕು ಇರಲಿಲ್ಲ. ಅವರು ನಿರ್ಭಯವಾಗಿ ಬ್ಯಾಟ್ ಬೀಸುತ್ತಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಸೂರ್ಯಕುಮಾರ್ ಸಿಕ್ಸರ್ಗೆ ಶಾಕ್ ಆದ ಹಾರ್ದಿಕ್ ಪಾಂಡ್ಯ: ವಿಡಿಯೋ ನೋಡಿ