ಕರ್ನಾಟಕ

karnataka

ETV Bharat / sports

ಪವರ್​ ಪ್ಲೇನಲ್ಲಿ ಎಸ್​ಆರ್​ಹೆಚ್​ ಆದಿಲ್​ ರಶೀದ್​ಗೆ ಬೌಲಿಂಗ್​ ಕೊಡಬೇಕು: ಅನಿಲ್​ ಕುಂಬ್ಳೆ​​

ಸನ್‌ರೈಸರ್ಸ್ ಹೈದರಾಬಾದ್ ಕಳೆದ ಸಿಸನ್​ ಸೇರಿ ಈ ವರೆಗಿನ 9 ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದುಕೊಂಡಿದೆ. ಈ ಆವೃತ್ತಿಯ 2 ರಲ್ಲಿ ಎರಡನ್ನೂ ಬ್ಯಾಟಿಂಗ್​ ವೈಫಲ್ಯದಿಂದ ಸೋತಿದೆ.

Anil Kumble
ಅನಿಲ್​ ಕುಂಬ್ಳೆ​​

By

Published : Apr 8, 2023, 6:48 PM IST

ನವದೆಹಲಿ: ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗ್ರಾಫ್ ಕುಸಿಯುತ್ತಿರುವ ಬಗ್ಗೆ ಭಾರತದ ಅನುಭವಿ ಹಾಗೂ ಮಾಜಿ ನಾಯಕ ಅನಿಲ್ ಕುಂಬ್ಳೆ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2023 ರಲ್ಲಿ ದಕ್ಷಿಣ ಆಫ್ರಿಕಾದ ಆಟಗಾರ ಐಡನ್ ಮಾರ್ಕ್ರಾಮ್ ಅವರ ನಾಯಕತ್ವದಲ್ಲಿ ಒಂದು ಪಂದ್ಯ ಹಾಗೂ ಭವನೇಶ್ವರ್​ ಮುಂದಾಳತ್ವದಲ್ಲಿ ಒಂದು ಸೇರಿ ಒಟ್ಟು ಎರಡರಲ್ಲಿ ಸೋಲು ಕಂಡಿದೆ. ಅಂಕ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದೆ.

ಈ ಫ್ರಾಂಚೈಸಿ ಈ ಲೀಗ್‌ನಲ್ಲಿ ಆಡಿದ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಕಳೆದ ವರ್ಷವೂ ಐಪಿಎಲ್‌ನಲ್ಲಿ ಹೈದರಾಬಾದ್‌ನ ಪ್ರದರ್ಶನ ಉತ್ತಮವಾಗಿಲ್ಲ ಮತ್ತು ಈ ಸೀಸನ್‌ನಲ್ಲಿಯೂ ಈ ತಂಡವು ಆರಂಭದಿಂದಲೇ ಎಡವುತ್ತಿದೆ. ಅನಿಲ್ ಕುಂಬ್ಳೆ ಸನ್​ ರೈಸರ್ಸ್​ ಬ್ಯಾಟಿಂಗ್​ನಲ್ಲಿ ಸುಧಾರಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದ್ದಾರೆ.

ಕಳೆದ ಐಪಿಎಲ್‌ನಿಂದಲೂ ಸನ್‌ರೈಸರ್ಸ್ ಹೈದರಾಬಾದ್‌ನ ಕಳಪೆ ಫಾರ್ಮ್ ಮುಂದುವರಿದಿದೆ. ಐಪಿಎಲ್ 2022 ರಲ್ಲಿ ಕಳೆದ 7 ಪಂದ್ಯಗಳಲ್ಲಿ ಎಸ್​ಆರ್​ ಹೆಚ್​ ಒಂದು ಪಂದ್ಯವನ್ನು ಗೆದ್ದಿದೆ. ಕಳೆದ ಋತುವಿನಲ್ಲಿ ನಾಯಕನಾಗಿ ಕೇನ್ ವಿಲಿಯಮ್ಸನ್ ಇದ್ದರೂ ಹೈದರಾಬಾದ್‌ಗೆ ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಈ ವರ್ಷ ಫ್ರಾಂಚೈಸ್ ದಕ್ಷಿಣ ಆಫ್ರಿಕಾದ ಆಟಗಾರ ಏಡೆನ್ ಮಾರ್ಕ್ರಾಮ್ ಅವರನ್ನು ಹೊಸ ನಾಯಕನನ್ನಾಗಿ ಆಯ್ಕೆ ಮಾಡಿದೆ.

ಆದರೆ ಇಲ್ಲಿಯವರೆಗೆ ತಂಡದ ಸ್ಥಿತಿ ಹಾಗೆಯೇ ಇದೆ. ಐಪಿಎಲ್ 2023 ರಲ್ಲಿ ಹೈದರಾಬಾದ್ ಕೇವಲ ಎರಡು ಪಂದ್ಯಗಳನ್ನು ಆಡಿದೆ ಮತ್ತು ಎರಡೂ ಪಂದ್ಯಗಳಲ್ಲಿ ಸೋತಿದೆ. ಕಳೆದ ಸೀಸನ್ ಮತ್ತು 2023 ರ ಈ ಲೀಗ್‌ನಲ್ಲಿ ಹೈದರಾಬಾದ್ ಇದುವರೆಗೆ 9 ಪಂದ್ಯಗಳಲ್ಲಿ 1 ಪಂದ್ಯವನ್ನು ಮಾತ್ರ ಗೆದ್ದಿದೆ.

ಬ್ಯಾಟಿಂಗ್​ ವೈಫಲ್ಯ:"ಇದು ಉತ್ತಮ ಆರಂಭವಲ್ಲ. ನಾನು ಅವರನ್ನು ನನ್ನ ಟಾಪ್-4 ರಲ್ಲಿ ನೋಡಲು ಬಯಸುತ್ತೇನೆ. ಸನ್​ ರೈಸರ್ಸ್​ ಉತ್ತಮ ತಂಡವಾಗಿದ್ದು, ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ಎರಡೂ ಪಂದ್ಯಗಳಲ್ಲಿ ಬ್ಯಾಟಿಂಗ್​ ಅವರನ್ನು ನಿರಾಸೆಗೊಳಿಸಿದೆ. ತವರು ನೆಲದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ ಅವರು ಸಾಕಷ್ಟು ರನ್ ಗಳಿಸಲಿಲ್ಲ" ಎಂದು ಸಂದರ್ಶನದಲ್ಲಿ ಅನಿಲ್​ ಕುಂಬ್ಳೆ ಹೇಳಿಕೊಂಡಿದ್ದಾರೆ.

ಆದಿಲ್​ ರಶೀದ್​ರನ್ನೂ ಸೂಕ್ತವಾಗಿ ಬಳಸುತ್ತಿಲ್ಲ:ರಾಜಸ್ಥಾನ ವಿರುದ್ಧ ಆಡಿದಾಗ ಜೋಸ್ ಬಟ್ಲರ್ ವಿರುದ್ಧ ಆದಿಲ್ ರಶೀದ್ ಅವರನ್ನು ಕರೆತರದೆ ಟ್ರಿಕ್ ತಪ್ಪಿಸಿದರು. ಲೆಗ್ ಸ್ಪಿನ್ನರ್‌ ಬಟ್ಲರ್ ಕಷ್ಟ ಪಡುತ್ತಾರೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇನ್ನಿಂಗ್ಸ್‌ನ ಆರಂಭದಲ್ಲಿ ಲೆಗ್ ಸ್ಪಿನ್ನರ್‌ಗಳು ಬಂದು ಬೌಲಿಂಗ್ ಮಾಡುವುದು ರನ್​ ಕಡಿವಾಣಕ್ಕೂ ಸಹಕಾರಿ. ಮೊದಲ ಆರು ಓವರ್​ನಲ್ಲಿ ಅವರಿಗೆ ಅವಕಾಶವೇ ನೀಡದಿರುವುದು ತಪ್ಪಾಗುತ್ತದೆ. 121 ರನ್​ಗಳ ಕಡಿಮೆ ಮೊತ್ತ ಇದ್ದಾಗಲಾದರೂ ರಶೀದ್​ ಅವರನ್ನು ಆರಂಭಿಕ ಓವರ್​ಗಳಲ್ಲಿ ತಂದಿದ್ದರೆ ಪರಿಣಾಮ ಬೀರುತ್ತಿದ್ದರು ಎಂಬುದು ಕುಬ್ಳೆ ಅಭಿಪ್ರಾಯವಾಗಿದೆ.

ಇದನ್ನೂ ಓದಿ:RR vs DC : ಆರಂಭಿಕ ಆಟಗಾರರ ಅರ್ಧಶತಕ.. ಡೆಲ್ಲಿಗೆ 200 ರನ್​ಗಳ ಬೃಹತ್​ ಗುರಿ

ABOUT THE AUTHOR

...view details