ಮುಂಬೈ:ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಇಂದು ನಡೆಯುವ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಕ್ಷೇತ್ರ ರಕ್ಷಣೆಯನ್ನು ಆರಿಸಿಕೊಂಡಿದೆ. ಉಮ್ರಾನ್ ಮಲಿಕ್, ಭುವನೇಶ್ವರ್ ಕುಮಾರ್, ಟಿ. ನಟರಾಜನ್, ಮಾರ್ಕೊ ಜಾನ್ಸನ್ರಂತಹ ಬೌಲಿಂಗ್ ಪಡೆಯೇ ಹೈದರಾಬಾದ್ನ ಬಲವಾಗಿದೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕಳೆದ ಪಂದ್ಯದಲ್ಲಿ ಸೋಲು ಕಂಡರೂ ಭರ್ಜರಿ ಪೈಪೋಟಿ ನೀಡಿತ್ತು.
ಆಡಿರುವ 8 ಪಂದ್ಯಗಳಲ್ಲಿ ಸತತವಾಗಿ 5 ರಲ್ಲಿ ಗೆಲುವು ಕಂಡಿದ್ದ ಹೈದರಾಬಾದ್ನ ಗೆಲುವಿನ ಓಟಕ್ಕೆ ಗುಜರಾತ್ ಟೈಟಾನ್ಸ್ ಬ್ರೇಕ್ ಹಾಕಿತ್ತು. ಈ ಐಪಿಎಲ್ ಸೀಸನ್ನಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಇಂದಿನ ಪಂದ್ಯದಲ್ಲಿ ಹೈದರಾಬಾದ್ ಗೆಲ್ಲುವ ನೆಚ್ಚಿನ ತಂಡವಾಗಿದೆ.
ಕ್ಯಾಪ್ಟನ್ಸಿಗೆ ಮರಳಿದ ಧೋನಿ:ಇನ್ನು 4 ಬಾರಿಯ ಚಾಂಪಿಯನ್ ತಂಡವಾಗಿರುವ ಸಿಎಸ್ಕೆ ಈ ಅವತರಣಿಕೆಯಲ್ಲಿ ಕಳಪೆ ಸಾಧನೆ ಮಾಡಿದೆ. ಲೀಗ್ ಆರಂಭಕ್ಕೂ ಮುನ್ನ ಯಶಸ್ವಿ ಕ್ಯಾಪ್ಟನ್ ಆಗಿದ್ದ ಮಹೇಂದ್ರ ಸಿಂಗ್ ಧೋನಿ, ಆಲ್ರೌಂಡರ್ ರವೀಂದ್ರ ಜಡೇಜಾಗೆ ನಾಯಕತ್ವ ಬಿಟ್ಟು ಕೊಟ್ಟಿದ್ದರು. ಆದರೆ, ಇದು ಫಲ ನೀಡಲಿಲ್ಲ.